ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಕೇಂದ್ರದ ಮೇಲೆ ಆರೋಪ: ರೇಣುಕಾಚಾರ್ಯ ಟೀಕೆ


Team Udayavani, Oct 15, 2024, 4:38 PM IST

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಕೇಂದ್ರದ ಮೇಲೆ ಆರೋಪ: ಸಿಎಂ ವಿರುದ್ದ ರೇಣುಕಾ ಟೀಕೆ

ದಾವಣಗೆರೆ: ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳಲು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಯುಪಿಎ ಸರ್ಕಾರಕ್ಕಿಂತಲೂ ಮೂರು ಪಟ್ಟು ಹೆಚ್ಚು ತೆರಿಗೆ ಮತ್ತು ಹಂಚಿಕೆಯಲ್ಲಿ ಪಾಲು ನೀಡಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರಂಥ ಸ್ವಯಂಘೋಷಿತ ಹಣಕಾಸು ತಜ್ಞರಿಗೆ, ನಿರ್ದಿಷ್ಟ ಯೋಜನೆಗಳಿಗೆ ಬಿಡುಗಡೆಯಾದ ಹಣದ ಮೊತ್ತವನ್ನು ತಿಳಿದುಕೊಳ್ಳುವುದು ಕಷ್ಟವೇನಲ್ಲ. ಎಲ್ಲದಕ್ಕೂ ಕೇಂದ್ರ ಸರಕಾರನ್ನು ಏಕೆ ದೂರುತ್ತೀರಿ? ಇಂತಹ ಸಂಘರ್ಷ ಸರಿಯಲ್ಲ. ರಾಜ್ಯದ ಸಂಸದರ ಮೇಲೆ ಏಕೆ ಆರೋಪಗಳನ್ನು ಮಾಡುತ್ತೀರಿ?  ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರನ್ನು ಯಾಕೆ ಲಘುವಾಗಿ ನಡೆಸಿಕೊಳ್ಳುತ್ತೀರಿ? ಇಂತಹ ವರ್ತನೆಯಿಂದ ರಾಜ್ಯಕ್ಕೆ ಆಗುವ ಲಾಭವಾದರೂ ಏನು? ಸಂಘರ್ಷದಿಂದಲೇ ಸಮಸ್ಯೆ ಬಗೆಹರಿಯುತ್ತದೆ ಎಂದು ಭಾವಿಸುವುದು ಸರಿಯಲ್ಲ ಎಂದರು.

ರಾಜ್ಯ ಸರಕಾರ ವಾಸ್ತವ ಪರಿಸ್ಥಿತಿಯನ್ನು ಕೇಂದ್ರದ ಮುಂದೆ ಸಮರ್ಥವಾಗಿ ಇಡಬೇಕು. ಅದು ಬಿಟ್ಟು ಎಲ್ಲದಕ್ಕೂ ಕೇಂದ್ರದ ವಿರುದ್ಧ ಆರೋಪ ಮಾಡುವುದು ಸರಿಯೇ? ರಾಜ್ಯ ಸರಕಾರದಿಂದಲೇ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ತನ್ನ ರಾಜಕೀಯ ಪ್ರತಿಷ್ಠೆ ಹಾಗೂ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸರಕಾರ ರಾಜಕೀಯ ಹಿತಾಸಕ್ತಿಯ ಜತೆ ಚೆಲ್ಲಾಟ ಆಡುತ್ತಿದೆ. ರಾಜ್ಯಕ್ಕೆ ಒಳ್ಳೆಯದು ಆಗಬೇಕಾದರೆ ಪ್ರಧಾನಿಗಳಿಗೆ ಪ್ರಾಮಾಣಿಕವಾಗಿ ಮನವರಿಕೆ ಮಾಡಬೇಕು ಎಂದರು.

ಒಂದು ವೇಳೆ ಸಚಿವ ಪ್ರಿಯಾಂಕ ಖರ್ಗೆ ಅವರು ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಕೆಐಎಡಿಬಿಯಿಂದ ಪಡೆದಿದ್ದ ಜಮೀನನ್ನು ವಾಪಸ್ ಕೊಟ್ಟಿದ್ದು ಯಾಕೆ? ಜಮೀನು ವಾಪಸ್ ಕೊಟ್ಟಿದ್ದರ ಹಿಂದೆ ರಾಜಕೀಯ ಲೆಕ್ಕಚಾರ ಇದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ಮುಡಾ ಪ್ರಕರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯನವರು ಯಾವುದೇ ಕ್ಷಣದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಕ್ಷೀಪ್ರ ರಾಜಕೀಯ ಬೆಳವಣಿಗೆಗಳು ನಡೆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮೇಲೆ ಯಾವುದೇ ಕಳಂಕ ಇರಬಾರದೆಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕೆಐಎಡಿಬಿಯಿಂದ ಕಾನೂನು ಬಾಹಿರವಾಗಿ ಪಡೆದಿದ್ದ ಜಮೀನನ್ನು ವಾಪಸ್ ಕೊಟ್ಟಿದ್ದಾರೆ. ಪ್ರಿಯಾಂಕ ಖರ್ಗೆ ಅವರು ದೊಡ್ಡ ದೊಡ್ಡ ಮಾತನಾಡುವುದನ್ನು ನಿಲ್ಲಿಸಿ ಇಲಾಖೆ ಕಡೆ ಗಮನಹರಿಸಲಿ ಎಂದ ಅವರು, ಆರ್ ಎಸ್ಎಸ್ ನವರಿಗೆ ನೀಡಿದ್ದ ಜಮೀನನ್ನು ಸರ್ಕಾರ ಹಿಂಪಡೆಯಬೇಕೆಂದು ವಿಧಾನಪರಿಷತ್ ಸದಸ್ಯ ಮಂಜುನಾಥ್ ಬಂಡಾರಿ ಹೇಳಿರುವುದು ತೀವ್ರ ಖಂಡನೀಯ ಎಂದರು.

ಟಾಪ್ ನ್ಯೂಸ್

BBK11: ಅತಿರೇಕಕ್ಕೆ ತಿರುಗಿದ ಬಿಗ್‌ ಬಾಸ್‌ ಟಾಸ್ಕ್..‌ ರಜತ್‌ – ಮಂಜು ನಡುವೆ ಹೈಡ್ರಾಮಾ

BBK11: ಅತಿರೇಕಕ್ಕೆ ತಿರುಗಿದ ಬಿಗ್‌ ಬಾಸ್‌ ಟಾಸ್ಕ್..‌ ರಜತ್‌ – ಮಂಜು ನಡುವೆ ಹೈಡ್ರಾಮಾ

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

1-bntwl-1

Bantwala: ರೈಲಿನಿಂದ ಬಿದ್ದು ವ್ಯಕ್ತಿ ಸಾವು

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

Renukaswamy Case: ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಬಂದು ಕಾರು ಹತ್ತಿದ ಆರೋಪಿ ಲಕ್ಷ್ಮಣ್

Renukaswamy Case: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್‌

Sindhanur: ಲಾರಿ ಪಲ್ಟಿ… ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

1—-kumr-renuka

BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ

DVG-Duggamma

Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ

16-bjp

BJP ವಿಜಯೇಂದ್ರ ಪರ ಬಣದ ಮಹತ್ವದ ಸಭೆ ; ಯಾರ‍್ಯಾರು ಭಾಗಿ ..?

DVG-BJp-Meet

Davanagere: ನಗರದಲ್ಲಿ ಬಿ.ವೈ.ವಿಜಯೇಂದ್ರ ಬೆಂಬಲಿಗರ ಸಭೆ; 20ಕ್ಕೂ ಅಧಿಕ ನಾಯಕರು ಭಾಗಿ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

7(1

Kota: ಬ್ಲಾಕ್‌ ಲಿಸ್ಟ್‌ನಿಂದ ಅಪಾಯಕಾರಿ ಸ್ಥಳಗಳೇ ಔಟ್‌!

BBK11: ಅತಿರೇಕಕ್ಕೆ ತಿರುಗಿದ ಬಿಗ್‌ ಬಾಸ್‌ ಟಾಸ್ಕ್..‌ ರಜತ್‌ – ಮಂಜು ನಡುವೆ ಹೈಡ್ರಾಮಾ

BBK11: ಅತಿರೇಕಕ್ಕೆ ತಿರುಗಿದ ಬಿಗ್‌ ಬಾಸ್‌ ಟಾಸ್ಕ್..‌ ರಜತ್‌ – ಮಂಜು ನಡುವೆ ಹೈಡ್ರಾಮಾ

6

Mangaluru: ಕಾಂಕ್ರೀಟ್‌ ರಸ್ತೆಯ ನಡುವೆ ಹಣ್ಣಿನ ಫ‌ಸಲು!

5(1

Mangaluru: ಕದ್ರಿ ಹಿಲ್ಸ್‌  ಹುತಾತ್ಮರ ಸ್ಮಾರಕಕ್ಕೆ ಹೊಸ ರೂಪ

2-

ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.