Davanagere ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಪ್ರಾರಂಭಕ್ಕೆ ತಿಕ್ಕಾಟ; ಕೊನೆಗೆ ಮುಂದೂಡಿಕೆ
Team Udayavani, Jan 16, 2025, 2:29 PM IST
ದಾವಣಗೆರೆ: ಮೇಯರ್ ಕೆ. ಚಮನ್ ಸಾಬ್ ಅಧ್ಯಕ್ಷತೆಯಲ್ಲಿ ಗುರುವಾರ (ಜ.16) ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸಾಮಾನ್ಯ ಸಭೆಯ ಪ್ರಾರಂಭಕ್ಕೆ ಬಹಳಷ್ಟು ತಿಕ್ಕಾಟ ನಡೆಯಿತು.
ನಿಗದಿತ ಸಮಯಕ್ಕಿಂತಲೂ ಒಂದು ಗಂಟೆಗೂ ಹೆಚ್ಚು ಕಾಲ ಕಳೆದರೂ ಸಭೆಯೇ ಪ್ರಾರಂಭವಾಗಲಿಲ್ಲ. ಮೇಯರ್ ಕೆ. ಚಮನ್ ಸಾಬ್ ಅವರು ಸಭೆ ಪ್ರಾರಂಭಿಸುವಂತೆ ಹಲವಾರು ಬಾರಿ ರೂಲಿಂಗ್ ನೀಡಿದರು. ಆದರೂ, ಸಭೆ ಪ್ರಾರಂಭವಾಗಲೇ ಇಲ್ಲ.
ಆಡಳಿತಾರೂಢ ಕಾಂಗ್ರೆಸ್ ನ ಎ. ನಾಗರಾಜ್, ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಅವರು ಸ್ವಲ್ಪ ಸಮಯ ಕಾಯುವಂತೆ ಕೋರಿದರು. ಅದರಂತೆ ಸಭೆ ಪ್ರಾರಂಭಕ್ಕೆ ಮೇಯರ್ ಸಮಯ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷರು, ಕಾಂಗ್ರೆಸ್ ಸದಸ್ಯರ ಆಗಮನಕ್ಕಾಗಿ ಕಾಯಲಾಯಿತು. ಆದರೂ, ಯಾರೂ ಬರಲಿಲ್ಲ.
ಈತನ್ಮಧ್ಯೆ ಕಾಂಗ್ರೆಸ್ ಸದಸ್ಯ ಎ. ನಾಗರಾಜ್, ಕೆ. ಅಬ್ದುಲ್ ಲತೀಫ್ ಮೇಯರ್ ಚಮನ್ ಸಾಬ್ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಮೇಯರ್ ಚಮನ್ ಸಾಬ್, ಇದೇನು ಅಂಗಡೀನಾ ವ್ಯಾಪಾರ ಮಾಡಲು? ಅದೆಲ್ಲ ಆಗೊಲ್ಲ. ಕೆಲವರು ಸಭೆಗೆ ಬರದೆ ಇರುವುದು ಸಾಹುಕಾರ್ (ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್) ಅವರಿಗೆ ಅವಮಾನ ಮಾಡಿದಂತೆ. ಎಲ್ಲವನ್ನೂ ಸಾಹುಕಾರ್ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷರೊಬ್ಬರ ಪತಿ ಸಹ ಮೇಯರ್ ಅವರ ಜೊತೆ ಮಾತುಕತೆ ನಡೆಸಿದರು.
ಕೆಲ ಸಮಯದ ನಂತರ ಉಪ ಮೇಯರ್ ಸೋಗಿ ಶಾಂತಕುಮಾರ್, ಆಯುಕ್ತೆ ಜಿ. ರೇಣುಕಾ ಸಭೆಯಿಂದ ತೆರಳಿದ ಕೆಲ ಹೊತ್ತಿ ನಲ್ಲೇ ವಾಪಸ್ ಬಂದರು. ಆಗ ಬಿಜೆಪಿಯ ಸದಸ್ಯರು, ಮೇಡಂ ಪಂಚಾಯಿತಿ ಸಕ್ಸೆಸ್ ಆಯಿತಾ…? ಎಂದು ಪ್ರಶ್ನಿಸಿದರು.
ಈ ನಡುವೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್. ತಿಪ್ಪಣ್ಣ ನಿಧನರಾಗಿದ್ದಾರೆ. ಅವರಿಗೆ ಗೌರವ ಸಲ್ಲಿಸಬೇಕು. ಹಾಗಾಗಿ ಸಭೆಯನ್ನು ಅರ್ಧ ಗಂಟೆ ಕಾಲ ಸಭೆಯನ್ನು ಮುಂದೂಡಲಾಗಿದೆ ಎಂದು ಮೇಯರ್ ಕೆ. ಚಮನ್ ಸಾಬ್ ರೂಲಿಂಗ್ ನೀಡಿದರು.
ಆದರೆ, ಬಿಜೆಪಿಯ ಸದಸ್ಯರು, ಮೊದಲು ಸಭೆ ಪ್ರಾರಂಭಿಸಿ, ಎಚ್. ತಿಪ್ಪಣ್ಣ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸೋಣ ಎಂದರು. ಸಭೆ ಅರ್ಧ ಗಂಟೆ ಮುಂದೂಡುವಂತೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.
ಕೊನೆಗೂ ಸಭೆ ಪ್ರಾರಂಭವಾಯಿತು. ಶೂನ್ಯ ವೇಳೆಯಲ್ಲಿ ಬಿಜೆಪಿಯ ಕೆ. ಪ್ರಸನ್ನ ಕುಮಾರ್, ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಮೇಯರ್ ಅವರ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿ, ಮೇಯರ್ ಅವರು ಒಳ್ಳೆಯವರು. ಆದರೆ, ಅವರು ಅಭಿವೃದ್ಧಿ, ಅವರದ್ದೇ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಫೇಲ್ ಆಗಿದ್ದಾರೆ ಎಂದು ತಿಳಿಸಿದರು. ಫೇಲ್ ಫೇಲ್ ಮೇಯರ್ ಫೇಲ್ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು.
ಸಾಮಾನ್ಯ ಸಭೆಯಲ್ಲಿ ಭಿತ್ತಿಪತ್ರ ಪ್ರದರ್ಶನ ಮಾಡುವುದಕ್ಕೆ ನಿಷೇಧವಿದೆ. ಭಿತ್ತಿಪತ್ರ ಪ್ರದರ್ಶನ ಮಾಡಿರುವುದರಿಂದ ಸಭೆಯನ್ನು ಒಂದು ಗಂಟೆ ಮುಂದೂಡಿರುವುದಾಗಿ ತಿಳಿಸಿ ಹೊರ ನಡೆದರು.
ಬಿಜೆಪಿ ಸದಸ್ಯರು, ತಮ್ಮ ತಪ್ಪು ಮುಚ್ಚಿಕೊಳ್ಳುವ ಉದ್ದೇಶದಿಂದ ಸಭೆ ಮುಂದೂಡಲಾಗುತ್ತಿದೆ ಎಂದು ಘೋಷಣೆ ಕೂಗಿದರು. ಅಂತಿಮವಾಗಿ ಸಭೆಯನ್ನು ಮುಂದೂಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Honnali: ಮಹಿಳೆಯನ್ನು ತವರಿನಿಂದ ಒತ್ತಾಯಪೂರ್ವಕವಾಗಿ ಕರೆದುಕೊಂಡ ಹೋದ ಪತಿ, ಸಂಬಂಧಿಕರು
ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನಕ್ಕೆ ಪ್ರಣವಾನಂದ ಸ್ವಾಮೀಜಿ ಆಗ್ರಹ
CM Post: ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
Congress: ಇದೇ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ ಅರ್ಜುನ್ ಜನ್ಯಾ ನಿರ್ದೇಶನದ ʼ45ʼ ಸಿನಿಮಾ
Mumbai Unsafe; ಒಂದು ಘಟನೆಯಿಂದ ಹೀಗೆ ಹೇಳುವುದು ಸರಿಯಲ್ಲ: ಸಿಎಂ ಫಡ್ನವಿಸ್
RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್ ಆಫ್ ಸ್ಪಿನ್ನರ್ ಎಂಟ್ರಿ
Saif Ali Khan ಬೆನ್ನುಮೂಳೆಯಿಂದ ಚಾಕು ತೆಗೆದ ವೈದ್ಯರು; ಅಪಾಯದಿಂದ ಪಾರು
Thirthahalli: ನೇಣಿಗೆ ಶರಣಾದ ಹೋಟೆಲ್ ಉದ್ಯಮಿ… ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.