ಗುರಿ ಸಾಧನೆಗೆ ಭಗೀರಥ ಮಹರ್ಷಿ ಮಾದರಿ: ಮಂಜಪ್ಪ
Team Udayavani, Apr 23, 2018, 4:29 PM IST
ಚಿತ್ರದುರ್ಗ: ಭಗೀರಥ ಮಹರ್ಷಿಗಳು ನಡೆಸಿದ ತಪಸ್ಸಿನಂತೆ ನಿರಂತರವಾಗಿ ಪ್ರಯತ್ನ ಪಟ್ಟಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರೊಬೆಷನರಿ ಸಹಾಯಕ ನಿರ್ದೇಶಕ ಮಂಜಪ್ಪ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸಕೃತಿ ಇಲಾಖೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಉತ್ತರ ಭಾರತದಲ್ಲಿ ಭಗೀರಥ ಬಹು ದೊಡ್ಡ ಮಹಾರಾಜನಾಗಿದ್ದ. ಅವನಿಗೆ ಸಕಲ ವೈಭವಗಳಿದ್ದರೂ ಕೊರಗುತ್ತಿದ್ದ. ಭಗೀರಥನ ತಂದೆ, ತಾಯಿ ದೇವಗಂಗೆಯನ್ನು ಪಡೆಯಲೇಬೇಕು ಎಂದು ಆಸೆ ಪಟ್ಟಿದ್ದರು. ಆದರೆ ಈ ಬಯಕೆ ಈಡೇರಿರಲಿಲ್ಲ. ಹೇಗಾದರೂ ಮಾಡಿ ದೇವಗಂಗೆಯನ್ನು ಪಡೆಯಬೇಕೆಂದು ಭಗೀರಥ ಪ್ರತಿಜ್ಞೆ ಮಾಡಿದ. ಭಗೀರಥ ಛಲಗಾರ, ಅವನು ದೇವಗಂಗೆಯನ್ನು ಧರೆಗಿಳಿಸಲು ಘೋರವಾದ ತಪಸ್ಸು ಮಾಡಿದ. ಅವನ
ತಪಸ್ಸಿಗೆ ಮೆಚ್ಚಿ ಗಂಗೆ ಪ್ರತ್ಯಕ್ಷಳಾಗಿ ನಿನಗೇನು ವರ ಬೇಕು ಎಂದು ಕೇಳಿದಾಗಿ ನೀನು ಭೂಮಿಗೆ ಇಳಿಯಬೇಕು, ನನ್ನ ತಂದೆ-ತಾಯಿಯನ್ನು ಪವಿತ್ರಗೊಳಿಸಬೇಕು ಎಂದು ಬೇಡಿಕೊಂಡ.
ಆಕಾಶದಿಂದ ಭೂಮಿಗೆ ಧುಮುಕುವಾಗ ನನ್ನ ರಭಸವನ್ನು ತಡೆಯುವವರು ಯಾರು, ಆ ರಭಸಕ್ಕೆ ಇಡೀ ಭೂ ಮಂಡಲವೇ ಕೊಚ್ಚಿ ಹೋದರೇನು ಗತಿ ಎಂದು ಗಂಗಾಮಾತೆ ಕೇಳಿದಾಗ ಭಗೀರಥ ನಾನು ಶಿವನನ್ನು ಬೇಡಿ ರಭಸವನ್ನು ತಡೆಯುವಂತೆ ಪ್ರಾರ್ಥಿಸುತ್ತೇನೆ ಎಂದ. ಆಗ ಶಿವ ಪ್ರತ್ಯಕ್ಷನಾದಾಗ ಗಂಗೆ ಆಕಾಶದಿಂದ ಧುಮುಕಿದಳು. ಶಿವನು ಗಂಗೆಯನ್ನು ಜಟೆಯಲ್ಲಿ ಧರಿಸಿ ಗಂಗಾಧರನಾದ. ಅಲ್ಲಿಂದ ಗಂಗೆ ಭೂಮಿಗಿಳಿದು ಭಗೀರಥನ ರಥದ
ಹಿಂದೆ ಹರಿಯುತ್ತಾ ಹೊರಟು ಭೂಮಿಯನ್ನು ಪವಿತ್ರಗೊಳಿಸಿದಳು. ಭಗೀರಥ ನಿರಂತರ ಈ ಪ್ರಯತ್ನದಿಂದ ಗಂಗೆಯನ್ನು ಧರೆಗಿಳಿಸಿದ. ನಿರಂತರ ಹೋರಾಟ, ತ್ಯಾಗದಿಂದ ಭಗೀರಥನಿಗೆ ಈ ಸಾಧನೆ ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ಯಾವುದೇ ಕೆಲಸ ಮಾಡಬೇಕಾದರೂ ಭಗೀರಥ ಪ್ರಯತ್ನ ಮಾಡು ಎಂದೇ ಹೇಳಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ನ್ಸಾ , ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಪಿ.ಎನ್. ರವೀಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಹಾಗೂ ವಿವಿಧ ಇಲಾಖೆಗಳ ಅಧಿ ಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.