![Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು](https://www.udayavani.com/wp-content/uploads/2025/01/maharastra-415x276.jpg)
ಬಿಎಸ್‌ವೈ ಮೀಸಲು ಸೌಲಭ್ಯ ನೀಡಬಹುದಿತ್ತು…
Team Udayavani, Sep 24, 2021, 4:10 PM IST
![bsy](https://www.udayavani.com/wp-content/uploads/2021/09/bsy-620x344.gif)
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜದ ಧೀಮಂತ ನಾಯಕರು. ಜೆ.ಎಚ್. ಪಟೇಲ್ ಮುಂತಾದ ನಾಯಕರಲ್ಲಿ ಸಾಲಿನಲ್ಲಿರುವಂತಹವರು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಸಮಾಜಕ್ಕೆ 2ಎ ಮೀಸಲಾತಿ ನೀಡಬಹುದಾಗಿತ್ತು ಎಂಬ ನಿರೀಕ್ಷೆ ಇತ್ತು ಎಂದು ಅಖೀಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಬೇಡಿಕೆ ಈಡೇರಿಸುವುದಕ್ಕೆ ಯಡಿಯೂರಪ್ಪ ಅವರಿಂದ ಆಗಲಿಲ್ಲ. ಈಗಿನ ಮುಖ್ಯಮಂತ್ರಿಗಳು ಸಹ ನಮ್ಮ ಸಮಾಜದವರೇ. ಸಮಾಜದ ಬಗ್ಗೆ ಎಲ್ಲವೂ ಗೊತ್ತಿರುವಂತಹವರು. ಹಾಗಾಗಿ 2ಎ ಮೀಸಲಾತಿ ನೀಡುವ ನಿರೀಕ್ಷೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕರ್ನಾಟಕದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ, ಇನ್ನುಳಿದ ಒಳಪಂಗಡಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ನೀಡಬೇಕು ಎಂಬುದು ನಮ್ಮ ಒತ್ತಾಯ. ಈಗಾಗಲೇ 28 ಒಳಪಂಗಡಗಳಿಗೆ ಒಬಿಸಿ ಮೀಸಲಾತಿ ನೀಡಲಾಗಿದೆ. ಇನ್ನುಳಿದವರಿಗೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರೇ ಮುಂದು ನಿಂತು ಮೀಸಲಾತಿ ಕೊಡಿಸಿದರೆ ಬಹಳ ಸಂತೋಷ ಎಂದರು.
ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹರಿಹರ ಪೀಠದ ಸ್ವಾಮೀಜಿಯ ವರನ್ನೂ ಆಹ್ವಾನಿಸಲಾಗುವುದು. ಹಿಂದೆ ನಡೆದ ಪಾದಯಾತ್ರೆಯಲ್ಲಿ ಅವರು ಭಾಗವಹಿಸಿದ್ದರು. ಕೆಲಸದ ಒತ್ತಡದ ಕಾರಣಕ್ಕೆ ಕೆಲವು ಸಭೆಗಳಿಗೆ ಆಗಮಿಸಿರಲಿಲ್ಲ. ಈಗ ಕೆಲಸದ ಒತ್ತಡ ಇಲ್ಲದೇ ಹೋದಲ್ಲಿ ಭಾಗವಹಿಸುವರು. ಅವರನ್ನೇ ಆಹ್ವಾನಿಸಿರುವಾಗ ಇಲ್ಲಿನ ಮುಖಂಡರೂ ಭಾಗವಹಿಸುವರು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಉತ್ತರ ಕರ್ನಾಟಕದಲ್ಲಿನ ನಮ್ಮ ಸಮಾಜದ ಹಲವು ಸ್ವಾಮೀಜಿಗಳು ಸರ್ಕಾರ ನಮ್ಮ ಕಡೆ ಗಮನ ಹರಿಸುತ್ತಿಲ್ಲ ಎಂಬ ಕಾರಣಕ್ಕೆ ಮತ್ತೂಂದು ಪೀಠ ಸ್ಥಾಪನೆಯ ವಿಷಯ ಪ್ರಸ್ತಾಪಿಸಿದ ಬಗ್ಗೆ ಚರ್ಚೆ ಮಾಡಲಾಗಿದೆ. ಎಲ್ಲರೂ ಒಗ್ಗೂಡಿ ಸಮಾಜಕ್ಕೆ ಮೀಸಲಾತಿ, ಸರ್ಕಾರದ ಇತರೆ ಸೌಲಭ್ಯಕ್ಕೆ ಹೋರಾಟ ನಡೆಸಲಾಗುವುದು. ಮೂರು ಪೀಠಗಳು ಇದ್ದರೂ ಸಮಾಜ ಮಾತ್ರ ಒಂದೇ ಎಂದರು.
ಟಾಪ್ ನ್ಯೂಸ್
![Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು](https://www.udayavani.com/wp-content/uploads/2025/01/maharastra-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…](https://www.udayavani.com/wp-content/uploads/2025/01/basavaraj-150x82.jpg)
Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…
![suicide (2)](https://www.udayavani.com/wp-content/uploads/2025/01/suicide-2-150x81.jpg)
Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ
![Jagdish-Shetter](https://www.udayavani.com/wp-content/uploads/2024/12/Jagdish-Shetter-150x115.jpg)
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
![Basavarj-horatti](https://www.udayavani.com/wp-content/uploads/2024/12/Basavarj-horatti-150x90.jpg)
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
![8-](https://www.udayavani.com/wp-content/uploads/2024/12/8--150x90.jpg)
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ](https://www.udayavani.com/wp-content/uploads/2025/01/sari-150x87.jpg)
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
![7-dhaka](https://www.udayavani.com/wp-content/uploads/2025/01/7-dhaka-150x90.jpg)
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
![Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು](https://www.udayavani.com/wp-content/uploads/2025/01/maharastra-150x100.jpg)
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
![Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?](https://www.udayavani.com/wp-content/uploads/2025/01/roh-150x85.jpg)
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
![Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು](https://www.udayavani.com/wp-content/uploads/2025/01/ramag-150x87.jpg)
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.