ವಿಜೃಂಭಣೆಯ ಬಸವೇಶ್ವರ ರಥೋತ್ಸವ
Team Udayavani, Mar 3, 2017, 1:15 PM IST
ಮಲೇಬೆನ್ನೂರು: ಪಟ್ಟಣದ ಧಾರ್ಮಿಕದತ್ತಿ ಮತ್ತು ಮುಜರಾಯಿ ಇಲಾಖೆಯ ಬಸವೇಶ್ವರ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜೃಂಭಣೆಯಿಂದ ನೆರವೇರಿತು. ರಥಕ್ಕೆ ಉಪತಹಶೀಲ್ದಾರ್ ಕಲೀಂವುಲ್ಲಾ ಮತ್ತು ರಾಜಸ್ವನಿರೀಕ್ಷಕ ರವಿ ಅವರು ಪೂಜೆ ಸಲ್ಲಿಸಿದರು.
ನಂತರ ಗ್ರಾಮದ ದೇವತೆಗಳು ರಥಕ್ಕೆ ಪ್ರದಕ್ಷಿಣೆ ಹಾಕಿದವು. ಭಕ್ತರು ಹರಹರ ಮಹೇವ ಎಂದು ಘೋಷಣೆ ಕೂಗುತ್ತಾ ತೆಂಗಿನ ಕಾಯಿಗಳನ್ನು ರಥದ ಗಾಲಿಗೆ ಅರ್ಪಿಸಿದರು. ನಂತರ ರಥವನ್ನು ನೂರಾರು ಭಕ್ತರು ಎಳೆದು ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ಪೂಜೆ ಸಲ್ಲಿಸಿದ ನಂತರ ಬೀರಲಿಂಗೇಶ್ವರ ಕಾರ್ಣಿಕೋತ್ಸವ ನೆರವೇರಿತು.
“ಮುತ್ತಿನ ಕಂಬಳಿಗೆ ಕಾಳಿಂಗ ಸರ್ಪ ಬೆನ್ನು ಹತ್ತೀತು ನಾನೀದಿನಿ’ ಎಂದು ಅವಾಹಿತನು ಬಿಲ್ಲನ್ನು ಏರಿ ನುಡಿದನು. ಗ್ರಾಮದ ಆಂಜನೇಯಸ್ವಾಮಿ, ಏಕನಾಥೇಶ್ವರಿ, ಚೌಡೇಶ್ವರಿ, ಮಾರಿಕಾಂಬ, ಬೀರಲಿಂಗೇಶ್ವರಸ್ವಾಮಿ, ಕಲ್ಲೇಶ್ವರ, ಭೂತಪ್ಪ ಮುಂತಾದ ದೇವರುಗಳ ಸಮ್ಮುಖದಲ್ಲಿ, ನಂದಿಕೋಲು, ಡೊಳ್ಳು, ಹಲಗೆ, ಭಜನಾ ಮಂಡಳಿಗಳು, ಕೀಲು ಕುದುರೆ, ಜಾಂಜ್ ಮೇಳ, ಸಮಾಳ, ತಮಟೆ ವೃಂದ, ಡ್ರಂ ಸೆಟ್ ಮುಂತಾದ ಜನಪದ ಕಲಾವಾದ್ಯಗಳು ರಥೋತ್ಸವಕ್ಕೆ ಮೆರಗು ನೀಡಿದವು.
ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಭಕ್ತರಿಗೆ ಮಜ್ಜಿಗೆ ಮತ್ತು ಕುಡಿಯುವ ನೀರು ವಿತರಿಸಿದರು. ಮುಜರಾಯಿ ಇಲಾಖೆ ಅಧಿಧಿಕಾರಿಗಳು ಬಸವೇಶ್ವರ ಹಾಗೂ ಕಲ್ಲೇಶ್ವರ ದೇವಸ್ಥಾನದ ಧರ್ಮದರ್ಶಿ ಮಂಡಳಿಯ ಪದಾಧಿಕಾರಿಗಳು ಹಾಗೂ ಕುಂಬಳೂರು, ನಿಟ್ಟೂರು, ಕೊಮಾರನಹಳ್ಳಿ, ದಿಬ್ಬದಹಳ್ಳಿ, ಬಸಾಪುರ, ಬೇವಿನಹಳ್ಳಿ, ಮಲೇಬೆನ್ನೂರು ಪಟ್ಟಣದ ಭಕ್ತಾದಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ಮಾಂಬಾಡಿ ಸುಬ್ರಹ್ಮಣ್ಯ ಭಟ್ ಗೆ ಕರ್ನಾಟಕ ಯಕ್ಷಗಾನ ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿ ಘೋಷಣೆ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.