ಭದ್ರಾ ನೀರು, ಉಗ್ರರ ದಾಳಿ,ಏರ್‌ಸ್ಟ್ರೈಕ್‌, ಮೋದಿ ಅಲೆ..!


Team Udayavani, Apr 16, 2019, 3:29 PM IST

dvg-1
ದಾವಣಗೆರೆ: ಪ್ರತಿ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮುನ್ನಲೆಗೆ ಬರುವ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ನೀರಿನ ಸಮಸ್ಯೆ…, ಪುಲ್ವಾಮಾ ದಾಳಿ…, ಬಾಲಾಕೋಟ್‌ ಏರ್‌ ಸ್ಟ್ರೈಕ್‌…, ಮೋದಿ ಮತ್ತೂಮ್ಮೆ ಪ್ರಧಾನಿ ಆಗಬೇಕು….
ಇವು ದಾವಣಗೆರೆ ಲೋಕಸಭಾ ಕ್ಷೇತ್ರದ ಅತಿ ದೊಡ್ಡ ಮತಕ್ಷೇತ್ರ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಹು ಚರ್ಚೆಯಲ್ಲಿರುವ ವಿಷಯಗಳು.
ದಾವಣಗೆರೆ ಮಹಾನಗರ ಪಾಲಿಕೆಯ 18ನೇ ವಾರ್ಡ್‌ನಿಂದ 41ನೇ ವಾರ್ಡ್‌(23 ರಿಂದ 27 ಹೊರತುಪಡಿಸಿ) ಹಾಗೂ
ಕಕ್ಕರಗೊಳ್ಳ ಜಿಲ್ಲಾ ಪಂಚಾಯತ್‌ ಕ್ಷೇತ್ರದ ಗ್ರಾಮಗಳನ್ನು ಹೊಂದಿರುವ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಒಂದರ್ಥದಲ್ಲಿ ಶಿಕ್ಷಣ ಕಾಶಿ. ಪ್ರತಿಷ್ಠಿತ ವಿದ್ಯಾಸಂಸ್ಥೆಗಳು, ಸಾಕಷ್ಟು ಅಭಿವೃದ್ಧಿ ಕಂಡಿರುವ ಬಡಾವಣೆ, ಜನ ಹೇಳುವಂತೆ ಹೊಸ ದಾವಣಗೆರೆಯ ಬಹುತೇಕ ಪ್ರದೇಶ ಹೊಂದಿರುವ ಉತ್ತರ ಕ್ಷೇತ್ರದಲ್ಲಿ ಪುಲ್ವಾಮಾ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಬಾಲಾಕೋಟ್‌ ದಾಳಿ ಕುರಿತ ಚರ್ಚೆ ನಡೆಯುತ್ತಿದೆ.
ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಬಡಾವಣೆಯಂತಹ ಅಭಿವೃದ್ಧಿ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಕ್ಕೇನು ಕೊರತೆ ಇಲ್ಲ. ಹಾಗಾಗಿ ಇಲ್ಲಿ ಕುಡಿಯುವ ನೀರು, ಬೀದಿ ದೀಪ, ಚರಂಡಿ, ಒಳ ಚರಂಡಿ… ಮುಂತಾದ ಸೌಲಭ್ಯಗಳ ಚರ್ಚೆ ಅಷ್ಟಾಗಿ ಇಲ್ಲ.
ಬೇಕಿದೆ ಮನೆ: ಬುದ್ಧ ಬಸವ ನಗರ, ರವೀಂದ್ರನಾಥ್‌ ನಗರ, ಇಂಡಸ್ಟ್ರಿಯಲ್‌ ಏರಿಯಾದಂತಹ ಪ್ರದೇಶದಲ್ಲಿ ನಿವೇಶನ ಮತ್ತು ಮನೆ ಸೌಲಭ್ಯ ಬಹುತೇಕರ ಬಹು ಮುಖ್ಯ ಬೇಡಿಕೆ . ಹಿಂದೊಮ್ಮೆ 15 ಸಾವಿರದಷ್ಟು ಆಶ್ರಯ ಮನೆಗಳ ನಿರ್ಮಾಣದ ಮೂಲಕ ರಾಜ್ಯದ ಗಮನ ಸೆಳೆದಿದ್ದ ಈ ಭಾಗದಲ್ಲಿ ಈಗ ಆಶ್ರಯ ಮನೆಗಳ ನಿರ್ಮಾಣ ಬಹುತೇಕ ಇಲ್ಲವೇ ಇಲ್ಲ ಎನ್ನುವಂತಿದೆ. ಬೆಲೆ ಏರಿಕೆಯಂತಹ ದಿನಗಳಲ್ಲಿ ಬಾಡಿಗೆ ಕಟ್ಟಿಕೊಂಡು, ಕೆಲಸಕ್ಕಾಗಿ 6-7 ಕಿಲೋ ಮೀಟರ್‌ ದೂರ ಪ್ರತಿ ನಿತ್ಯ ಓಡಾಟ, ಮಕ್ಕಳಿಗೆ ಎಜ್ಯುಕೇಷನ್‌, ಆರೋಗ್ಯ ನೋಡಿಕೊಳ್ಳುವ ಜೊತೆಗೆ ಜೀವನ ನಡೆಸುವುದು ಕಷ್ಟ. ಹಾಗಾಗಿ ಆಶ್ರಯ ಯೋಜನೆಯಡಿ ಮನೆ ಒದಗಿಸಬೇಕು ಎಂಬುದು ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಬಹುತೇಕರ ಒಕ್ಕೊರಲಿನ ಒತ್ತಾಯ.
ಕೈಗಾರಿಕೆಗಳಿಲ್ಲ: ಹಿಂದೊಮ್ಮೆ ಮ್ಯಾಂಚೆಸ್ಟರ್‌… ಎಂಬ ಖ್ಯಾತಿಯ ದಾವಣಗೆರೆಯಲ್ಲಿ ಈಗ ಕೈಗಾರಿಕೆಗಳೇ ಇಲ್ಲ.
ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸುವಂತಹ ಪ್ರಯತ್ನ ನಡೆದಿಲ್ಲ. ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಒಂದಷ್ಟು
ಉದ್ಯೋಗ ಅವಕಾಶ ಒದಗಿಸುವಂತಹ ಸಾಫ್ಟವೇರ್‌ ಪಾರ್ಕ್‌ ನಿವೇಶನ ಸಮಸ್ಯೆಯಿಂದ ಪ್ರಾರಂಭವಾಗಿಲ್ಲ. ಉದ್ಯೋಗ ಅವಕಾಶದ ವಾತಾವರಣ ನಿರ್ಮಾಣ ಮಾಡಬೇಕು ಎಂದು ವಿದ್ಯುತ್‌ ಗುತ್ತಿಗೆದಾರ ಸಂತೋಷ್‌ ದೊಡ್ಮನಿ ಒತ್ತಾಯಿಸುತ್ತಾರೆ.
ನಾಲೆಯಲ್ಲಿ ನೀರು ಹರೀತಿಲ್ಲ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಕ್ಕರಗೊಳ್ಳ ಜಿಲ್ಲಾ ಪಂಚಾಯತ್‌ನ ಅನೇಕ ಗ್ರಾಮಗಳಿಗೆ ಭದ್ರಾ ನಾಲಾ ನೀರೇ ಮೂಲ ಆಧಾರ. ಸಮರ್ಪಕ ಪ್ರಮಾಣದಲ್ಲಿ ಭದ್ರೆ ಹರಿದರೆ ಮಾತ್ರವೇ ಈ ಭಾಗದ ಸಾವಿರಾರು ಕುಟುಂಬಗಳ ಜೀವನ ಸುಭದ್ರ ಎನ್ನುವ ವಾತಾವರಣ ಇದೆ. ಆದರೆ, ಅಚ್ಚುಕಟ್ಟಿನ ಕೊನೆಯ ಭಾಗಕ್ಕೆ ನೀರು ಹರಿಸಲಾಗುತ್ತಿಲ್ಲ ಎಂಬ ಅಚ್ಚುಕಟ್ಟುದಾರರ ಬೇಗುದಿಗೆ ಈವರೆಗೆ ಪರಿಹಾರ ದೊರೆತಿಲ್ಲ.
ಈ ಸಮಸ್ಯೆಗೆ ಪರಿಹಾರ ದೊರೆಯವ ಲಕ್ಷಣಗಳು ಬಹುತೇಕ ಕಡಿಮೆ. ಕಾರಣ ಭದ್ರಾ ನಾಲಾ ಮೇಲ್ಭಾಗದಲ್ಲಿನ ಅಕ್ರಮ ಪಂಪ್‌ ಸೆಟ್‌ಗಳು. ಅಕ್ರಮ ಪಂಪ್‌ ಸೆಟ್‌ ತೆರವು ಕಾರ್ಯಾಚರಣೆ ಜೇನುಗೂಡಿಗೆ ಕೈ ಹಾಕಿದಂತೆ ಎಂಬುದು ನಗ್ನಸತ್ಯ. ಹಾಗಾಗಿ ಅಕ್ರಮ ಪಂಪ್‌ಸೆಟ್‌ ತೆರವು ಕಾರ್ಯಾಚರಣೆ ಎಂಬುದು ರೈತರನ್ನು ಒಂದಷ್ಟು ಸಮಾಧಾನ ಪಡಿಸುವಂತಾಗುತ್ತಿದೆಯೇ ಹೊರತು ಶಾಶ್ವತ ಪರಿಹಾರವಾಗಿ ನಡೆಯುವುದಿಲ್ಲ ಎಂಬುದು ರೈತರ ಅಳಲು.
ದಾವಣಗೆರೆ ಮತ್ತು ಹರಿಹರ ತಾಲೂಕಿನ ಕೆಲ ಗ್ರಾಮಗಳ ಹೊಲ-ಗದ್ದೆಯಲ್ಲಿ ಭದ್ರಾ ನಾಲಾ ನೀರು ಸಮರ್ಪಕ ಪ್ರಮಾಣದಲ್ಲಿ ಹರಿದ ಒಂದರೆಡು ಉದಾಹರಣೆ ಬಿಟ್ಟರೆ ಬಹುತೇಕ ಹಂಗಾಮಿನಲ್ಲಿ ನೀರು ಹರಿಯುವುದೇ ಇಲ್ಲ. ನೀರು ಹರಿಸಬೇಕು ಒಂದು ಒತ್ತಾಯಿಸಿ ಕಳೆದ ವಾರದಲ್ಲಿ ವಿವಿಧ ಗ್ರಾಮಗಳ ರೈತರು ಏಕಾಏಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಪ್ರತಿಭಟನೆ ನಡೆಸಿದ್ದಾರೆ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಈ ವಿಷಯ ಭಾರೀ ಚರ್ಚೆಗೆ ವೇದಿಕೆ ಆಗುತ್ತದೆ. ಈ ಚುನಾವಣೆಯಲ್ಲೂ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗಕ್ಕೆ ನೀರು ಹರಿಸುವಲ್ಲಿ ವೈಫಲ್ಯ ಆಗಿದೆ… ಎಂಬ ಚರ್ಚೆ ಕಾವೇರುತ್ತಿದೆ.
ಇನ್ನು ಲೋಕಸಭಾ ಚುನಾವಣಾ ಪ್ರಚಾರ ನೋಡುವುದಾದರೆ ಈವರೆಗೆ ರಾಜ್ಯ, ರಾಷ್ಟ್ರ ಮಟ್ಟದ ನಾಯಕರ ಪ್ರಚಾರ ಕಂಡು ಬಂದಿಲ್ಲ. ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸ್ಪರ್ಧಿಸದೇ ಇರುವುದರಿಂದ ಅಂತಹ ಜಿದ್ದಾಜಿದ್ದಿ ಇಲ್ಲ ಎಂಬ ಕಾರಣಕ್ಕಾಗಿ ಪ್ರಚಾರ ಬಿರುಸು ಪಡೆದುಕೊಂಡಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಕಿಂಗ್‌ ಫಲಿತಾಂಶ ನೀಡಿರುವ ಉತ್ತರ ಕ್ಷೇತ್ರದಲ್ಲಿ ಕಮಲ ಪಾಳೆಯ ಮನೆ ಮನೆ ಪ್ರಚಾರದಲ್ಲಿ ತೊಡಗಿದೆ. ಕಾಂಗ್ರೆಸ್‌-ಜೆಡಿಎಸ್‌ನವರು ಸಹ
ಪ್ರಚಾರ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

7-dvg

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

byndoor

Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.