ದಾವಣಗೆರೆ ಮಹಾನಗರ ಪಾಲಿಕೆಯ ಬಜೆಟ್ ಮಂಡನೆ; ಕಿವಿಗೆ ಹೂವಿಟ್ಟು ಕಾಂಗ್ರೆಸ್ ಪ್ರತಿಭಟನೆ
Team Udayavani, Feb 21, 2023, 1:22 PM IST
ದಾವಣಗೆರೆ: ಮಹಾನಗರ ಪಾಲಿಕೆಯ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್ 17.91 ಕೋಟಿ ಉಳಿತಾಯದ ಬಜೆಟ್ ಮಂಡಿಸಿದರು.
ಮಂಗಳವಾರ ಮೇಯರ್ ಜಯಮ್ಮ ಗೋಪಿನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸತತ ಎರಡನೇಯ ಬಜೆಟ್ ಮಂಡಿಸಿದರು. ಆರಂಭಿಕ ಶಿಲ್ಕು 6725.65 ಲಕ್ಷ, 16, 401. 85 ರಾಜ್ಯ ಸರ್ಕಾರದ ಅನುದಾನ, ತೆರಿಗೆ ಮತ್ತಿತರ ಮೂಲಗಳಿಂದ ಒಟ್ಟು 49063.60 ಆದಾಯ ನಿರೀಕ್ಷಿಸಲಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಿವಿಧ ಜನಪರ ಅಭಿವೃದ್ಧಿ ಕಾರ್ಯ, ನೌಕರರು ಮತ್ತು ಸಿಬ್ಬಂದಿ ವೇತನ, ನಿರ್ವಹಣೆ ಇತರೆಗೆ ಖರ್ಚು 53998.17 ಲಕ್ಷ ಅಂದಾಜಿಸಲಾಗಿದೆ.
ಮುಂದುವರಿದ ಶಿಲ್ಕು, ರಾಜ್ಯ ಸರ್ಕಾರದ ಅನುದಾನ, ತೆರಿಗೆ ಸಂಗ್ರಹ, ಇತರೆ ಮೂಲಗಳಿಂದ ಬರುವ 49063.60 ಲಕ್ಷ ಆದಾಯದಲ್ಲಿ ಅಭಿವೃದ್ಧಿ ಕಾರ್ಯ, ವೇತನ, ನಿರ್ವಹಣೆ ಒಳಗೊಂಡಂತೆ ಇತರೆಯದಕ್ಕೆ 53998.17 ಲಕ್ಷ ಖರ್ಚು ಮಾಡಿದರೂ 1791.08 ಲಕ್ಷ ಉಳಿತಾಯ ಆಗಲಿದೆ ಎಂದು ಸೋಗಿ ಶಾಂತಕುಮಾರ್ ತಿಳಿಸಿದರು.
ಮೂರನೇ ಬಾರಿಗೂ ಉಳಿತಾಯದ ಬಜೆಟ್ ಮಂಡಿಸಲಾಗಿದೆ ಎಂದು ಬಿಜೆಪಿ ಸದಸ್ಯರು ಕರತಾಡನ, ಮೇಜು ಕುಟ್ಟುವ ಮೂಲಕ ಸ್ವಾಗತಿಸಿದರು.
ಇದನ್ನೂ ಓದಿ:ಏ.1ರಿಂದಲೇ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್: ಸಿಎಂ ಬೊಮ್ಮಾಯಿ
ಬಿಜೆಪಿಯವರ ಆಡಳಿತದ ಕೊನೆಯ ಬಜೆಟ್. ಇದರಲ್ಲಿ ಯಾವುದೇ ರೀತಿಯಲ್ಲಿ ಜನರಿಗೆ ಅನುಕೂಲ ಆಗುವ ಕೆಲಸಗಳೇ ಇಲ್ಲ. ಬರೀ ಅಂಕಿ ಅಂಶಗಳಿವೆ. ಕಳೆದ ವರ್ಷದ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಯಾವುದೇ ಕೆಲಸ ಮಾಡಿಲ್ಲ. ಇದೊಂದು ನಿರಾಸದಾಯಕ ಬಜೆಟ್ ಎಂದು ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ನಂತರ ನಡೆದ ಚರ್ಚೆಯಲ್ಲಿ ಬಿಜೆಪಿ ಸದಸ್ಯರು ಬಲವಾಗಿ ಬಜೆಟ್ ಅನ್ನು ಸಮರ್ಥಿಸಿಕೊಂಡರು. ಕಾಂಗ್ರೆಸ್‌ನ ಜಿ.ಎಸ್. ಮಂಜುನಾಥ್, ಎ. ನಾಗರಾಜ್, ಕೆ. ಚಮನ್ ಸಾಬ್ ವಿರೋಧ ವ್ಯಕ್ತಪಡಿಸಿದರು. ಉಪ ಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಸ್ಥಾಯಿ ಸಮಿತಿ ಅಧ್ಯಕ್ಷ ರಾದ ರಾಕೇಶ್ ಜಾಧವ್, ಬಿ.ಎಚ್. ಉದಯ್ ಕುಮಾರ್, ಎಸ್. ಮಂಜಾನಾಯ್ಕ, ಆಯುಕ್ತೆ ಜಿ. ರೇಣುಕಾ ಇತರರು ಇದ್ದರು.
ಹೂವು ಮುಡಿದರು
ಕಳೆದ ಫೆ. 17 ರಂದು ವಿಧಾನ ಸಭೆಯಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿದಾಗ ಕಾಂಗ್ರೆಸ್ ಸದಸ್ಯರು ಕಿವಿಗೆ ಹೂವಿಟ್ಟುಕೊಂಡು ಪ್ರತಿಭಟನೆ ವ್ಯಕ್ತಪಡಿಸಿದಂತೆ ಮಹಾನಗರ ಪಾಲಿಕೆ ಸದಸ್ಯರೂ ಕಿವಿಗೆ ಹೂವಿಟ್ಟುಕೊಳ್ಳುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.