ಮತ್ತೆ ಬಂತು ಕಾಡಾನೆ; ಜನ ಭಯಭೀತ

ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳಿದ ದಂಪತಿಗೆ ಎದುರಾದ ಗಜ | ಬೆನ್ನಟ್ಟಿ ಎಳೆದಾಡಿ ಹೋದ ಕಾಡಾನೆ

Team Udayavani, Feb 14, 2020, 11:28 AM IST

14-February-3

ಚನ್ನಗಿರಿ: ಕಳೆದ ವರ್ಷ ಜುಲೈ ತಿಂಗಳಲ್ಲಿ ನಡೆದ ಆಪರೇಷನ್‌ ಉಬ್ರಾಣಿ ಕಾರ್ಯಾಚರಣೆ ನಂತರ ಕಾಡಾನೆಗಳ ಹಾವಳಿಯಿಂದ ನಿಟ್ಟುಸಿರು ಬಿಟ್ಟಿದ್ದ ತಾಲೂಕಿನಲ್ಲಿ ಮತ್ತೂಮ್ಮೆ ಕಾಡಾನೆಯೊಂದು ಸದ್ದುಮಾಡಿದ್ದು ಜನತೆ ಭಯಭೀತರಾಗಿದ್ದಾರೆ.

ತಾಲೂಕಿನ ಕೋಗಲೂರು, ಭೀಮನೆರೆ ಗ್ರಾಮದ ಸುತ್ತಮುತ್ತಲು ಗುರುವಾರ ಬೆಳಗಿನ ಜಾವ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು. ಕೋಗಲೂರು ಗ್ರಾಮದ ಹೊರವಲಯದಲ್ಲಿ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ಶೈಲೇಂದ್ರ ದಂಪತಿ ತೋಟವೊಂದರಿಂದ ದಿಢೀರ್‌ ಎದುರಿಗೆ ಬಂದ ಕಾಡಾನೆಯನ್ನು ನೋಡಿ ಬೆಚ್ಚಿ ಓಡಿದ್ದಾರೆ. ಅವರನ್ನು ಬೆನ್ನತ್ತಿದ ಕಾಡಾನೆ ಓಡಿಸಿಕೊಂಡು ಹೋಗಿ ರಸ್ತೆಯ ಮೇಲೆ ಎಳೆದಾಡಿ ಬಿಟ್ಟು ಹೋಗಿದೆ. ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕೋಗಲೂರು ಸುತ್ತಮುತ್ತ ಗ್ರಾಮಗಳಲ್ಲಿ ಕಟ್ಟೆಚ್ಚರ: ಕಾಡಾನೆ ದಾಳಿ ಕುರಿತು ದಂಪತಿಯಿಂದ ಮಾಹಿತಿ ಪಡೆದ ಗ್ರಾಮಸ್ಥರು ಕಾಡಾನೆ ಹುಡುಕಿ ಹೊರಟಿದ್ದು. ತೋಟ, ಹೊಲ-ಗದ್ದೆಯಲ್ಲಿ ಹುಡುಕಾಡಿ, ಆನೆ ಕಂಡ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಗ್ರಾಮಸ್ಥರೊಂದಿಗೆ ಸೇರಿ ಕಾಡಾನೆಯನ್ನು ಬೆದರಿಸಿ ಓಡಿಸಲು ಯತ್ನಿಸಿದ್ದಾರೆ. ಆನೆ ಸದ್ಯ ಕೋಗಲೂರು ಮತ್ತು ಭೀಮನೆರೆ ಗ್ರಾಮದ ಮಧ್ಯೆ ಹತ್ತಿ ಹೊಲದಲ್ಲಿ ಸೇರಿಕೊಂಡಿದೆ ಎನ್ನಲಾಗಿದೆ. ಇದರಿಂದ ಯಾರೊಬ್ಬರೂ ಒಂಟಿಯಾಗಿ ಹೊಲ, ತೋಟ, ಗದ್ದೆಗಳಲ್ಲಿ ತಿರುಗಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಈ ಹಿಂದೆ 2 ಜೀವ ಬಲಿ ಪಡೆದಿದ್ದ ಕಾಡಾನೆಗಳು: 2019 ಜುಲೈ ತಿಂಗಳಲ್ಲಿ ಉಬ್ರಾಣಿ ಮತ್ತು ಹೊಸಹಳ್ಳಿ ಭಾಗದಲ್ಲಿ ಜೋಡಿ ಕಾಡಾನೆಗಳು ದಾಳಿ ನಡೆಸಿದ್ದಾಗ 2 ಜೀವ ಬಲಿ ಪಡೆದಿದ್ದವು. ಈ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೆ ಕಾಡಾನೆಗಳ ಸದ್ದು ಕೇಳಿಬಂದಿದ್ದು, ಜನತೆ ಭಯಭೀತರಾಗಿದ್ದಾರೆ. ಸದ್ಯ ಕಾಡಾನೆಯನ್ನು ಕಾಡಿನತ್ತ ಓಡಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ.

ಹಬ್ಬಿವೆ ವದಂತಿ
ಕೋಗಲೂರು ಗ್ರಾಮದಲ್ಲಿ ಕಾಡಾನೆ ಕಾಣಿಸಿಕೊಳ್ಳುತ್ತಿದ್ದಂತೆ ಬಸವಾಪಟ್ಟಣ, ಸಂತೆಬೆನ್ನೂರು, ಹೊಸಹಳ್ಳಿ, ಜೋಳದಾಳ್‌ ಸೇರಿದಂತೆ ತಾಲೂಕಿನ ಎಲ್ಲಾ ಕಡೆಗಳಲ್ಲಿಯೂ ಕಾಡಾನೆಗಳು ಕಾಣಿಸಿಕೊಂಡಿದೆ ಎಂಬ ವಂದತಿಗಳು ಹರಿದಾಡುತ್ತಿದ್ದು, ಭಯಭೀತರಾದ ಹಳ್ಳಿಗರು ಮನೆಗಳಿಂದ ಹೊರಗಡೆ ಬರುತ್ತಿಲ್ಲ.

ಎಂದಿನಂತೆ ಪತ್ನಿ ಜೊತೆ ಬೆಳಗ್ಗೆ 5 ಗಂಟೆಗೆ ಆನಂದ್‌ ನಾಯ್ಕ, ಚನ್ನಗಿರಿ ವಲಯ ಅರಣ್ಯಾಧಿಕಾರಿ ತೋಟದ ರಸ್ತೆಯಲ್ಲಿ ವಾಯವಿಹಾರಕ್ಕೆ ತೆರಳಿದ್ದೆ. ನೋಡ ನೋಡುತ್ತಿದ್ದಂತೆ ತೋಟವೊಂದರಿಂದ ಕಾಡಾನೆ ಎದುರಿಗೆ ಬಂತು. ತಕ್ಷಣ ಓಡಲು ಶುರು ಮಾಡಿದೆವು. ನನ್ನ ಪತ್ನಿ ಕೆಳಗಡೆ ಬಿದ್ದರು. ಕಾಡಾನೆ ಸೊಂಡಿಲಿನಿಂದ ಅವಳನ್ನು ಎಳೆದಾಡಿ ಬೇರೆಡೆ ಓಡಿತು. ಈ
ಘಟನೆಯಿಂದ ಮರಳಿ ಜೀವ ಬಂದಂತಾಗಿದೆ.
ಶೈಲೇಂದ್ರ, ಕೋಗಲೂರು ಗ್ರಾಮಸ್ಥ

ಸಾಸ್ವೇಹಳ್ಳಿ ಕಡೆಯಿಂದ ಮರಿ ಕಾಡಾನೆಯೊಂದು ತಪ್ಪಿಸಿಕೊಂಡು ಬಂದಿದೆ. ಸದ್ಯ ಅದು ಭೀಮನೆರೆ ಸಮೀಪದಲ್ಲಿ ಸೇರಿಕೊಂಡಿದೆ. ಜನರ ಆರ್ಭಟದಿಂದ ಬೆಚ್ಚಿರುವ ಮರಿ ಕಾಡಾನೆ ಹತ್ತಿ ಹೊಲದಿಂದ ಹೊರಗಡೆ ಬರುತ್ತಿಲ್ಲ. ಆ ಕಾಡಾನೆಯನ್ನು ಮತ್ತೆ ಸುರಕ್ಷಿತವಾಗಿ ಕಾಡಿನತ್ತ ಓಡಿಸಲಾಗುವುದು. ಜನತೆ ಹೆದರುವುದು ಬೇಡ. ವಿವಿಧೆಡೆ ಸುಮಾರು ಆನೆಗಳು ಬಂದಿವೆ ಎಂಬ ವದಂತಿಗಳಿಗೆ ಕಿವಿ ಕೊಡಬೇಡಿ. ಕಾಡಾನೆ ಕಂಡ ತಕ್ಷಣ ಇಲಾಖೆಗೆ ಮಾಹಿತಿ ನೀಡಿ.
ಆನಂದ್‌ ನಾಯ್ಕ,
ಚನ್ನಗಿರಿ ವಲಯ ಅರಣ್ಯಾಧಿಕಾರಿ

ಶಶೀಂದ್ರ ಸಿ.ಎಸ್‌. ಚನ್ನಗಿರಿ

ಟಾಪ್ ನ್ಯೂಸ್

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.