ಮಕ್ಕಳಲ್ಲಿ ನಾಯಕತ್ವ ಗುಣ ಬೆಳಸಬೇಕಿದೆ

Team Udayavani, Apr 19, 2017, 12:54 PM IST

dvg1.jpg

ದಾವಣಗೆರೆ: ಮಕ್ಕಳಲ್ಲಿ ಮಾನವೀಯ ಹಾಗೂ ಸಾಮಾಜಿಕ ನ್ಯಾಯದ ಮೂಲಕ ಸಮುದಾಯ ಮುನ್ನಡೆಸುವ ನಾಯಕತ್ವದ ಗುಣ ಬೆಳೆಸುವ ಅಗತ್ಯವಿದೆ ಎಂದು ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಕಾರ್ಯದರ್ಶಿ ಎಲ್‌.ಎಚ್‌. ಅರುಣ್‌ ಕುಮಾರ್‌ ಪ್ರತಿಪಾದಿಸಿದ್ದಾರೆ. 

ಡಾನ್‌ಬಾಸ್ಕೋ ಬಾಲ ಕಾರ್ಮಿಕರ ಮಿಷನ್‌ನಲ್ಲಿ ಮಂಗಳವಾರ ಜಿಲ್ಲಾ ಮಕ್ಕಳ ಹಕ್ಕುಗಳ ಕ್ಲಬ್‌ನ ಮಕ್ಕಳಿಗೆ ಆಯೋಜಿಸಲಾಗಿದ್ದ ಎರಡು ದಿನಗಳ ನಾಯಕತ್ವ ಬಲವರ್ಧನಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವರ್ಗ, ಧರ್ಮ, ಜಾತಿ, ಲಿಂಗ,ಭಾಷೆ ಮತ್ತು ವರ್ಣ ತಾರತಮ್ಯ ಮೀರಿ ಶೋಷಿತರ ಪರ, ನಿರಪೇಕ್ಷತೆಯ ನಾಯಕತ್ವ ಗುಣ ಮಕ್ಕಳಲ್ಲಿ ಬೆಳೆಸುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಬಹುದು ಎಂದರು. 

ಪ್ರಸ್ತುತ ವಾತಾವರಣದಲ್ಲಿ ನಡೆಯುವ ಅನ್ಯಾಯ, ಶೋಷಣೆ, ದಬ್ಟಾಳಿಕೆಯನ್ನು ಪ್ರಶ್ನಿಸುವ ಗುಣವನ್ನು ಮಕ್ಕಳಲ್ಲಿ ಬೆಳೆಸಬೇಕಿದೆ. ಆ ಮೂಲಕ ಮಕ್ಕಳು ತಮ್ಮ  ಸಮಸ್ಯೆಗಳಿಗೆ ಸೂಕ್ತ ಮಾರ್ಗದಲ್ಲಿ ಪರಿಹಾರ ಕಂಡುಕೊಳ್ಳುವ ಶಕ್ತಿ ಬೆಳೆಯಲು ಅನುಕೂಲವಾಗುತ್ತದೆ. ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಇಂತಹ ಶಿಬಿರ ಸಹಕಾರಿ ಎಂದು ತಿಳಿಸಿದರು. 

ವಿಶ್ವಸಂಸ್ಥೆಯು ನೀಡಿರುವ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಎಲ್ಲಾ ಮಕ್ಕಳಿಗೂ ಬದುಕುವ, ರಕ್ಷಣೆ ಪಡೆಯುವ, ಅಭಿವೃದ್ಧಿ ಹೊಂದುವ  ಮತ್ತು ಚರ್ಚೆ ಚಿಂತನೆ ಮತ್ತು ಸಾಂಘಿ ಕ ಚಟುವಟಿಕೆಗಳಲ್ಲಿ ಭಾಗವಹಿಸುವ ಹಕ್ಕು ನೀಡಲಾಗಿದೆ. ಮಕ್ಕಳಿಗೆ ಶಾಲಾ ತರಗತಿ ಒಳಗಿನ ವಿದ್ಯಾಬ್ಯಾಸದ ಜೊತೆಗೆ ಸಮಾಜದಲ್ಲಿ  ನಡೆಯುವ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸಮ ಸಮಾಜ ಮತ್ತು ಪ್ರಜಾಪ್ರಭುತ್ವ ಯಶಸ್ವಿಗೊಳಿಸಲು ಅಣಿಗೊಳಿಸಬೇಕು ಎಂದು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕ  ಹನುಮಂತಪ್ಪ ಮಾತನಾಡಿ, ಮಕ್ಕಳು ಒಳ್ಳೆಯದನ್ನು ಗ್ರಹಿಸುವ, ಅನ್ಯಾಯ ಖಂಡಿಸುವ ಸೂಕ್ತ ಪರಿಹಾರದ ದಾರಿ ಕಂಡುಕೊಳ್ಳುವಂತಾಗಬೇಕು. ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದರು. ಸಂಸ್ಥೆ ನಿರ್ದೇಶಕ ಫಾ| ಸಿರಿಲ್‌  ಸಗಾಯರಾಜ್‌ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕರಾದ ಬಿ. ಮಂಜಪ್ಪ, ಶ್ರೀನಿವಾಸ, ಮಂಜಾನಾಯ್ಕ ಇತರರು ಇದ್ದರು. 

ಟಾಪ್ ನ್ಯೂಸ್

US President Trump warns BRICS countries including India

BRICS: ಭಾರತ ಸೇರಿ ಬ್ರಿಕ್ಸ್‌ ದೇಶಗಳಿಗೆ ಎಚ್ಚರಿಕೆ ನೀಡಿದ ಯುಎಸ್‌ ಅಧ್ಯಕ್ಷ ಟ್ರಂಪ್

Tamilnadu: ಫೆಂಗಲ್‌ ಚಂಡಮಾರುತದ ಅಬ್ಬರಕ್ಕೆ ಚೆನ್ನೈ ತತ್ತರ, ಭಾರೀ ಮಳೆ- ಇಬ್ಬರ ಸಾವು

Tamilnadu: ಫೆಂಗಲ್‌ ಚಂಡಮಾರುತದ ಅಬ್ಬರಕ್ಕೆ ಚೆನ್ನೈ ತತ್ತರ, ಭಾರೀ ಮಳೆ- ಇಬ್ಬರ ಸಾವು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

Champions Trophy: Pakistan sets three conditions for hosting hybrid tournament: What are they?

Champions Trophy: ಹೈಬ್ರಿಡ್‌ ಮಾದರಿ ಕೂಟ ಆಯೋಜನೆಗೆ ಮೂರು ಷರತ್ತು ಹಾಕಿದ ಪಾಕ್:‌ ಏನದು?

Bellary; ಕರ್ನಾಟಕ‌ ಗಡಿಯಲ್ಲಿ ಭೀಕರ ಅಪಘಾತ: ವೈದ್ಯರು ಸೇರಿ ಮೂವರು ಸಾವು

Bellary; ಕರ್ನಾಟಕ‌- ಆಂಧ್ರ ಗಡಿಯಲ್ಲಿ ಭೀಕರ ಅಪಘಾತ: ವೈದ್ಯರು ಸೇರಿ ಮೂವರು ಸಾವು

Maharashtra; ಯಾರು ಮಹಾ ಸಿಎಂ? ಮಹತ್ವದ ಮಾಹಿತಿ ನೀಡಿದ ಅಜಿತ್‌ ಪವಾರ್

BBK11: ಅರ್ಧದಲ್ಲೇ ಕನ್ನಡ ಬಿಗ್ ಬಾಸ್ ಶೋ ಬಿಟ್ಟು ಬಂದ ಖ್ಯಾತ ಸ್ಪರ್ಧಿ! ವೀಕ್ಷಕರು ಶಾಕ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

US President Trump warns BRICS countries including India

BRICS: ಭಾರತ ಸೇರಿ ಬ್ರಿಕ್ಸ್‌ ದೇಶಗಳಿಗೆ ಎಚ್ಚರಿಕೆ ನೀಡಿದ ಯುಎಸ್‌ ಅಧ್ಯಕ್ಷ ಟ್ರಂಪ್

Tamilnadu: ಫೆಂಗಲ್‌ ಚಂಡಮಾರುತದ ಅಬ್ಬರಕ್ಕೆ ಚೆನ್ನೈ ತತ್ತರ, ಭಾರೀ ಮಳೆ- ಇಬ್ಬರ ಸಾವು

Tamilnadu: ಫೆಂಗಲ್‌ ಚಂಡಮಾರುತದ ಅಬ್ಬರಕ್ಕೆ ಚೆನ್ನೈ ತತ್ತರ, ಭಾರೀ ಮಳೆ- ಇಬ್ಬರ ಸಾವು

4-gundlupete

Gundlupete: ಆರು ಜೀವಂತ ಆಮೆ, ಶ್ರೀಗಂಧದ ತುಂಡು ಸಾಗಿಸುತ್ತಿದ್ದ ಆರೋಪಿ ಬಂಧನ

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

Champions Trophy: Pakistan sets three conditions for hosting hybrid tournament: What are they?

Champions Trophy: ಹೈಬ್ರಿಡ್‌ ಮಾದರಿ ಕೂಟ ಆಯೋಜನೆಗೆ ಮೂರು ಷರತ್ತು ಹಾಕಿದ ಪಾಕ್:‌ ಏನದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.