ಷಟ್ಪಥ ಕಾಮಗಾರಿತ್ವರಿತವಾಗಿ ಮುಗಿಸಿ
Team Udayavani, Dec 7, 2018, 2:56 PM IST
ದಾವಣಗೆರೆ: ಸಾರ್ವಜನಿಕರಿಗೆ ತೊಂದರೆಯಾಗದಂತೆ ಅತ್ಯಂತ ತ್ವರಿತವಾಗಿ ಚಿತ್ರದುರ್ಗ-ದಾವಣಗೆರೆ-ಹರಿಹರ-ಹುಬ್ಬಳ್ಳಿವರೆಗಿನ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಕಾರ್ಯೋನ್ಮುಖರಾಗುವಂತೆ ಸಂಸದ ಜಿ.ಎಂ. ಸಿದ್ದೇಶ್ವರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗುರುವಾರ, ಜಿಎಂಐಟಿ ಅತಿಥಿ ಗೃಹದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇನು ಕೈಯಿಂದ ದುಡ್ಡು ಹಾಕುವುದಿಲ್ಲ. ಸರ್ಕಾರ ಅನುದಾನ ಕೊಡುತ್ತದೆ. ನೀವು ಕೆಲಸ ಮಾಡಿ, ಏನಾದರೂ ಸಮಸ್ಯೆ ಎದುರಾದರೆ ನನಗೆ ತಿಳಿಸಿ. ಮಂತ್ರಿಗಳಿಗೆ ಹೇಳಿ ಮಂಜೂರು ಮಾಡಿಸಿ ಕೊಡುತ್ತೇನೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ತ್ವರಿತವಾಗಿ ಕಾಮಗಾರಿ ಮುಗಿಯಬೇಕು ಎಂದರು. ಷಟ್ಪಥ ಹೆದ್ದಾರಿ ಕಾಮಗಾರಿ ವೇಳೆ ಹಳ್ಳಿಗಳ ಬಳಿ ಸಾರ್ವಜನಿಕರು ಕೆಲಸಕ್ಕೆ ಅಡ್ಡಿಪಡಿಸುತ್ತಿರುವುದರಿಂದ ಕಾಮಗಾರಿ ವೇಗವಾಗಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅದರಿಂದ ಕಾಮಗಾರಿ ಚುರುಕಾಗಿ ನಡೆಯುತ್ತಿಲ್ಲ ಎಂದ ಪ್ರಾಧಿಕಾರದ ಅಧಿಕಾರಿಗಳು ಸಂಸದ ಗಮನಕ್ಕೆ ತಂದರು.
ಆಯಾಯ ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಬೇಕು. ಚರ್ತುಷ್ಪಥ ಕಾಮಗಾರಿ ಸಂದರ್ಭದಲ್ಲೇ ಪ್ರಾಧಿಕಾರದವರು ಸಾಕಷ್ಟು ಲೋಪ ಎಸಗಿದ್ದೀರಿ. ಆ ಲೋಪಗಳನ್ನು ಈಗ ಸರಿಪಡಿಸಿಕೊಡಬೇಕು ಎಂಬುದಾಗಿ ನಾನೇ ಸಾಕಷ್ಟು ಬಾರಿ ಹೇಳಿದ್ದೇನೆ.
ನಾನು ಗ್ರಾಮಸ್ಥರ ಪರವಾಗಿ ನಿಲ್ಲುತ್ತೇನೇಯೇ ವಿನ: ಪ್ರಾಧಿಕಾರದ ಪರವಾಗಿ ನಿಲ್ಲುವುದಿಲ್ಲ. ಹೆದ್ದಾರಿ ಪ್ರಾಧಿಕಾರದವರ ತಪ್ಪುಗಳಿಂದಾಗಿ ಸಾಕಷ್ಟು ಸಾವು, ನೋವು ಸಂಭವಿಸಿದ್ದು, ಅಂತಹ ಸಾವುನೋವುಗಳಿಗೆ ಬೆಲೆ ಕಟ್ಟಲು ಸಾಧ್ಯವೆ? ಪ್ರಾಧಿಕಾರದವರು ಮಾಡಿರುವ ತಪ್ಪಿಗೆ ಸಾರ್ವಜನಿಕರು ಏಕೆ ಬೆಲೆ ತೆರಬೇಕು ಎಂದು ಸಿದ್ದೇಶ್ವರ್ ಪ್ರಶ್ನಿಸಿದರು.
ದಾವಣಗೆರೆಯ ಹದಡಿ ಸೇತುವೆಯಿಂದ ಹರಿಹರ- ಬ್ಬಳ್ಳಿವರೆಗೆ ಇರಾನ್ ಕಂಪನಿಯವರಿಗೆ ಗುತ್ತಿಗೆ ನೀಡಲಾಗಿದೆ. ದಾವಣಗೆರೆಯ ಬೈಪಾಸ್‌ನಲ್ಲಿ ಬನಶಂಕರಿ ಬಡಾವಣೆಗೆ ಹೋಗುವ ಸೇತುವೆ ವಿಸ್ತರಣೆ, ಎರಡೂ ಕಡೆಗಳಲ್ಲಿ ಸರ್ವೀಸ್ ರಸ್ತೆ, ಹೊಸಕುಂದುವಾಡ ಮತ್ತು ಹಳೆಕುಂದುವಾಡದ ಬಳಿ ಹೊಸದೊಂದು ಸೇತುವೆ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮ್ಮತಿಸಿದರು. ಶ್ಯಾಮನೂರು ಬಳಿ ಮಳೆಯಾದಾಗ ರಾಚಪ್ಪನ ಬೀಳು ಬಡಾವಣೆಯ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಾರೆ, ಮನೆಗಳಿಗೆಲ್ಲಾ ನೀರು ನುಗ್ಗಿ ಅಪಾರವಾದ ಹಾನಿ ಉಂಟಾಗುತ್ತದೆ. ನಾನು ಖುದ್ದು ಭೇಟಿ ನೀಡಿ ವೀಕ್ಷಣೆ ಮಾಡಿದ್ದೇನೆ. ಅದಕ್ಕೆ ಪರಿಹಾರ ಏನು ಸಿದ್ದೇಶ್ವರ್ ಅಧಿಕಾರಿಗಳನ್ನ ಪ್ರಶ್ನಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನೀರು ಹರಿದುಹೋಗಲು ಪೈಪ್‌ಗ್ಳನ್ನು ಹಾಕಿದ್ದಾರೆ. ಅದರ ಬದಲಾಗಿ ಕಲ್ವರ್ಟ್ ನಿರ್ಮಿಸಿದರೆ ಮಾತ್ರ ರಾಚಪ್ಪನ ಬೀಳು ಬಡಾವಣೆಯ ನಾಗರಿಕರ ಸಮಸ್ಯೆ ಪರಿಹಾರ ಆಗುತ್ತದೆ ಎಂದು ನಗರಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ ತಿಳಿಸಿದರು. ಪ್ರಾಧಿಕಾರದವರು ಕಲ್ವರ್ಟ್ ನಿರ್ಮಾಣ ಮಾಡಿಕೊಡಬೇಕು ಎಂದು ಸಿದ್ದೇಶ್ವರ್ ಸೂಚನೆಗೆ ಅಧಿಕಾರಿಗಳು ಸಮ್ಮತಿಸಿದರು. ಶಾಮನೂರು, ಬನಶಂಕರಿ ಬಡಾವಣೆ ಮತ್ತು ಹಳೇಬಾತಿ ಬಳಿ ಭೂ-ಸ್ವಾಧೀನದ ಸಮಸ್ಯೆ ಇದೆ.
ಅನುದಾನ ಇದೆ. ವಿಶೇಷ ಭೂ-ಸ್ವಾಧೀನಾ ಧಿಕಾರಿಗಳು ನೋಟಿಫಿಕೇಷನ್ ಹೊರಡಿಸಿದರೆ ಕಾರ್ಯ ಸುಗುಮವಾಗುತ್ತದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.
ವಿಶೇಷ ಭೂಸ್ವಾಧೀನಾಧಿ ಕಾರಿಗಳನ್ನು ಸ್ಥಳಕ್ಕೆ ಕರೆಯಿಸಿದ ಸಂಸದರು, ಇನ್ನೆರಡು ದಿನಗಳ ಒಳಗೆ ಭೂ-ಸ್ವಾ ಧೀನಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ಅಧಿಕಾರಿಗಳ ಕಾರಣದಿಂದ ಸರ್ಕಾರಗಳಿಗೆ ಕೆಟ್ಟ ಹೆಸರು ಬರುತ್ತದೆ. ಯಾವುದೇ ರಣಕ್ಕೂ ಸಬೂಬು ಹೇಳಬೇಡಿ, ತ್ವರಿತವಾಗಿ ಕೆಲಸ ಆಗಬೇಕು ಎಂದು ತಾಕೀತು ಮಾಡಿದರು. ಚಿತ್ರದುರ್ಗದಿಂದ ದಾವಣಗೆರೆಯ ಹದಡಿ ಸೇತುವೆಯವರೆಗೆ ಪಿಎನ್‌ಸಿ ಕಂಪನಿಯವರಿಗೆ ಗುತ್ತಿಗೆ ನೀಡಲಾಗಿದೆ. ಹುಣಸೆಕಟ್ಟೆ, ಹಾಲುವರ್ತಿ, ಮಲ್ಲಶೆಟ್ಟಿಹಳ್ಳಿ, ಎಚ್. ಕಲ್ಪನಹಳ್ಳಿ, ಆನಗೋಡು ಬಳಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೇತುವೆ ಕಾಮಗಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಸಿದ್ದೇಶ್ವರ್ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀನಿವಾಸ್ ನಾಯ್ಡು, ತಾಂತ್ರಿಕ ವ್ಯವಸ್ಥಾಪಕ ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ಅಧಿಕಾರಿಗಳಾದ ಅಣಜಿ ನಾಗರಾಜ್, ಮಂಜುನಾಥ್. ವಿಶೇಷ ಭೂ-ಸ್ವಾ ಧೀನಾಧಿಕಾರಿ ಬಾಲಕೃಷ್ಣ ಇತರ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ
Kasaragod; ಬಸ್-ಕಾರು ಢಿಕ್ಕಿ: ಇಬ್ಬರ ಸಾವು
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Israel ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.