ಜಗಳೂರು ಗಡಿಯಲ್ಲಿ ಕರಡಿ ಪ್ರತ್ಯಕ್ಷ
Team Udayavani, Jan 27, 2020, 11:30 AM IST
ಭರಮಸಾಗರ: ಚಿತ್ರದುರ್ಗ ತಾಲೂಕಿನ ಗಡಿ ಗ್ರಾಮ, ಜಗಳೂರು ತಾಲೂಕು ಸಮೀಪದ ಆಜಾದ್ ನಗರದಲ್ಲಿ ಭಾನುವಾರ ಮಧ್ಯಾಹ್ನ ಕರಡಿ ಕಾಣಿಸಿಕೊಂಡಿದ್ದು, ರೇಷ್ಮೆ ಜಮೀನಿನ ಬಳಿಯ ಬೇವಿನ ಮರವೇರಿ ಕುಳಿತು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಭಾನುವಾರ ಮಧ್ಯಾಹ್ನ ರೇಷ್ಮೆ ಜಮೀನಿನಲ್ಲಿ ನೀರು ಹಾಯಿಸುತ್ತಿದ್ದ ರೈತನಿಗೆ ಮೊದಲು ಕರಡಿ ಕಾಣಿಸಿಕೊಂಡಿದೆ. ಇದನ್ನು ಕಂಡು ಅಕ್ಕಪಕ್ಕದ ಜಮೀನುಗಳಲ್ಲಿ ಇದ್ದ ರೈತರನ್ನು ಕೂಗಿ ಕರೆದು ಕರಡಿಯನ್ನು ಓಡಿಸಲು ಪ್ರಯತ್ನಿಸಿದ್ದಾರೆ. ತಕ್ಷಣ ಕರಡಿ ರೇಷ್ಮೆ ಜಮೀನಿನ ಬಳಿ ಇದ್ದ ಬೇವಿನ ಮರವೇರಿ ಕುಳಿತಿದೆ. ಜನರು ಎಷ್ಟೇ ಪ್ರಯತ್ನಿಸಿದರೂ ಕರಡಿ ಮರದಿಂದ ಕೆಳಗಿಳಿಯಲಿಲ್ಲ. ಅದು ಕೂಡ ಭಯಪಟ್ಟಂತೆ ಕಂಡುಬಂದಿದೆ.
ಕರಡಿ ಮರವೇರಿರುವ ಸುದ್ದಿ ಅಕ್ಕಪಕ್ಕದ ಹಳ್ಳಿಗಳಿಗೂ ಹರಡಿ ನೆಲ್ಲಿಕಟ್ಟೆ, ಕಾಲಗೆರೆ, ಗೊಲ್ಲರಹಳ್ಳಿ, ಇಸಾಮುದ್ರ ಹೊಸಹಟ್ಟಿ ಸೇರಿದಂತೆ ಇತರೆ ಹಳ್ಳಿಗಳ ಯುವಕರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಆಜಾದ್ ನಗರದ ನೂರಕ್ಕೂ ಹೆಚ್ಚು ಯುವಕರು ಕರಡಿ ಕುಳಿತಿರುವ ಮರದ ಬಳಿ ಜಮಾಯಿಸಿದ್ದಾರೆ. ಕರಡಿ ಕಾಣಿಸಿಕೊಂಡಿದ್ದರಿಂದ ಊರ ಅಂಚಿನಲ್ಲಿ ಮಹಿಳೆಯರು ಮನೆ ಬಿಟ್ಟು ಹೊರ ಬರಲು ಹೆದರುತ್ತಿದ್ದಾರೆ. ಕರಡಿ ಮರವೇರಿದ ವಿಷಯವನ್ನು ಗ್ರಾಮಸ್ಥರು ಅರಣ್ಯ ಇಲಾಖೆಗೆ ತಿಳಿಸಿದರು. ಸಂಜೆ ವೇಳೆಗೆ ಉಪ ವಲಯ ಅರಣ್ಯಾಧಿಕಾರಿ ರುದ್ರಮುನಿ ಸ್ಥಳಕ್ಕೆ ಆಗಮಿಸಿರುವುದನ್ನು ಬಿಟ್ಟರೆ ಯಾವುದೇ ಸಿಬ್ಬಂದಿ ಇತ್ತ ಸುಳಿದಿಲ್ಲ. ಈ ಬಗ್ಗೆ ರುದ್ರಮುನಿಯವರನ್ನು ಪ್ರಶ್ನಿಸಿದಾಗ, ಚಿತ್ರದುರ್ಗದಿಂದ ವಾಚರ್‌ಗಳು ಬರುತ್ತಿದ್ದಾರೆ. ಮರದ ಸುತ್ತ ಬಲೆಯನ್ನು ಹಾಕಿ ಕರಡಿಯನ್ನು ಜೀವಂತವಾಗಿ ಸೆರೆ ಹಿಡಿದು ಕಾಡಿಗೆ ಬೀಡುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಕೊಣಚಕಲ್ಲು ಗುಡ್ಡದಿಂದ ಕರಡಿಗಳು ಬರುತ್ತಿರುತ್ತವೆ. ಕಳೆದ ಎರಡು ತಿಂಗಳಿಂದ ನಿತ್ಯ 8-10 ಕರಡಿಗಳು ರೈತರಿಗೆ ಕಾಣಸಿಗುತ್ತಿವೆ. ಜಮೀನುಗಳಿಗೆ ರಾತ್ರಿ ವೇಳೆ ನೀರು ಹಾಯಿಸಲು ತೆರಳಲು ರೈತರು ಭಯ ಪಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕರಡಿಯನ್ನು ಹೊಡೆದು ಸಾಯಿಸಲು ಬಿಡಲ್ಲ ಎಂದು ಆಜಾದ್‌ನಗರ ಗ್ರಾಮಸ್ಥ ದಾದಾಪೀರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.