ಜಗಳೂರು ಪಟ್ಟಣದ ತುಂಬ ಬಿಡಾಡಿ ದನಗಳ ಹಾವಳಿ
ದನಗಳು ವಾಹನಗಳ ಸಂಚಾರಕ್ಕೆ ಅಡ್ಡಿ-ಅಪಘಾತಗಳಿಗೂ ಕಾರಣ
Team Udayavani, May 28, 2019, 1:55 PM IST
ಜಗಳೂರು : ಬಿಡಾಡಿದನಗಳ ಹಾವಳಿ ನಿಯಂತ್ರಿಸಲು ಪಟ್ಟಣ ಪಂಚಾಯಿತಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.
ಸಾಮಾನ್ಯವಾಗಿ ರಾಸುಗಳನ್ನು ತಮ್ಮ ತಮ್ಮ ಮನೆ, ಜಮೀನು, ಕಣದಲ್ಲಿ ಕಟ್ಟಿ ಸಾಕಣೆ ಮಾಡುತ್ತಾರೆ. ಆದರೆ ಪಟ್ಟಣದಲ್ಲಿ ಪರಿಸ್ಥಿತಿಯೇ ಬೇರೆಯಾಗಿದೆ. ಮಾಲೀಕರು ತಮ್ಮ ದನ ಕರುಗಳನ್ನು ರಸ್ತೆಗೆ ಬಿಟ್ಟು ಸಾಕಣಿಕೆ ಮಾಡುತ್ತಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದೆ.
ಪಟ್ಟಣದ ರಸ್ತೆಯ ತುಂಬೆಲ್ಲ ನೂರಾರು ಬಿಡಾಡಿ ದನಗಳು ಕಾಣಸಿಗುತ್ತಿದ್ದು, ಯಾವ ರಸ್ತೆಯಲ್ಲಿ ನೋಡಿದರೂ ಸಹ ಇವುಗಳದ್ದೇ ಕಾರು ಬಾರು. ಹೀಗಾಗಿ ದ್ವಿಚಕ್ರ ವಾಹನ ಹಾಗೂ ಬಸ್, ಲಾರಿಗಳ ಸಂಚಾರ ಕಷ್ಟಕರವಾಗಿದ್ದು, ಅಲ್ಲದೇ ಇವುಗಳು ಅಡ್ಡ ಬರುವುದರಿಂದ ಆಪಘಾತಗಳು ಸಹ ಸಂಭವಿಸಿವೆ.
ದ್ವಿಚಕ್ರ ವಾಹನಗಳಲ್ಲಿರುವ ವಸ್ತುಗಳೇ ಮಾಯ: ಪಟ್ಟಣದ ಅಂಬೇಡ್ಕರ್ ವೃತ್ತ , ಹೊಸ ಬಸ್ ನಿಲ್ದಾಣ, ಎಸ್‌ಬಿಐ ಬ್ಯಾಂಕ್ ರಸ್ತೆ , ಮರೆನಹಳ್ಳಿ ರಸ್ತೆ ಸಮಿಪದ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿದರೆ ಅವುಗಳಲ್ಲಿರುವ ಆಹಾರ ಪದಾರ್ಥಗಳು, ದಿನಸಿ ಸಾಮಗ್ರಿ, ಹಣ್ಣು-ತರಕಾರಿಗಳನ್ನು ಬಿಡಾಡಿ ದನಗಳು ಕ್ಷಣ ಮಾತ್ರದಲ್ಲಿ ತಿನ್ನುತ್ತವೆ ಎಂದು ಹೇಳುತ್ತಾರೆ ದ್ವಿಚಕ್ರ ವಾಹನ ಸವಾರ ರಾಜಪ್ಪ.
ಮುಖ್ಯ ವೃತ್ತದಲ್ಲಿ ನಿದ್ರೆ: ಹಗಲು, ಇರುಳು ದನಗಳು ಗಾಂಧಿ ವೃತ್ತ ಹಾಗೂ ಮುಖ್ಯ ರಸ್ತೆಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತವೆ. ನಿದ್ರಗೂ ಜಾರುತ್ತವೆ. ಇದರಿಂದ ಬಸ್ ಚಾಲನೆ ಕಷ್ಟವಾಗಿದೆ. ಎಷ್ಟೇ ಹಾರನ್ ಹೊಡೆದರೂ ಸಹ ಜಾಗ ಬಿಡುವುದಿಲ್ಲ ಎನ್ನುತ್ತಾರೆ ಬಸ್ ಚಾಲಕ ನಂಜಪ್ಪ.
ರಸ್ತೆ ಬದಿ ಬಿದ್ದ ತರಕಾರಿ, ಹೋಟೆಲ್ ತ್ಯಾಜ್ಯವೇ ಇವುಗಳ ಆಹಾರ: ರಸ್ತೆ ಬದಿಯಲ್ಲಿ ಹಣ್ಣು ಹಾಗೂ ತರಕಾರಿ ವ್ಯಾಪಾರಿಗಳು ಎಸೆಯುವ ಕೊಳೆತ ಹಣ್ಣು, ತರಕಾರಿಗಳೇ ಇವುಗಳಿಗೆ ಆಹಾರ. ದಾಹ ಹಿಂಗಿಸಲು ಚರಂಡಿ ನೀರನ್ನೇ ಅವಲಂಬಿಸುತ್ತವೆ.
ರಸ್ತೆಯಲ್ಲಿ ಬಿಟ್ಟು ಹಣಗಳಿಸುವ ಮಾಲೀಕರು: ಬಿಡಾಡಿ ದನಗಳನ್ನು ರಸ್ತೆಯಲ್ಲಿಯೇ ವರ್ಷಾನುಗಟ್ಟಲೇ ಬಿಟ್ಟು ಅವು ಚನ್ನಾಗಿ ಬೆಳೆದ ಮೇಲೆ ಮಾರಾಟ ಮಾಡಿಕೊಂಡು ಹಣ ಗಳಿಸುವ ಸುಲಭ ಮಾರ್ಗವನ್ನು ಕೆಲವರು ಕಂಡು ಕೊಂಡಿದ್ದರೆ, ಇವರಿಗೆ ಅಧಿಕಾರಿಗಳೂ ಪರೋಕ್ಷವಾಗಿ ಸಹಕಾರ ನೀಡುತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಬಿಡಾಡಿ ದನಗಳ ನಿಯಂತ್ರಣಕ್ಕೆ ಪಟ್ಟಣ ಪಂಚಾಯ್ತಿ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.