ತಾಲೂಕುಗಳ ಪಟ್ಟಿಯಿಂದ ಮಾಯಕೊಂಡ ಕೈಬಿಟ್ಟಿದ್ದಕ್ಕೆ ಆಕ್ರೋಶ-ಪ್ರತಿಭಟನೆ


Team Udayavani, Mar 18, 2017, 1:20 PM IST

dvg1.jpg

ಮಾಯಕೊಂಡ: ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ 49 ನೂತನ ತಾಲೂಕುಗಳ ಪಟ್ಟಿಯಲ್ಲಿ ಮಾಯಕೊಂಡ ಹೋಬಳಿ ಕೈಬಿಟ್ಟಿರುವುದನ್ನು ಖಂಡಿಸಿ ಮಾಯಕೊಂಡ ಸೇರಿದಂತೆ ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ ಮಾಯಕೊಂಡ ತಾಲೂಕು ಹೋರಾಟ ಸಮಿತಿ, ಪುರ ಅಭಿವೃದ್ಧಿ ವೇದಿಕೆಯ ಸಮಿತಿಯವರು ಶುಕ್ರವಾರ ಕರೆ ನೀಡಿದ್ದ ಮಾಯಕೊಂಡ ಬಂದ್‌ ಯಶಸ್ವಿಯಾಗಿದೆ. 

ಗ್ರಾಮದ ಅಂಗಡಿ, ಹೋಟೆಲ್‌ಗ‌ಳು, ಶಾಲಾ, ಕಾಲೇಜುಗಳು ಸೇರಿದಂತೆ ಸರ್ಕಾರಿ ಕಚೇರಿಗಳನ್ನು ಸ್ವಯಂ ಪ್ರೇರಿತರಾಗಿ ಬಂದ್‌ ಮಾಡುವ ಮೂಲಕಸಾರ್ವಜನಿಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಜನಪ್ರತಿನಿಧಿಧಿಗಳು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ನೇತೃತ್ವ ವಹಿಸಿದ್ದ ಪ್ರದೇಶ ರೈತ ಸಂಘದ ಅಧ್ಯಕ್ಷ ಎಂ.ಎಸ್‌.ಕೆ. ಶಾಸ್ತ್ರಿ ಮಾತನಾಡಿ, ಮಾಯಕೊಂಡ ವಿಧಾನಸಭಾ ಕ್ಷೇತ್ರವಾಗಿದೆ.

ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿದೆ. ಭೌಗೋಳಿಕವಾಗಿ ಮಾಯಕೊಂಡ ಗ್ರಾಮವು ಆನಗೊಡು, ಲೋಕಿಕೆರೆ, ಭರಮಸಾಗರ, ಬಿ.ದುರ್ಗ, ಹೋಬಳಿಗಳ  ಮಧ್ಯ ಭಾಗದಲ್ಲಿರುವುದರಿಂದ ತಾಲೂಕು ಕೇಂದ್ರವಾಗಬೇಕೆಂಬ ಹೋರಾಟ ಸುಮಾರು 35-40 ವರ್ಷಗಳಿಂದಲೂ ನಡೆದು ಬಂದಿದೆ ಎಂದರು. 

ಮಾಯಕೊಂಡ ತಾಲೂಕು ಸಮಿತಿ ರಚಿಸಿಕೊಂಡು ವಿವಿಧ ಹಂತಗಳ ಹೋರಾಟ ಮಾಡುತ್ತಾ ಹುಂಡಿಕಾರ್‌, ವಾಸುದೇವರಾವ್‌, ಗದ್ದಿಗೌಡರ್‌ ಸಮಿತಿಗಳಿಗೆ ಹೋಬಳಿಯ ಗ್ರಾಪಂಗಳ ನಿರ್ಣಯ ಕೈಗೊಂಡು, ಜನಪ್ರತಿನಿಧಿಗಳ ಮತ್ತು ಗ್ರಾಮಸ್ಥರ ಜೊತೆ ನಿಯೋಗ ತೆರಳಿ ತಾಲೂಕು ಕೇಂದ್ರವಾಗಿಸಲು ಮನವಿ ಮಾಡಿದ್ದರು.

ಸತತವಾಗಿ 35 ವರ್ಷ ಅಧಿಧಿಕಾರ ನಡೆಸಿದ ಸರ್ಕಾರಗಳು ಇಚ್ಛಾಶಕ್ತಿ ತೋರಲಿಲ್ಲ. ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ ಅವರು, ಪಕ್ಷದ ಪರ ಪ್ರಚಾರಕ್ಕೆ ಬಂದಾಗ ಮಾಯಕೊಂಡ ತಾಲೂಕು  ಕೇಂದ್ರವಾಗಿ ಘೋಷಣೆ ಮಾಡುತ್ತೇನೆ ಎಂದು ಮಾತುಕೊಟ್ಟಿದ್ದರು. ಈಗ ಮಾತಿಗೆ ತಪ್ಪಿರುವ ಅವರು ಕ್ಷೇತ್ರದ  ಜನರಿಗೆ ಮೋಸ ಮಾಡಿ ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿದರು.

ಇನ್ನೆರಡು ದಿನಗಳಲ್ಲಿ ಜಿಲ್ಲಾ ಸಚಿವರಾದ ಎಸ್‌. ಎಸ್‌. ಮಲ್ಲಿಕಾರ್ಜುನ್‌, ಕ್ಷೇತ್ರದ ಶಾಸಕರಾದ  ಕೆ. ಶಿವಮೂರ್ತಿ ಹಾಗೂ ಮಾಜಿ ಸಚಿವರು, ಶಾಸಕರುಗಳನ್ನು ಒಳಗೊಂಡ ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈಗಿನ ಬಜೆಟ್‌ನಲ್ಲಿಯೇ ಮಾಯಕೊಂಡ ತಾಲೂಕು ಕೇಂದ್ರವಾಗಿಸಬೇಕೆಂಬ ಮನವಿ ಮಾಡಿಕೊಳ್ಳುತ್ತೇವೆ.

ಮಾಯಕೊಂಡ ತಾಲೂಕು ಎಂದು ಘೋಷಣೆ  ಮಾಡದೇ ಹೋದಲ್ಲಿ ಮುಂದಿನ ಚುನಾವಣೆ ಬಹಿಷ್ಕರಿಸುವ ಜತೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಿಜೆಪಿ ಮುಖಂಡ ಆನಂದಪ್ಪ ಮಾತನಾಡಿ, ಮಾಯಕೊಂಡ ಗ್ರಾಮವು ತಾಲೂಕಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೂ ಸಹ ಇಚ್ಛಾಶಕ್ತಿಯ ಕೊರತೆಯಿಂದ ಕಡೆಗಣಿಸಲಾಗಿದೆ.

ನಾಡ ಕಚೇರಿ, ರೈಲ್ವೆ ನಿಲ್ದಾಣ, ಕೃಷಿ ಇಲಾಖೆ, ಪೊಲೀಸ್‌ ಠಾಣೆ, ಉಪ ಖಜಾನೆ, ಕೆನರಾ ಬ್ಯಾಂಕ್‌, ಪಪೂ, ಪ್ರಥಮ ದರ್ಜೆ ಕಾಲೇಜುಗಳಿವೆ. ಹೀಗಾಗಿ ಮಾಯಕೊಂಡವನ್ನು ತಾಲೂಕು ಮಾಡಬೇಕು ಎಂದು ಒತ್ತಾಯಿಸಿದರು. ಜಿಪಂ ಮಾಜಿ ಸದಸ್ಯ ವೆಂಕಟೇಶ್‌, ಗ್ರಾಪಂ ಅಧ್ಯಕ್ಷ ಲಕ್ಷಣ, ಸದಸ್ಯ ರುದ್ರೇಶ್‌, ಸಂಡೂರ್‌ ರಾಜಶೇಖರ್‌, ಮುಖಂಡ ನೀಲಪ್ಪ ಮಾತನಾಡಿದರು. 

ಗ್ರಾಪಂ ಉಪಾಧ್ಯಕ್ಷೆ ಗಿರಿಜಾ ರಮೇಶ್‌, ಸದಸ್ಯರಾದ ಮಲ್ಲಿಕಾರ್ಜುನ, ಗಂಗಾಧರಪ್ಪ, ಪರುಶುರಾಮ ಜಯ್ಯಪ್ಪ, ಸುಲೋಚನಮ್ಮ, ದಾಕ್ಷಾಯಣಮ್ಮ, ರೂಪಾ, ಕನ್ನಡ ಯುವಶಕ್ತಿ ಕೇಂದ್ರದ ಅಧ್ಯಕ್ಷ ಗಾಳೆರ ಶ್ರೀನಿವಾಸ, ಗುರುನಾಥ ರವಿಕುಮಾರ್‌, ರಾಘವೇಂದ್ರ, ಮುಖಂಡರಾದ, ಬಿ.ಟಿ. ಹನುಮಂತಪ್ಪ, ಮುಪ್ಪಣ್ಣ, ಪ್ರೊ| ಲಿಂಗಣ್ಣ, ಎಂಜಿ ಗೋಪಾಲ್‌, ಬೀರಪ್ಪ, ಗೌಡ್ರ ಅಶೋಕ, ಶ್ರೀರಾಮ್‌ ಬಾಲರಾಜ,

ಗುಡ್ಲಿ ಕುಬಣ್ಣ, ತಿಪ್ಪೇಶ್‌, ಉಮ್ಮಾರ್‌ಸಾಬ್‌, ಬಿ.ಸಿ. ಬಸವರಾಜು ಪ್ರಕಾಶ್‌, ಉಮಾಶಂಕರ್‌, ದಿಂಡದಹಳಿ ರಂಗಪ್ಪ,ಹಿಂಡಸಘಟ್ಟೆ ರಾಮಚಂದ್ರ, ಮಾಗಡಿ, ಹೆದೆ°, ಹುಚ್ಚವನಹಳ್ಳಿ ಬಸವಾಪುರ, ನಲ್ಕುಂದ, ಅಣಬೇರು, ಬುಳ್ಳಾಪುರ, ಬಾವಿಹಾಳು ಗ್ರಾಮಸ್ಥರು ಬಂದ್‌ಗೆ ಬೆಂಬಲ ನೀಡಿದರು. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೊಬಸ್ತ್ ಮಾಡಲಾಗಿತ್ತು.  

ಟಾಪ್ ನ್ಯೂಸ್

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ

ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.