BJP; ಎರಡ್ಮೂರು ತಿಂಗಳು ಮಾಧ್ಯಮಗಳ ಮುಂದೆ ಮಾತಾಡಲ್ಲ: ಸಂಸದ ಸಿದ್ದೇಶ್ವರ
ಯಡಿಯೂರಪ್ಪ ಯಾವಾಗ ಹೇಳುತ್ತಾರೋ ಆಗ ನಾನು...
Team Udayavani, Sep 11, 2023, 5:23 PM IST
ದಾವಣಗೆರೆ: ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ನಾನು ಎರಡೂವರೆ, ಮೂರು ತಿಂಗಳು ಮಾಧ್ಯಮದವರ ಮುಂದೆ ಮಾತನಾಡುವುದಿಲ್ಲ ಎಂದು ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಸೋಮವಾರ ಹೇಳಿಕೆ ನೀಡಿದ್ದಾರೆ.
ಮಾಜಿ ಸಚಿವ ರೇಣುಕಾಚಾರ್ಯ, ಸ್ವಪಕ್ಷದ ನಾಯಕರು ಹಾಗೂ ತಮ್ಮ ವಿರುದ್ಧ ಆರೋಪ ಮಾತನಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಈ ಪ್ರತಿಕ್ರಿಯೆ ನೀಡಿದ್ದಾರೆ. ‘ ನಾನು ಎರಡ್ಮೂರು ತಿಂಗಳು ಮಾಧ್ಯಮದವರ ಮುಂದೆ ಮಾತನಾಡದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ತಿಳಿಸಿದ್ದು, ಮುಂದೆ ಅವರು ಯಾವಾಗ ಮಾತನಾಡಲು ಹೇಳುತ್ತಾರೋ ಆಗ ನಾನು ಮಾಧ್ಯಮದವರ ಮುಂದೆ ಮಾತಾಡುತ್ತೇನೆ” ಎಂದರು.
”ನನ್ನ ಬಗ್ಗೆ ಯಾರು ಏನೇನು ಮಾತನಾಡಿದ್ದಾರೋ ಅವರಿಗೆಲ್ಲ ಉತ್ತರ ಕೊಡುವ ಶಕ್ತಿ ಇದೆ. ಆದರೆ, ಈಗ ಬೇಡ ಎಂದು ಹಿರಿಯರು ಹೇಳಿರುವುದರಿಂದ ನಾನು ಪ್ರಸ್ತುತ ಆ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಲೋಕಸಭೆ ಚುನಾವಣೆಗೆ ಇನ್ನು ಆರೂವರೆ ತಿಂಗಳುಗಳಿವೆ. ಎರಡ್ಮೂರು ತಿಂಗಳ ಬಳಿಕ ಸುದ್ದಿಗೋಷ್ಠಿ ನಡೆಸಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ” ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.