ಪಾಲಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ
Team Udayavani, May 9, 2017, 12:52 PM IST
ದಾವಣಗೆರೆ: ಸಾರ್ವಜನಿಕ ರಸ್ತೆ, ಪಾರ್ಕ್ ಜಾಗ ಅತಿಕ್ರಮಿಣ ಹಾಗೂ ದಿವಂಗತ ಮಾಜಿ ಶಾಸಕ ಗಾಂಜಿ ವೀರಪ್ಪನವರ ಸಮಾಧಿ ಮೇಲೆ ಮಾಲ್ ನಿರ್ಮಿಸಲು ಅನುಮತಿ ನೀಡಿದ ಪಾಲಿಕೆ ವಿರುದ್ಧ ಸೋಮವಾರ ಬಿಜೆಪಿ ಪ್ರತಿಭಟಿಸಿದೆ.
ಪಾಲಿಕೆ ಆವರಣದಲ್ಲೇ ಧರಣಿ ನಡೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು, ನಗರದ ಶಾಮನೂರು ರಸ್ತೆಯಲ್ಲಿರುವ ಲಕ್ಷ್ಮಿ ಫ್ಲೋರ್ ಮಿಲ್ ಪಕ್ಕದಲ್ಲಿ ಶಾಮನೂರು ಶಿವಶಿಂಕರಪ್ಪನವರ ಪುತ್ರ ಎಸ್.ಎಸ್.ಗಣೇಶ್ ಸಾರ್ವಜನಿಕ ಎರಡು ರಸ್ತೆ, ಪಾರ್ಕ್ ಜಾಗ ಅತಿಕ್ರಮಿಸಿಕೊಂಡು ಎಸ್. ಎಸ್. ಮಾಲ್ ನಿರ್ಮಿಸಿದ್ದಾರೆ.
ಈ ವಿಚಾರವಾಗಿ ಪಕ್ಷದ ವತಿಯಿಂದ ಕಳೆದ ಎರಡು ವರ್ಷಗಳಿಂದ ಪ್ರತಿಭಟನೆ, ಹೋರಾಟ ನಡೆಸಲಾಗಿದೆ. ವಿವಾದಿತ ಜಾಗದಲ್ಲಿ ಮಾಲ್, ಸಭಾಂಗಣ, ಮಿನಿ ಛತ್ರ ನಿರ್ಮಿಸಲು ಪಾಲಿಕೆ ಅನುಮತಿ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ಜಾಗ ಒತ್ತುವರಿ ವಿರುದ್ಧ ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದೇವೆ. ನ್ಯಾಯಾಲಯ ಸಹ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಆದರೂ ಮಾಲ್, ಸಭಾಂಗಣ ಹಾಗೂ ಮಿನಿ ಛತ್ರ ನಿರ್ಮಿಸಿ, ಉದ್ಘಾಟನಾ ಕಾರ್ಯಧಿ ಕ್ರಮಕ್ಕೆ ರಾಜ ಮನೆತನದವರು,
ಮಾಜಿ ಪ್ರಧಾನಿ, ಸ್ವಾಮೀಜಿಯವರನ್ನು ಅತಿಥಿಧಿ ಗಳನ್ನಾಗಿ ಕರೆಯಿಸಿ, ಸಾರ್ವಜನಿಕರ ಕಣ್ಣಿಗೆ ಮಣ್ಣೆರೆಚುವ ತಂತ್ರ ಮಾಡಲಾಗಿದೆ. ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತವಿರುವುದರಿಂದ ಅಧಿಕಾರ ದುರ್ಬಳಕೆಯಿಂದ ಸಾರ್ವಜನಿಕ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಜಯಪ್ರಕಾಶ್ ಕೊಂಡಜ್ಜಿ, ಎಚ್. ಎನ್.ಶಿವಕುಮಾರ್, ಎಲ್.ಡಿ.ಗೋಣೆಪ್ಪ, ಪಾಲಿಕೆ ಸದಸ್ಯ ಕುಮಾರ್, ರಾಜನಹಳ್ಳಿ ಶಿವಕುಮಾರ್, ಪ್ರವೀಣ್ ಜಾಧವ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಮ್ಮ, ರಮೇಶ್ ನಾಯ್ಕ ಇತರರು ಧರಣಿಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.