ಕಮ್ಯುನಿಸ್ಟ್ ತತ್ವಕ್ಕೆ ಆಕರ್ಷಿತ ರಾಗಿದ್ದ ಭಗತ್‌ಸಿಂಗ್
Team Udayavani, Mar 24, 2018, 3:44 PM IST
ದಾವಣಗೆರೆ: ಅತಿ ಸಣ್ಣ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಸೇನಾನಿ ಭಗತ್‌ಸಿಂಗ್ ಕಮ್ಯುನಿಸ್ಟ್ ತತ್ವಗಳಿಂದ ಪ್ರೇರಿತರಾಗಿದ್ದರು ಎಂದು ಎಐಎಂಎಸ್ ಎಸ್‌ನ ಜ್ಯೋತಿ ಕುಕ್ಕವಾಡ ಹೇಳಿದ್ದಾರೆ.
ಶುಕ್ರವಾರ, ಪಾಲಿಕೆ ಮುಂಭಾಗ ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್ ಎಸ್‌ನಿಂದ ಹಮ್ಮಿಕೊಂಡ ಭಗತ್ ಸಿಂಗ್‌ರ 87ನೇ ವರ್ಷದ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಗತ್ ಸಿಂಗ್ ಕಮ್ಯುನಿಸ್ಟ್ ವಿಚಾರಧಾರೆಗೆ ಆಕರ್ಷಿತರಾಗಿದ್ದರು. ಲೆನಿನ್‌ರ ಮರಣ ದಿನದಂದು ಕೊರ್ಟ್‌ನಲ್ಲಿ ಟೆಲಿಗ್ರಾಮ್ ಮೂಲಕ ರಷ್ಯಕ್ಕೆ ಸಂದೇಶ ರವಾನಿಸಿರುವ ಸಂಗತಿ ಇದಕ್ಕೆ ಸಾಕ್ಷಿ. ಅವರು ಕಾ| ಲೆನಿನ್‌ರನ್ನು ಕಾರ್ಮಿಕವರ್ಗದ ಮಹಾನ್ ನಾಯಕರೆಂದು ಅರಿತಿದ್ದರು. ಅವರ ಜೀವನದ ಕೊನೆಯ ದಿನಗಳಲ್ಲಿ ಲೆನಿನ್‌ರವರ ಜೀವನ ಚರಿತ್ರೆ ಓದುತ್ತಿದ್ದರು. ಭಗತ ಸಿಂಗ್‌ಗೆ ಸ್ಫೂರ್ತಿ ಲೆನಿನ್ ಎಂದರು.
ನಮ್ಮ ದೇಶದಲ್ಲಿ ಇಂದು ಭಗತ್ ಸಿಂಗ್ ಅವರಿಗೆ ಸ್ಫೂರ್ತಿಯಾದ ಲೆನಿನ್ ಪುತ್ಥಳಿ ಕೆಡವಿ ಹಾಕಿದ್ದಾರೆ. ಪ್ರತಿಮೆಗಳನ್ನು ಕೆಡವಬಹುದು, ಆದರೆ ಲೆನಿನ್‌ರ ವಿಚಾರಗಳಲ್ಲ ಎಂಬುದನ್ನು ಇಂದು ಹೋರಾಟಕ್ಕೆ ಧುಮುಕುತ್ತಿರುವ ಲಕ್ಷಾಂತರ ವಿದ್ಯಾರ್ಥಿ-ಯುವಜನರು
ಸಾಬೀತು ಪಡಿಸಿದ್ದಾರೆ. ಈ ದೇಶದಲ್ಲಿ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮವೇ ಜರುಗಬೇಕಿದೆ. ದೇಶದ ಪ್ರತಿಯೊಬ್ಬ ನಾಗರಿಕ ಸಹ ಭಗತರ ವಿಚಾರ, ಜೀವನಾದರ್ಶ ಮೈಗೂಡಿಸಿ ಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
23 ವರ್ಷಕ್ಕೆ ನಗುನಗುತ್ತಾ ಗಲ್ಗಂಬವೇರಿದ ಆ ಮೂವರು ಕ್ರಾಂತಿಕಾರಿಗಳು ನಿಜಕ್ಕೂಧೀರರು. ದೇಶದ ಸಮಸ್ಯೆಗಳಿಗೆ ಕ್ರಾಂತಿಯೊಂದೇ ಪರಿಹಾರ. ಸಮಾಜವಾದಿ ವ್ಯವಸ್ಥೆಯೇ ಉತ್ತರ ಎಂಬುದನ್ನು ಈಗಿನ ಎಲ್ಲಾ ವಿದ್ಯಾರ್ಥಿ-ಯುವಜನರು ಅರಿತು, ಆ ಸಂದೇಶವನ್ನು ಬಡಬಗ್ಗರ ನಡುವೆ ಸಾರಿ ಅವರನ್ನು ಹೋರಾಟಕ್ಕೆ ಸಜ್ಜುಗೊಳಿಸಬೇಕಿದೆ ಎಂದು ಅವರು ತಿಳಿಸಿದರು.
ಮುಖಂಡರಾದ ನಾಗಸ್ಮಿತ, ರೇಣುಕಾ ಪ್ರಸನ್. ಸತೀಶ್, ಮಧು ತೊಗಲೇರಿ, ಶಶಿಕುಮಾರ್, ಗುರು, ಪ್ರವೀಣ್, ಮಂಜುನಾಥ್ ರೆಡ್ಡಿ, ಸಿದ್ದೇಶ್, ಭಾರತಿ, ಬನಶ್ರೀ, ಸವಿತ, ಮಂಜುನಾಥ್ ಕುಕ್ಕವಾಡ, ಡಾ| ವಸುದೇಂದ್ರ, ಯತೀಂದ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.