ಗ್ರಾಹಕ ಸ್ನೇಹಿ ರವಿರಾಜ ಮಾರುಕಟ್ಟೆ ಮಹಾರಾಜ

ವಿವಿಧ ಕ್ಷೇತ್ರಗಳಲ್ಲಿ ಪ್ರಕಾಶಿಸುತ್ತಿದೆ "ಶಶಿ' ಕಿರಣ; ಈ ವರ್ಷವೂ ವಿವಿಧ ಹೊಸ ಉತ್ಪನ್ನಗಳ ಹೊಳಪು

Team Udayavani, Aug 16, 2022, 7:00 AM IST

Add thumb-1

“ಶಶಿ ಇದ್ದಲ್ಲಿ ಕಲೆಯ ಮಾತೆಲ್ಲಿ…’ ಎಂಬ ಜನಪ್ರಿಯ ಉಕ್ತಿ ಹಾಗೂ ಗುಣಮಟ್ಟದ ಉತ್ಪನ್ನದ ಮೂಲಕ ಮನೆ ಮಾತಾಗಿರುವ ಮಧ್ಯಕರ್ನಾಟಕದ ದಾವಣಗೆರೆ ಮೂಲದ ಮಹಾರಾಜ ಸೋಪ್ಸ್‌ ಕಂಪನಿ, ಇದೀಗ ಮತ್ತಷ್ಟು ಹೊಸ ಉತ್ಪನ್ನ, ಹೊಸ ಸೇವೆಗಳೊಂದಿಗೆ ಗ್ರಾಹಕರಿಗೆ ಮತ್ತಷ್ಟು ಆಪ್ತವಾಗುತ್ತಿದೆ.

ಕೊರೊನಾ ಸಾಂಕ್ರಾಮಿಕದ ಸಂಕೋಲೆಯಿಂದ ಮಾರುಕಟ್ಟೆ ಕ್ಷೇತ್ರ ಹೊರಬರುತ್ತಿದ್ದಂತೆ ಉತ್ಪಾದಕರಲ್ಲಿಯೂ ಹೊಸ ಹುರುಪು ಬಂದಿದೆ. ಈಗಾಗಲೇ ರಾಜ್ಯ ಹಾಗೂ ರಾಷ್ಟ್ರೀಯ ಮಾರುಕಟ್ಟೆ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಮಹಾರಾಜ ಸೋಪ್ಸ್‌ ಕಂಪನಿ, ತನ್ನ ಹೊಸ ಹೊಸ ವೈವಿಧ್ಯಮಯ ಉತ್ಪನ್ನಗಳ ಮೂಲಕ ಹೊಳಪನ್ನು ಹೆಚ್ಚಿಸಿಕೊಂಡಿದೆ.

ಗ್ರಾಹಕರ ಬೇಡಿಕೆಯಂತೆ ಇದೀಗ ವಿಶೇಷ ರೀತಿಯ ಪಪ್ಪಾಯ ಸೋಪ್‌ ತಯಾರಿಸುತ್ತಿದೆ. ನೈಸರ್ಗಿಕವಾದ ಪಪ್ಪಾಯಿಯ ದ್ರವ್ಯ ತರಿಸಿಕೊಂಡು ವಿಶೇಷ ರೀತಿಯಲ್ಲಿ ಸೋಪ್‌ ತಯಾರಿಸುತ್ತಿದ್ದು ಚರ್ಮದ ಕಾಂತಿ ಹೆಚ್ಚಿಸುವ ಜತೆಗೆ ಚರ್ಮದ ಆರೋಗ್ಯ ಕಾಪಾಡುವಲ್ಲಿ ಇದು ವಿಶೇಷ ಪಾತ್ರ ವಹಿಸುತ್ತದೆ. 100 ಗ್ರಾಂ.ನ ನಾಲ್ಕು ಪಪ್ಪಾಯ ಸೋಪ್‌ಗ್ಳನ್ನು ಉಚಿತ ಜಾರ್‌ನೊಂದಿಗೆ 220ರೂ.ಗಳಿಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಮ್ಮ ಹೊಸ ಉತ್ಪನ್ನದ ಬಗ್ಗೆ ಕಂಪನಿ ಮಾಲೀಕ, ನಿರ್ದೇಶಕ ಡಾ| ರವಿರಾಜ್‌ ಎಂ.ಇ. ಹೆಮ್ಮೆಯಿಂದ ಹೇಳುತ್ತಾರೆ.
ಮಹಾರಾಜ ಸೋಪ್ಸ್‌ ಕಂಪನಿ ಈ ವರ್ಷ ಆಹಾರ ಕ್ಷೇತ್ರಕ್ಕೂ ಕಾಲಿಟ್ಟಿದ್ದು ರಿಚ್‌ಬಾನ್‌ ಇಂಡಸ್ಟ್ರಿಯಿಂದ “ರೈಟ್‌ ಟಿ’ ಹೆಸರಲ್ಲಿ ಉತ್ತಮ ಗುಣಮಟ್ಟದ ಚಹಾ ಪುಡಿ ಉತ್ಪಾದಿಸುತ್ತಿದೆ. ಕರ್ನಾಟಕ ರಾಜ್ಯಾದ್ಯಂತ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಸ್ವಾದಿಷ್ಟ ಭರಿತ ಚಹಾಪುಡಿಯ ಜತೆಗೆ ಏಲಕ್ಕಿ ಸೇರಿದಂತೆ ಇನ್ನಿತರ ಗಿಡಮೂಲಿಕೆ ಸೇರಿಸಿದ ಪ್ರತ್ಯೇಕ ಮಸಾಲಾ ಚಹಾಪುಡಿಯನ್ನೂ ಉತ್ಪಾದಿಸಲಾಗುತ್ತಿದೆ. 100ಗ್ರಾಂ., 250ಗ್ರಾಂ., ಒಂದು ಕೆ.ಜಿ., ಐದು ಕೆ.ಜಿ. ಪ್ಯಾಕೆಟ್‌ಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಮಿಲ್ಲೆಟ್‌ ಮಿಕ್ಸ್‌
ಕಂಪನಿ ಈಗ “ಕಲಾರಾಣಿ ಮಿಲ್ಲೆಟ್‌ ಮಿಕ್ಸ್‌ ‘ ಎಂಬ ಸಿರಿಧಾನ್ಯದ ಹೊಸ ಉತ್ಪನ್ನವನ್ನು ಧರ್ಮಾ ಇಂಡಸ್ಟಿÅ ಮೂಲಕ ತಯಾರಿಸುತ್ತಿದೆ. ಸಾವಯವ ಪದ್ಧತಿಯಲ್ಲಿ ಬೆಳೆದ ಸಿರಿಧಾನ್ಯಗಳನ್ನು ತಂದು, ಪರಿಷ್ಕರಿಸಿ ಸಾಂಪ್ರದಾಯಿಕ ವಿಧಾನದಲ್ಲಿ ಹುರಿದು ಪುಡಿ ಮಿಲ್ಲೆಟ್‌ ಮಿಕ್ಸ್‌ ತಯಾರಿಸಲಾಗುತ್ತಿದೆ. ಜತೆಗೆ ಶುದ್ಧ ಗಾಣದ ಎಣ್ಣೆಯನ್ನೂ ತಯಾರಿಸಲು ಆರಂಭಿಸಲಾಗಿದೆ. ಇದನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಮಾಡುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಆಯುರ್ವೇದಿಕ್‌ ಶಾಂಪೂ ತಯಾರಿಸುವ ಆಲೋಚನೆಯನ್ನೂ ಕಂಪನಿ ಹೊಂದಿದೆ.

ಶುಭ್ರತೆ ಜತೆ ಆ್ಯಂಟಿ ಬ್ಯಾಕ್ಟಿರಿಯಲ್‌
ಕೊರೊನಾ ಸಾಂಕ್ರಾಮಿಕದ ಬಳಿಕ ಬಟ್ಟೆಯ ಕೊಳೆಯನ್ನು ತೆಗೆಯುವ ಜತೆಗೆ ಆ್ಯಂಟಿ ಬ್ಯಾಕ್ಟಿರಿಯಲ್‌ ಅಂಶಗಳನ್ನು ಹೊಂದಿರುವ ಸೋಪ್‌ಗ್ಳನ್ನು ತಯಾರಿಸಲಾಗುತ್ತಿದೆ. ಬಟ್ಟೆಯ ಕೊಳೆ ತೊಲಗಿಸುವ ಹಾಗೂ ಕಲೆಗಳನ್ನು ಹೊಡೆದೋಡಿಸಿ ಬಟ್ಟೆಯ ಮೃದುತ್ವ ಕಾಪಾಡುವ ಶಕ್ತಿಯನ್ನು ತಮ್ಮ ಕಂಪನಿಯ ಸೋಪ್‌ಗ್ಳು ಹೊಂದಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಇಂಥ ಸೋಪ್‌ಗ್ಳ ಬೇಡಿಕೆಯೂ ಹೆಚ್ಚಾಗಿದೆ.

ಅದೇ ರೀತಿ ಈಗ ಮಾರುಕಟ್ಟೆಯಲ್ಲಿ ಲಿಕ್ವಿಡ್‌ (ದ್ರವರೂಪದ ) ಡಿಟರ್ಜಂಟ್‌ ಬೇಡಿಕೆ ಹೆಚ್ಚಾಗುತ್ತಿದೆ. ಬಟ್ಟೆ ತೊಳೆಯುವ ಯಂತ್ರಕ್ಕೆ ಪೌಡರ್‌ ಹಾಕುವುದಕ್ಕಿಂತ ಲಿಕ್ವಿಡ್‌ ಹಾಕುವುದು ಉತ್ತಮ ಎಂಬ ಕಾರಣಕ್ಕಾಗಿ ಜನ ಪೌಡರ್‌ನಿಂದ ಲಿಕ್ವಿಡ್‌ ಡಿಟರ್ಜಂಟ್‌ನತ್ತ ಮುಖ ಮಾಡುತ್ತಿದ್ದಾರೆ. ಹಾಗಾಗಿ ಶಶಿ ಲಿಕ್ವಿಡ್‌ ಡಿಟರ್ಜಂಟ್‌ಗೆ ಹೆಚ್ಚಿನ ಬೇಡಿಕೆ ಬಂದಿದೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಉತ್ಪನ್ನಗಳನ್ನು ತಾವು ಉತ್ಪಾದಿಸುತ್ತಿದ್ದೇವೆ ಎನ್ನುತ್ತಾರೆ ಡಾ| ರವಿರಾಜ್‌.

ಆಯುರ್ವೇದಿಕ್‌ ಸೋಪ್‌
ಕೊರೊನಾ ಹಾಗೂ ಕೊರೊನೋತ್ತರವಾಗಿ ಜನರಲ್ಲಿ ಶುಭ್ರತೆ, ಆರೋಗ್ಯ ವಿಚಾರವಾಗಿ ಹೆಚ್ಚು ಜಾಗೃತಿ ಮೂಡಿದೆ. ಹಾಗಾಗಿ ಆಯುರ್ವೇದೀಯ ಸೋಪ್‌ಗ್ಳ ಬೇಡಿಕೆಯೂ ಹೆಚ್ಚಾಗಿದ್ದು ಬೇಡಿಕೆಗೆ ತಕ್ಕಂತೆ ಬೇವು, ತುಳಸಿ, ಶೀÅಗಂಧ ಹಾಗೂ ಕಡಲೆಹಿಟ್ಟಿನಿಂದ ತಯಾರಿಸಿದ ಸೋಪ್‌ಗ್ಳನ್ನು ಉತ್ಪಾದಿಸಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಅಷ್ಟೇ ಅಲ್ಲದೇ ಹೊರರಾಜ್ಯಗಳಿಂದಲೂ ಆನ್‌ಲೈನ್‌ ಮೂಲಕ ಗ್ರಾಹಕರು ಈ ವಿಶೇಷ ಸೋಪ್‌ಗ್ಳನ್ನು ಖರೀದಿಸುತ್ತಿದ್ದಾರೆ. ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಹೊರ ರಾಜ್ಯಗಳಲ್ಲಿಯೂ ಡೀಲರ್‌ಗಳನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಮಾಲೀಕರು.

ಆನ್‌ಲೈನ್‌ ಶಾಪಿಂಗ್‌
ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ “ವಿ ವಿನ್‌’ ಆನ್‌ಲೈನ್‌ ಶಾಂಪಿಂಗ್‌ ವ್ಯವಸ್ಥೆಗೆ ಉತ್ತಮ ಬೇಡಿಕೆ ಬಂದಿತ್ತು. ಆಗ ನಮ್ಮ ಪ್ರತಿನಿಧಿಗಳು ಕೊರೊನಾ ಸುರಕ್ಷತಾ ಉಡುಗೆ ತೊಟ್ಟು, ಸಾಮಗ್ರಿಗಳನ್ನು ಸಹ ಅಷ್ಟೇ ಸುರಕ್ಷಿತವಾಗಿ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಿದರು. ಲಾಕ್‌ಡೌನ್‌ ಮುಗಿದ ಬಳಿಕವೂ ಅದೇ ಗ್ರಾಹಕರು ಈಗಲೂ ಮುಂದುವರಿದ್ದು ಹೊಸ ಗ್ರಾಹಕರೂ ಸೇರ್ಪಡೆಯಾಗುತ್ತಿದ್ದಾರೆ. ಪ್ರಸ್ತುತ ಈ ಸೇವೆ ದಾವಣಗೆರೆ ಜಿಲ್ಲೆಯಲ್ಲಿ ಮಾತ್ರ ಇದ್ದು ಉಳಿದ ಜಿಲ್ಲೆಗಳಿಗೂ ವಿಸ್ತರಿಸುವ ಯೋಚನೆ ಇದೆ.

ಮಾರುಕಟ್ಟೆ ವಿಸ್ತಾರ
ಕಂಪನಿಯ ಉತ್ಪನ್ನಗಳು ಈಗಾಗಲೇ ದೇಶದ ವಿವಿಧ ರಾಜ್ಯಗಳ ಮಾರುಕಟ್ಟೆಗಳನ್ನು ಪ್ರವೇಶಿಸಿದೆ. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳಗಳಲ್ಲಿ ಉತ್ತಮ ಮಾರುಕಟ್ಟೆ ಇದ್ದು ಮಹಾರಾಷ್ಟ್ರ ರಾಜ್ಯದ ಮಾರುಕಟ್ಟೆಯನ್ನು ಪೂರ್ಣ ಪ್ರಮಾಣದಲ್ಲಿ ಪ್ರವೇಶಿಸಲು, ತಮಿಳುನಾಡಿನಲ್ಲಿ ಹೆಚ್ಚಿನ ಮಾರುಕಟ್ಟೆ ವಿಸ್ತರಿಸಲು ಪ್ರಯತ್ನ ನಡೆಸಲಾಗುತ್ತಿದೆ.

ಸದಾ ಸಂಶೋಧನೆ
ಕಂಪನಿ ತನ್ನ ಎಲ್ಲ ಉತ್ಪನ್ನಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತ ಬಂದಿದೆ. ಪ್ರತಿವರ್ಷ ಉತ್ಪನ್ನಗಳಲ್ಲಿ ಗುಣಮಟ್ಟ ಹೆಚ್ಚಿಸಿಕೊಳ್ಳುತ್ತಲೇ ಬಂದಿದ್ದು ಉತ್ಪನ್ನಗಳನ್ನು ಮೇಲ್ದರ್ಜೆಗೇರಿಸುತ್ತ ಬಂದಿದೆ. ಇದಕ್ಕಾಗಿ ಕಂಪನಿಯಲ್ಲಿ ತಜ್ಞರ, ವಿಜ್ಞಾನಿಗಳ ತಂಡವಿದ್ದು ಅವರು ನಿರಂತರವಾಗಿ ಮಾರುಕಟ್ಟೆಯ ಬೇಡಿಕೆ, ಗುಣಮಟ್ಟದ ಬಗ್ಗೆ ಅಧ್ಯಯನ, ಸಂಶೋಧನೆ ನಡೆಸುತ್ತ ಅದನ್ನು ಅನುಷ್ಠಾನಗೊಳಿಸುತ್ತ ಬಂದಿದೆ ಎಂದು ಹೇಳುವ ರವಿರಾಜ್‌, ಗುಣಮಟ್ಟಕ್ಕೆ ತಮ್ಮ ಕಂಪನಿ ಮೊದಲಿನಿಂದಲೂ ಆದ್ಯತೆ ನೀಡುತ್ತ ಬಂದಿದೆ ಎಂಬುದನ್ನು ಸ್ಪಷ್ಟಪಡಿಸುತ್ತಾರೆ.

ಗುಣಮಟ್ಟದಲ್ಲಿ ರಾಜೀ ಇಲ್ಲ
ಬೆಲೆ ಏರಿಕೆಯ ನಡುವೆ ಗುಣಮಟ್ಟ ಕಾಯ್ದುಕೊಂಡು ಉತ್ಪನ್ನಗಳನ್ನು ಉತ್ಪಾದಿಸುವುದು ಇಂದು ಕೈಗಾರಿಕೆಗಳಿಗೆ ದೊಡ್ಡ ಸವಾಲಾಗಿದೆ. ಆದರೂ ಮಹಾರಾಜ ಕಂಪನಿ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಗ್ರಾಹಕರ ಸಂತುಷ್ಟಿಯನ್ನು ಮುಖ್ಯವಾಗಿರಿಸಿಕೊಂಡು ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಕಂಪನಿ ತನ್ನ ಎಲ್ಲ ಉತ್ಪನ್ನಗಳ ಗುಣಮಟ್ಟವನ್ನು ಪ್ರತಿವರ್ಷ ಹೆಚ್ಚಿಸಿ ಕೊಳ್ಳುತ್ತಲೇ ಬಂದಿರುವುದು ವಿಶೇಷವಾಗಿದೆ. ಮಹಾರಾಜ ಕಂಪನಿಯ ಉತ್ಪನ್ನಗಳ ಗುಣಮಟ್ಟ ಬೇರೆ ಯಾವ ಅಂತಾರಾಷ್ಟ್ರೀಯ ಕಂಪನಿಗಳ ಗುಣಮಟ್ಟಕ್ಕಿಂತ ಕಡಿಮೆ ಇಲ್ಲ. ಈ ಬಗ್ಗೆ ನಾವು ಯಾವ ಸವಾಲಿಗೂ ಸಿದ್ಧ ಎಂದು ವಿಶ್ವಾಸದಿಂದ ನುಡಿಯುತ್ತಾರೆ ಡಾ| ರವಿರಾಜ್‌.

“ಮಹಾರಾಜ’ ಕಂಪನಿ
ಮಹಾರಾಜ ಸೋಪ್ಸ್‌ ಇಂಡಸ್ಟ್ರೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಡಿಟರ್ಜಂಟ್‌ ಸೋಪ್‌, ಡಿಟರ್ಜಂಟ್‌ ಪೌಡರ್‌, ಲಿಕ್ವಿಡ್‌ ಡಿಟರ್ಜಂಟ್‌, ಸ್ಕೌರಿಂಗ್‌ ಪೌಡರ್‌, ಡಿಶ್‌ ವಾಶ್‌ ಸೋಪ್‌, ಡಿಶ್‌ ವಾಶ್‌ ಜೆಲ್‌, ಸೌಂದರ್ಯವರ್ಧಕ ಸಾಬೂನು, ಫ್ಲೋರ್‌ ಕ್ಲಿನರ್‌ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಮಾಹಾರಾಜ ಸೋಪ್ಸ್‌ ಮಾತೃಸಂಸ್ಥೆಯ ಅಡಿಯಲ್ಲಿ ಮಹಾರಾಜ ಇ-ಮಾರ್ಟ್‌ ಪ್ರೈ.ಲಿ.,(ಆನ್‌ಲೈನ್‌ ದಿನಸಿ ಶಾಂಪಿಂಗ್‌), ಸರವಣ ಸೋಪ್ಸ್‌ ಇಂಡಸ್ಟ್ರೀ ಪ್ರೈ.ಲಿ., (ಡಿಟರ್ಜಂಟ್‌ ಉತ್ಪಾದನೆ), ಶಶಿ ಎಜ್ಯುಕೇಶನ್‌ ಟ್ರಸ್ಟ್‌ (ಶಾಲಾ-ಕಾಲೇಜು), ಮಹಾರಾಜ ಇಂಡಸ್ಟ್ರೀ (ಉಪ್ಪು), ಮಹಾ ಟಿವಿಎಸ್‌ (ದ್ವಿಚಕ್ರ ವಾಹನ ಶೋ ರೂಂ), ಮಹಾರಾಜಾ ರೋಡ್‌ವೇಸ್‌ (ಕಾರ್ಗೋ ಮತ್ತು ಲಾರಿ ಸೇವೆ), ಜಯಸುಬ್ರಹ್ಮಣ್ಯ ಇಂಡಸ್ಟ್ರೀ (ಡಿಟರ್ಜಂಟ್‌) ಕಂಪನಿಗಳು ಸೇರಿದಂತೆ
ಇನ್ನಿತರ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

 

ಟಾಪ್ ನ್ಯೂಸ್

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

7-dvg

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

byndoor

Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.