ರೈತರ ಹಿತಕ್ಕಾಗಿ ಬಿಜೆಪಿ ರಾಜಕಾರಣ
Team Udayavani, Sep 14, 2017, 11:37 AM IST
ದಾವಣಗೆರೆ: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ನಮ್ಮಪಕ್ಷ ಇತಿಹಾಸ ನಿರ್ಮಿಸಿದ್ದನ್ನು ಮರೆಯಬಾರದು ಎಂದು ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಶಂಕರಗೌಡ ಹೇಳಿದ್ದಾರೆ. ನಗರದ ಹದಡಿ ರಸ್ತೆಯಲ್ಲಿರುವ ಎಸ್‌ಎಸ್
ಮಿನಿ ಸಮುದಾಯ ಭವನದಲ್ಲಿ ಬುಧವಾರ ಜಿಲ್ಲಾ ರೈತ ಪ್ರಹಾರಿಗಳ ಸಮಾವೇಶ ಉದ್ಘಾಟಿಸಿ, ಮಾತನಾಡಿದ ಅವರು, ಬಿಜೆಪಿ ಎಂದಿಗೂ
ಜಾತಿ ರಾಜಕಾರಣ ಮಾಡಿಲ್ಲ. ಸದಾ ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ರಾಜಕಾರಣ ಮಾಡುತ್ತಾ ಬಂದಿದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ
ಯಡಿಯೂರಪ್ಪನವರು ರೈತ ನಾಯಕರು. ಅವರು ಸಿಎಂ ಆಗಿದ್ದಾಗ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ, ರೈತ ಪರ ನಿಲುವು ಸಾಬೀತುಪಡಿಸಿದ್ದರು ಎಂದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ನಮ್ಮ ಪಕ್ಷ ಜನಸಂಘದ ಕಾಲದಿಂದಲೂ ರೈತರಿಗಾಗಿ ಹೋರಾಟ ಮಾಡುತ್ತಲೇ ಬಂದಿದೆ.
ಜನಸಂಘದ ಕಾಲದಲ್ಲಿ ಅಧಿಕಾರಿಗಳನ್ನು ವಿರೋಧ ಹಾಕಿಕೊಳ್ಳಲು ಎಲ್ಲರೂ ಹೆದರುತ್ತಿದ್ದರು. ಅಧಿಕಾರಿಗಳು ಸುಂಕದ ಹೆಸರಲ್ಲಿ ರೈತರ ಶೋಷಣೆ
ಮಾಡುತ್ತಿದ್ದರು. ಬಾಯಿಗೆ ಬಂದ ಬೆಲೆ ನಿಗದಿಮಾಡಿ ಸುಂಕ ವಸೂಲಿ ಮಾಡುತ್ತಿದ್ದರು. ನಮಗೆ ಜನಸಂಘದ ಮೂಲಕ ನೀಡಿದ ತಿಳಿವಳಿಕೆಯಿಂದಾಗಿ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವಂತಹ ಪ್ರೇರಣೆ ಸಿಕ್ಕಿತು. ಹಾಗಾಗಿಯೇ ಈ ಹಿಂದೆ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಿ, ರೈತರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಿದೆವು ಎಂದರು.
ಇಂದು ನೀವು ಸಹ ಇದೇ ರೀತಿಯ ಹೋರಾಟ ರೂಪಿಸಬೇಕಿದೆ. ಇಂದಿನ ಸರ್ಕಾರ ಸಹ ರೈತಪರ ಯಾವುದೇ ಕೆಲಸ ಮಾಡುತ್ತಿಲ್ಲ. ಕೇಂದ್ರ ಸರ್ಕಾರ
ಹಲವು ರೈತಪರ ಯೋಜನೆ ಜಾರಿಮಾಡಿದೆ. ಅಂತಹ ಯೋಜನೆಗಳು ರೈತರಿಗೆ ತಲುಪುವಂತೆ ಆಗಬೇಕು. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ರೈತರ ವಿಷಯ ಬಂದಾಗ ಸಿಡಿಲಮರಿಯಿದ್ದಂತೆ. 7 ವರ್ಷಗಳ ಆಡಳಿತದಲ್ಲಿ ಯಡಿಯೂರಪ್ಪ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಆದಾಗ ಸಹಿಸಿಕೊಳ್ಳುತ್ತಿರಲಿಲ್ಲ ಎಂದು ಅವರು ಸ್ಮರಿಸಿದರು.
ಇನ್ನೋರ್ವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ನವರದ್ದು ಎಲುಬಿಲ್ಲದ ನಾಲಿಗೆ. ಅವರು ರೈತ ಪರ ಎಂಬುದಾಗಿ ಹೇಳಿಕೊಳ್ಳುತ್ತಾರೆ. ಆದರೆ, ರೈತ ಪರ ಯಾವುದೇ ಕೆಲಸ ಮಾಡಲ್ಲ. ಇನ್ನೊಂದು ಪಕ್ಷ ಮಣ್ಣಿನ ಮಕ್ಕಳೆಂದೇ ಹೇಳಿಕೊಳ್ಳುತ್ತದೆ. ಆದರೆ,ಅವರು ಎಂದಿಗೂ ರೈತ ಪರ ಕೆಲಸ ಮಾಡಿದವರಲ್ಲ. ನಮ್ಮ ನಾಯಕ ಬಿ.ಎಸ್. ಯಡಿಯೂರಪ್ಪ ಮಾತ್ರಸದಾ ರೈತರ ಶ್ರಯೋಭಿವೃದ್ಧಿಗೆ ಶ್ರಮಿಸಿದವರು
ಎಂದರು.
ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇಂದು ರೈತರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ.ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ
ಪ್ರಧಾನಿಯಾಗಿದ್ದಾಗ ರೂಪಿಸಿದ್ದ ನದಿ ಜೋಡಣೆ ಯೋಜನೆಗೆ ಇದೀಗ ಕೇಂದ್ರ ಸರ್ಕಾರ ಚಾಲನೆ ನೀಡಲಿದೆ. ಇನ್ನು ರಸಗೊಬ್ಬರದ ಬೆಲೆ ಇಳಿಸಿದ್ದು
ಇತಿಹಾಸದಲ್ಲೇ ಮೊದಲು ನಾವೇ ಎಂಬುದು ನಮ್ಮ ಪಕ್ಷಕ್ಕೆ ರೈತರ ಬಗ್ಗೆ ಇರುವ ಕಾಳಜಿ ತೋರುತ್ತದೆಎಂದು ಅವರು ಪ್ರತಿಪಾದಿಸಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಾಂತರಾಜ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಪ್ರಸಾದ್, ಮಾಜಿಶಾಸಕರಾದ ಕೆ. ಮಾಡಾಳು ವಿರುಪಾಕ್ಷಪ್ಪ, ಡಾ|ಎ.ಎಚ್. ಶಿವಯೋಗಿ ಸ್ವಾಮಿ, ಎಂ. ಬಸವರಾಜ ನಾಯ್ಕ, ಮುಖಂಡರಾದ ರಮೇಶ ನಾಯ್ಕ,
ಎಚ್.ಎನ್. ಶಿವಕುಮಾರ, ಆನಂದಪ್ಪ, ಬನ್ನಿಕೋಡು ಹನುಮಂತಪ್ಪ, ತಾಪಂ ಸದಸ್ಯ ಸಂಗಜ್ಜಗೌಡ ಇತರರು ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.