ತಹಶೀಲ್ದಾರ್ ಕಚೇರಿಯಲ್ಲಿ ನೀರಿಗೆ ಬರ!
Team Udayavani, May 16, 2017, 12:54 PM IST
ಚನ್ನಗಿರಿ: ತಾಲೂಕು ಆಡಳಿತ ಕೇಂದ್ರವಾದ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕುಡಿಯುವ ನೀರಿನ ತೊಂದರೆಯಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಇಲಾಖೆಗಳಲ್ಲಿಯೇ ಕುಡಿಯುವ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕು ಆಡಳಿತವಾದ ತಹಶೀಲ್ದಾರ್ ಕಚೇರಿಯಲ್ಲಿ ಕಳೆದ ತಿಂಗಳಿನಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಸಿಗದೇ ನೀರಿಗಾಗಿ ಕಚೇರಿ ಮುಂಭಾಗದಲ್ಲಿರುವಂತಹ ಹೋಟೆಲ್‌ಗಳ ಮೊರೆ ಹೋಗಬೇಕಾಗಿದೆ. ದಿನ ನಿತ್ಯ ಕೆಲಸ ವಹಿವಾಟುಗಳಿಗಾಗಿ ಗ್ರಾಮೀಣ-ನಗರ ಪ್ರದೇಶಗಳಿಂದ ಜನರು ಇಲ್ಲಿಗೆ ಬರುತ್ತಾರೆ.
ಅದರೆ ಬಾಯಾರಿಕೆ ನಿವಾರಿಸಕೊಳ್ಳಲು ಕುಡಿಯುವ ನೀರು ಸಿಗುತ್ತಿಲ್ಲ. ಇದರ ಬದಲಾಗಿ ದುರಸ್ತಿಯಲ್ಲಿರುವ ನೀರಿನ ಟ್ಯಾಂಕರ್ ಮಾತ್ರ ಕಾಣಸಿಗುತ್ತದೆ. ಕ್ರಮೇಣ ಸುಸಜ್ಜಿತ ಕಟ್ಟಡದಲ್ಲಿ ತಾಲೂಕು ಕಚೇರಿ ನಿರ್ಮಾಣಗೊಂಡಿದ್ದು, ಇಲ್ಲಿ ಸರ್ಕಾರ ಜನತೆಗೆ ಅನುಕೂಲವಾಗಲೆಂದು ಒಂದೇ ಸೂರಿನಲ್ಲಿ ಹಲವು ಇಲಾಖೆಗಳು ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.
ದಿನ-ನಿತ್ಯ ಕನಿಷ್ಠವೆಂದರೂ 300ರಿಂದ 500ಕ್ಕೂ ಹೆಚ್ಚು ಜನ ಈ ಇಲಾಖೆಗಳಿಗೆ ಬಂದು ಹೋಗುತ್ತಾರೆ. ಆದರೂ ಸಂಬಂಧಪಟ್ಟ ಅಧಿಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳದಿರುವುದು ಜನರ ಹಿಡಿಶಾಪಕ್ಕೆ ಕಾರಣವಾಗಿದೆ.
ಟೀ-ಕಾಫಿ ಕುಡಿದರೆ ನೀರು: ಗ್ರಾಮೀಣ ಪ್ರದೇಶಗಳಿಂದ ಬಂದಂತಹ ಜನರು. ಹೋಟೆಲ್‌ಗಳಲ್ಲಿ ನೀರು ಕುಡಿಯೋಲಿಕೆ ಹೋದರೆ ಟೀ-ಕಾಫಿ ಕುಡಿದರೆ ಮಾತ್ರ ನೀರು ಸಿಗುತ್ತದೆ. ಜಮೀನು ವ್ಯಾಜ್ಯ ಸೇರಿದಂತೆ ಹಲವು ಸಮಸ್ಯೆಗಳ ನಿವಾವರಣೆ ಬರುವಂತಹ ರೈತರು ಹಾಗೂ ಸಾರ್ವಜನಿಕರು ತಮ್ಮ ಕೆಲಸವನ್ನು ಮುಗಿಸಿಕೊಳ್ಳುವುದಕ್ಕೆ ದಿನವಿಡಿ ಕಾಯಬೇಕು. ಕಚೇರಿಯಲ್ಲಿಯೇ ಕಾಲಕಳೆಯಬೇಕಾದ ಸ್ಥಿತಿ ಇರುತ್ತದೆ.
ಇಂತಹದರ ನಡುವೇ ಬೀರು ಬಿಸಿಲಿನ ಜಳಕ್ಕೆ ತತ್ತರಿಸಿದ ಜನತೆ ಕುಡಿಯಲು ನೀರು ಸಿಗದೇ ಪರದಾಡ ಬೇಕಾಗಿದೆ. ಫುಟ್‌ಪಾತ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಟೆಲ್- ಗೂಡಂಗುಡಿಗಳಲ್ಲಿ ಸಿಗುವ ನೀರನ್ನೇ ಅನಿವಾರ್ಯವಾಗಿ ಕುಡಿಯಬೇಕಾಗಿದೆ.
ಇನ್ನೂ ಸ್ಥಿತಿವಂತರು ಶುದ್ಧವಾದ ವಾಟರ್ ಬಾಟಲಿಗಳ ನೀರು ದಾಹ ತೀರಿಸಿಕೊಳ್ಳುತ್ತಾರೆ. ಸರ್ಕಾರ ಕುಡಿಯುವ ನೀರಿನ ಸೌಲಭ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದರೂ ಇಲ್ಲಿನ ಸರ್ಕಾರಿ ಇಲಾಖೆಗಳಲ್ಲಿ ಕುಡಿಯುವ ನೀರು ಸಿಗದೇ ಇರುವುದು ವಿಪರ್ಯಾಸ.
ಶೌಚಾಲಯಗಳ ನಿರ್ವಹಣೆಯಲ್ಲಿ ವಿಫಲ: ತಾಲೂಕು ಕಚೇರಿಯಲ್ಲಿ ಶೌಚಾಲಯಗಳು ಇದ್ದೂ ಇಲ್ಲದಂತಾಗಿವೆ. ಅವುಗಳ ನಿರ್ವಹಣೆ ಮಾಡುವಲ್ಲಿ ಅಧಿಧಿಕಾರಿಗಳು ವಿಫಲಗೊಂಡಿದ್ದಾರೆ. ಕಚೇರಿ ಹಿಂಭಾಗದಲ್ಲಿನ ಆವರಣವನ್ನೇ ಶೌಚವಾಗಿ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿಗೆ ಆಗಮಿಸುವ ಪುರುಷರು ಹಾಗೂ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಕುಡಿಯುವ ನೀರು ಹಾಗೂ ಶೌಚಾಲಯಗಳ ನಿರ್ವಹಣೆಗೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
* ಸಿ.ಎಸ್. ಶಶೀಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.