ಪ್ರತಿಯೊಬ್ಬರಲ್ಲಿ ಅಧ್ಯಯನ ಪ್ರವೃತ್ತಿ ಹೆಚ್ಚಲಿ

ಬಾಯಿ ರುಚಿ ಕ್ಷಣಿಕ, ಪುಸ್ತಕದ ರುಚಿ ಸದಾ ಶಾಶ್ವತ: ಬಸವಪ್ರಭು ಸ್ವಾಮೀಜಿ ಅಭಿಮತ

Team Udayavani, Mar 22, 2021, 7:45 PM IST

dgsha

ದಾವಣಗೆರೆ: ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಅಧ್ಯಯನ ಮತ್ತು ಅನುಭವ ಮುಖೀಗಳಾಗಬೇಕು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಕರೆ ನೀಡಿದರು.

ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಜೆಂಬಿಗಿ ಮೃತ್ಯುಂಜಯ ಅವರ “ಮಲ್ಲಿಗೆ’ ಕವನ ಸಂಕಲನ ಹಾಗೂ “ದಾಸವಾಳ’ ಗದ್ಯ ಲೇಖನ ಕೃತಿ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಬಾಯಿ ರುಚಿ ಕ್ಷಣಿಕ. ಆದರೆ ಪುಸ್ತಕದ ರುಚಿ ಸದಾ ಶಾಶ್ವತ ಎಂದರು.

ಪುಸ್ತಕಗಳ ಅಧ್ಯಯನ ರುಚಿ ಜೀವನದಲ್ಲಿ ಸಂತೋಷ, ಯಶಸ್ಸು ಹಾಗೂ ಸಂಪತ್ತನ್ನು ತರಲಿವೆ. ಎಲ್ಲರೂ ಅಧ್ಯಯನಶೀಲತೆ, ಸಾಹಿತ್ಯದ ಓದು, ಕುಶಲ ಕೆಲಸ, ಧ್ಯಾನದಲ್ಲಿ ತೊಡಗಿ ಸಮಯದ ಸದ್ಬಳಕೆ ಮಾಡಿಕೊಳ್ಳಬೇಕು. ಜ್ಞಾನಿಗಳಲ್ಲಿರುವ ಓದುವ ಹವ್ಯಾಸ ವ್ಯವಹಾರ ಜ್ಞಾನವನ್ನ ವೃದ್ಧಿಸಲಿದೆ. ಜ್ಞಾನದ ಬಲದಿಂದ ಲೌಕಿಕ ಸಂಕಷ್ಟಗಳನ್ನು ಸಹ ಸುಲಭವಾಗಿ ಗೆಲ್ಲುವ ಶಕ್ತಿ ಬರಲಿದೆ. ಅಧ್ಯಯನಮುಖೀ ಹಾಗೂ ಅನುಭವ ಮುಖೀಗಳಾದಾಗ ಜೀವನ ಸುಂದರ ಆಗಲಿದೆ. ಎಲ್ಲರೂ ಸದ್ಭಾವನೆ ಬೆಳೆಸಿಕೊಂಡಲ್ಲಿ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಆಶಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಎಂ.ಜಿ. ಈಶ್ವರಪ್ಪ ಮಾತನಾಡಿ, ಪ್ರಸ್ತುತ ವಾತಾವರಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲೇ ಕಾವ್ಯ, ಲೇಖನ ಕಾಣಸಿಗುತ್ತಿವೆ. ಇನ್ನು 10 ವರ್ಷಗಳಲ್ಲಿ ಪುಸ್ತಕ ರೂಪದಲ್ಲಿ ಬಿಡುಗಡೆ ಬದಲಾಗಿ ಆನ್‌ಲೈನ್‌ ಮೂಲಕವೇ ಮನೆಯಲ್ಲೇ ಕುಳಿತು ಬಿಡುಗಡೆ ಮಾಡುವ ಮತ್ತು ಸಾಹಿತ್ಯಪ್ರೇಮಿಗಳು ಮನೆಯಲ್ಲಿದ್ದೇ ನೋಡುವ ದಿನಗಳು ಬಂದರೂ ಅಚ್ಚರಿಪಡಬೇಕಾಗಿಲ್ಲ ಎಂದರು.

“ಮಲ್ಲಿಗೆ’ ಕವನ ಸಂಕಲನ ಬಿಡುಗಡೆಗೊಳಿಸಿದ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಆಧುನಿಕ ತಂತ್ರಜ್ಞಾನದಿಂದ ವಿಶ್ವವೇ ಒಂದು ಸಣ್ಣ ಹಳ್ಳಿಯಂತಾಗಿದೆ. ಯಾವುದೇ ದೇಶಕ್ಕೆ ಹೋಗಲು ಕೆಲ ಗಂಟೆಗಳು ಸಾಕಾಗುವಷ್ಟು ಆಧುನಿಕ ಸೌಲಭ್ಯವಿದೆ. ಇಂದಿನ ಆಧುನಿಕ ಯುಗದಲ್ಲಿ ಹೆಣ್ಣುಮಕ್ಕಳೂ ಕೂಡ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.

ಕನ್ನಡ ಪ್ರಾಧ್ಯಾಪಕ ಡಾ| ಪ್ರಕಾಶ್‌ ಹಲಗೇರಿ ಮಾತನಾಡಿ, ಸಾಹಿತ್ಯ ಇಂದು ಹೃದಯ ವೈಶಾಲ್ಯತೆ ಬೆಳೆಸದೆ ಕೇವಲ ವ್ಯವಹಾರಿಕತೆ ಬೆಳೆಸುತ್ತಿದೆ. ಅನ್ನದ ಹಾದಿಯೂ ಆಗುತ್ತಿಲ್ಲ ಎಂದು ವಿಷಾದಿಸಿದರು. ಹಿರಿಯ ಪತ್ರಕರ್ತ ಎಚ್‌.ಬಿ. ಮಂಜುನಾಥ್‌ ಮಾತನಾಡಿ, “ಮಲ್ಲಿಗೆ’ ಸಂಕಲನದಲ್ಲಿನ ಕೆಲವು ಕವನಗಳು ಸೂಜಿಮಲ್ಲಿಗೆಯತೆ ಸಮಾಜವನ್ನು ಚುಚ್ಚುವ ಕೆಲಸ ಮಾಡಿದರೆ, ಕೆಲವು ಕವಿತೆಗಳು ದುಂಡುಮಲ್ಲಿಗೆಯಂತೆ ಓದುವ ಆಸಕ್ತಿ ಬೆಳೆಸುವಂತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಖ್ಯಾತ ಲೆಕ್ಕ ಪರಿಶೋಧಕ ಅಥಣಿ ಎಸ್‌. ವೀರಣ್ಣ “ದಾಸವಾಳ’ ಗದ್ಯ ಲೇಖನಗಳ ಕೃತಿ ಬಿಡುಗಡೆಗೊಳಿಸಿದರು. ಡಾ| ಶಶಿಕಲಾ ಕೃಷ್ಣಮೂರ್ತಿ, ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ನಿರ್ದೇಶಕಿ ಭಾರತಿಕುಮಾರ್‌ ಜೆಂಬಿಗಿ, ಸಾಹಿತಿ ಜೆಂಬಿಗಿ ಮೃತ್ಯುಂಜಯ, ಹಿರಿಯ ಸಾಹಿತಿ ಕೆ.ಎನ್‌. ಸ್ವಾಮಿ ಇತರರು ಇದ್ದರು.

ಟಾಪ್ ನ್ಯೂಸ್

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

6-kambala

Punjalakatte: ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

Chhattisgarh: ಗುತ್ತಿಗೆದಾರನ ಭ್ರಷ್ಟಾಚಾರ ಬಯಲಿಗೆಳೆದ ಯೂಟ್ಯೂಬರ್‌ ಶವವಾಗಿ ಪತ್ತೆ!

Chhattisgarh: ಗುತ್ತಿಗೆದಾರನ ಭ್ರಷ್ಟಾಚಾರ ಬಯಲಿಗೆಳೆದ ಯೂಟ್ಯೂಬರ್‌ ಶವವಾಗಿ ಪತ್ತೆ!

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

Guns and Roses Review

Guns and Roses Review: ನೆತ್ತರ ಹಾದಿ ಪ್ರೇಮ್‌ ಕಹಾನಿ

2-vitla

Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-kambala

Punjalakatte: ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

6=anadpura

Anandapura: ಅಪರಿಚಿತ ವ್ಯಕ್ತಿಯ ಶವ ಪತ್ತೆ

2-vitla

Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

JDS leader hits at Chikkaballapura

Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

6-kambala

Punjalakatte: ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

6=anadpura

Anandapura: ಅಪರಿಚಿತ ವ್ಯಕ್ತಿಯ ಶವ ಪತ್ತೆ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

Chhattisgarh: ಗುತ್ತಿಗೆದಾರನ ಭ್ರಷ್ಟಾಚಾರ ಬಯಲಿಗೆಳೆದ ಯೂಟ್ಯೂಬರ್‌ ಶವವಾಗಿ ಪತ್ತೆ!

Chhattisgarh: ಗುತ್ತಿಗೆದಾರನ ಭ್ರಷ್ಟಾಚಾರ ಬಯಲಿಗೆಳೆದ ಯೂಟ್ಯೂಬರ್‌ ಶವವಾಗಿ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.