ಮಹಿಳಾ ಸಮಾನತೆ ಕುರಿತು ಬಿಜೆಪಿ ದ್ವಿಮುಖ ನೀತಿ
Team Udayavani, Jan 7, 2019, 7:51 AM IST
ದಾವಣಗೆರೆ: ಒಂದೆಡೆ ಮಹಿಳಾ ಸಮಾನತೆಗೆ ಬಗ್ಗೆ ಮಾತನಾಡುವ ಬಿಜೆಪಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ವಿರೋಧಿಸುತ್ತಿದೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆ.ಸಿ.ಟಿ.ಯು) ಮುಖಂಡ ಎಚ್.ಕೆ. ರಾಮಚಂದ್ರಪ್ಪ ದೂರಿದ್ದಾರೆ.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆ.ಸಿ.ಟಿ.ಯು) ನೇತೃತ್ವದಲ್ಲಿ ಜ. 8 ಮತ್ತು 9 ರಂದು ಕರೆ ನೀಡಿರುವ ರಾಷ್ಟ್ರ ವ್ಯಾಪಿ ಹರತಾಳ, ಮುಷ್ಕರ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಹೊಂಡದ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಒಂದು ಕಡೆ ಮಹಿಳಾ ಸಮಾನತೆ, ಇನ್ನೊಂದೆಡೆ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆ ಪ್ರವೇಶಿಸುವ ಕುರಿತು ಬಿಜೆಪಿಯ ವಿರೋಧಿ ಧೋರಣೆ ನೋಡಿದರೆ ಬೇಟಿ ಪಢಾವೋ… ಬೇಟಿ ಬಚಾವೋ… ಯೋಜನೆಗೆ ಅರ್ಥ ಏನು ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ತರುವ ನೀತಿ ಜಾರಿಗೊಳಿಸುತ್ತಿದೆ. ಏಕಾಏಕಿ ಕೈಗೊಂಡ ನೋಟು ಅಮಾನ್ಯಿಕರಣ ನೀತಿಯಿಂದ ಸಣ್ಣ ಪುಟ್ಟ ವ್ಯಾಪಾರಸ್ಥರು ಅಕ್ಷರಶಃ ಬೀದಿ ಪಾಲಾಗುತ್ತಿದ್ದಾರೆ ಎಂದು ದೂರಿದರು.
ಸ್ವದೇಶಿ ಮಂತ್ರದ ಬಗ್ಗೆ ಮಾತನಾಡುವ ಬಿಜೆಪಿ ವಿದೇಶಿ ಮತ್ತು ದೇಶದ ಬಂಡವಾಳಶಾಹಿಗಳಿಗೆ ಎಲ್ಲಾ ಕಡೆಯಿಂದ ಅನುಕೂಲ ಆಗುವಂತಹ ನೀತಿ ರೂಪಿಸುತ್ತಿದೆ. ವಾಲ್‌ಮಾರ್ಟ್ ನಂತರ ಬೃಹತ್ ಬಂಡವಾಳಶಾಹಿ ಕಂಪನಿಗಳ ಪ್ರವೇಶದಿಂದ ಸಣ್ಣ ಪುಟ್ಟ ವ್ಯಾಪಾರಿಗಳು ದುಡಿಮೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಮುಂದೆ ಅದೇ ವ್ಯಾಪಾರಿಗಳು ಬಂಡವಾಳಶಾಹಿಗಳ ಕೈ ಕೆಳಗೆ ಕೆಲಸ ಮಾಡುವ ದಿನಗಳು ದೂರವೇನಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಸದಾ ಮೇಕ್ ಇನ್ ಇಂಡಿಯಾ… ಯೋಜನೆ ಬಗ್ಗೆ ಮಾತನಾಡುತ್ತಾರೆ. ಆದರೆ, ಎಲ್ಲಾ ರೀತಿಯ ಬೆಂಬಲ, ಸಹಕಾರ ನೀಡುವುದು ಮಾತ್ರ ವಿದೇಶಿ ಕಂಪನಿಗಳಿಗೆ. ಹಾಗಾದರೆ ಮೇಕ್ ಇನ್ ಇಂಡಿಯಾಕ್ಕೆ ಅರ್ಥ ಏನು ಎಂಬುದಕ್ಕೆ ಅವರೇ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಭಾರತದಲ್ಲಿ, ಅದೂ ನಮ್ಮ ಬೆಂಗಳೂರಿನ ಎಚ್‌ಎಎಲ್ ಕಂಪನಿಗೆ ರಫೇಲ್‌ನಂತಹ ಯುದ್ಧ ವಿಮಾನ ತಯಾರಿಸುವ ಎಲ್ಲಾ ಶಕ್ತಿ ಇದ್ದರೂ ಮೋದಿ ತಮಗೆ ಬೇಕಾದ ಅಂಬಾನಿ ಸಹೋದರರ ಕಂಪನಿಗೆ ವಹಿಸಿಕೊಡುವ ಮೂಲಕ ಸಾವಿರಾರು ಜನರ ಕೆಲಸ ಕಿತ್ತುಕೊಂಡಿದ್ದಾರೆ ಎಂದು ದೂರಿದರು.
ಲೋಕಸಭಾ ಚುನಾವಣೆಗೆ ಮುನ್ನ ಅಣ್ಣಾ ಹಜಾರೆಯವರು ಲೋಕಪಾಲ್… ಜಾರಿಗೆ ಒತ್ತಾಯಿಸಿ ಹೋರಾಟ ನಡೆಸಿದ್ದ ಸಂದರ್ಭದಲ್ಲಿ ತಾವು ಅಧಿಕಾರಕ್ಕೆ ಬಂದರೆ ಲೋಕ್‌ಪಾಲ್ ಜಾರಿಗೆ ತರುವುದಾಗಿ ಬಿಜೆಪಿ ಮುಖಂಡರು ಹೇಳುತ್ತಿದ್ದರು. ಅಧಿಕಾರಕ್ಕೆ ಬಂದ ನಂತರ ಲೋಕಪಾಲ್ ಬಗ್ಗೆ ಚಕಾರವೇ ಎತ್ತುತ್ತಿಲ್ಲ ಎಂದು ದೂರಿದರು.
ಎಐಯುಟಿಯುಸಿ ಮುಖಂಡ ಮಂಜುನಾಥ್ ಕೈದಾಳೆ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರ ಅತ್ಯಂತ ರಭಸದಿಂದ ಜಾರಿಗೆ ತರುತ್ತಿರುವ ನೀತಿಗಳ ದುಷ್ಪರಿಣಾಮದಿಂದ ದೇಶಕ್ಕೆ ಅನ್ನ ನೀಡುವ ಅನ್ನದಾತರು, ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರು, ಸೇವೆಗಳನ್ನು ಮಾಡುವ ನೌಕರರು, ಕೂಲಿ ನಂಬಿರುವ ಕಾರ್ಮಿಕರು ಗಂಭೀರವಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ದೂರಿದರು.
ಕೇಂದ್ರ ಸರ್ಕಾರದ ಜನ, ರೈತ, ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ, ಕನಿಷ್ಟ ವೇತನ ಜಾರಿಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆ.ಸಿ.ಟಿ.ಯು) ಜ. 8 ಮತ್ತು 9 ರಂದು ಕರೆ ನೀಡಿರುವ ರಾಷ್ಟ್ರ ವ್ಯಾಪಿ ಹರತಾಳ, ಮುಷ್ಕರಕ್ಕೆ ಸರ್ವರೂ ಬೆಂಬಲಿಸುವ ಮೂಲಕ ಕೇಂದ್ರ ಸರ್ಕಾಕ್ಕೆ ತಕ್ಕ ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡಿದರು.
ಜೆ.ಸಿ.ಟಿ.ಯು ಮುಖಂಡರಾದ ಕೆ.ಎಲ್. ಭಟ್, ಆನಂದರಾಜ್, ಆವರಗೆರೆ ಚಂದ್ರು, ಆವರಗೆರೆ ವಾಸು, ಕೆ. ಬಾನಪ್ಪ, ವಿಶಾಲಾಕ್ಷೀ ಮೃತ್ಯುಂಜಯ, ಎಂ.ಬಿ. ಶಾರದಮ, ಸರೋಜ, ಐರಣಿ ಚಂದ್ರು, ಬಾಡ ಇ. ಶ್ರೀನಿವಾಸ್, ಉಮೇಶ್ ಇತರರು ಇದ್ದರು. ಅಖ್ತರ್ ರಜಾ ವೃತ್ತದಲ್ಲೂ ಬಹಿರಂಗ ಸಭೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.