ಔಷಧ ಕಂಪನಿಗಳ ಧನದಾಹ ನಿಯಂತ್ರಿಸಿ
Team Udayavani, Mar 5, 2017, 12:57 PM IST
ದಾವಣಗೆರೆ: ಔಷಧ ಕಂಪನಿಗಳ ಧನದಾಹ ನಿಯಂತ್ರಿಸಲು, ಔಷಧ ಮಾರಾಟ ಪ್ರತಿನಿಧಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕಾನೂನು ರಚಿಸಬೇಕು ಎಂದು ಎಂಎಫ್‌ಆರ್‌ಐ ಪ್ರಧಾನ ಕಾರ್ಯದರ್ಶಿ ಶಾಂತನು ಚಟರ್ಜಿ ಆಗ್ರಹಿಸಿದರು. ಶನಿವಾರ ಮೋತಿ ಚನ್ನಸಬಸಮ್ಮ ಕಲ್ಯಾಣ ಮಂಟಪದಲ್ಲಿ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ 24ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಔಷಧ ಕಂಪನಿಗಳು ಹೆಚ್ಚು ಹೆಚ್ಚು ಲಾಭ ಗಳಿಸುವ ಏಕೈಕಉದ್ದೇಶದಿಂದ ವ್ಯಾಪಾರಿ ಧರ್ಮ ಮೀರಿ ವ್ಯವಹರಿಸುತ್ತಿವೆ. ಔಷಧಗಳಿಗೆ ಹೆಚ್ಚು ಬೆಲೆ ನಿಗದಿ ಮಾಡಿ, ಅಧಿಕ ಪ್ರಮಾಣದಲ್ಲಿ ಮಾರಾಟ ಆಗಬೇಕು ಎಂಬ ಉದ್ದೇಶದಿಂದ ಮಾರಾಟ ಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಿವೆ. ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸೂಕ್ತ ಕಾನೂನು ಜಾರಿ ಮಾಡಬೇಕು ಎಂದರು.
ಇಂದು ಮಾರಾಟ ಪ್ರತಿನಿಧಿಗಳು, ವೈದ್ಯರು ಜನರ ವೈರಿಗಳೆಂಬಂತೆ ಆಗಿದ್ದಾರೆ. ಕೇಂದ್ರ ಸರ್ಕಾರ ಸಹ ಈ ಇಬ್ಬರನ್ನು ವೈರಿಗಳಂತೆ ಬಿಂಬಿಸುತ್ತಿದೆ. ಔಷಧ ಕಂಪನಿಗಳು ಯಾವುದೇ ತಪ್ಪು ಮಾಡುತ್ತಿಲ್ಲ, ಬದಲಿಗೆ ಇವರೇ ಎಲ್ಲ ತಪ್ಪು ಮಾಡುತ್ತಿದ್ದಾರೆ. ವೈದ್ಯರು ದುಡ್ಡು ತೆಗೆದುಕೊಳ್ಳುತ್ತಾರೆ. ಮಾರಾಟ ಪ್ರತಿನಿಧಿಗಳು ಹೆಚ್ಚು ಔಷಧ ಮಾರಾಟ ಮಾಡುವ ಸಲುವಾಗಿ ವೈದ್ಯರಿಗೆ ದುಡ್ಡು ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಇದಕ್ಕೆ ಕಾರಣ ಕಂಪನಿಗಳೇ ಹೊರತು ವೈದ್ಯರು, ಮಾರಾಟ ಪ್ರತಿನಿಧಿಗಳಲ್ಲ ಎಂದು ಅವರುಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರ ಸ್ವತಃ ಔಷಧ ಕಂಪನಿಗಳಿಗೆ ಉತ್ತೇಜನ ನೀಡುತ್ತಿದೆ. ಬೆಲೆ ನಿಗದಿ ಮಾಡುವಾಗ ಸಂಪೂರ್ಣ ಸ್ವಾಯತ್ತತೆ ನೀಡುತ್ತಿದೆ. ಇನ್ನೊಂದು ಕಡೆ ತನ್ನ ಒಡೆತನದ ಔಷಧ ಕಂಪನಿಗಳನ್ನು ಮುಚ್ಚಲು ಹೊರಟಿದೆ. ಇದರಿಂದ ಆಗುವ ಪರಿಣಾಮಗಳ ಕುರಿತು ಚಿಂತನೆ ನಡೆಸುತ್ತಿಲ್ಲ.
ಒಂದು ವೇಳೆ ಸಾರ್ವಜನಿಕ ಔಷಧ ಕಂಪನಿಗಳು ಮುಚ್ಚಿದರೆ ಔಷಧ ಕಂಪನಿಗಳು ಲಾಭಕ್ಕಾಗಿ ದುರ್ಮಾರ್ಗ ಹಿಡಿಯಲಿವೆ. ಜನರ ಶೋಷಣೆ ಮಾಡಲಿವೆ. ಸಾರ್ವಜನಿಕ ಒಡೆತನದ ಕಂಪನಿಗಳನ್ನು ಕೇಂದ್ರ ಸರ್ಕಾರ ಮುಚ್ಚಬಾರದು ಎಂದರು. ಮಾರಾಟ ಪ್ರತಿನಿಧಿಗಳನ್ನು ಈಗಾಗಲೇ ಕಂಪನಿಗಳು ಶೋಷಣೆ ಮಾಡುತ್ತಿವೆ. ಮೊದಲು ಕಂಪನಿಯಿಂದ ನೇರ ನೇಮಕ ಮಾಡಿಕೊಳ್ಳಲಾಗುತ್ತಿತ್ತು.
ಇದೀಗ ವಿತರಕರ ಕಡೆಯಿಂದ ಪ್ರತಿನಿಧಿಗಳ ನೇಮಕ ಆಗುತ್ತಿದೆ. ಕಡಮೆ ವೇತನ ನೀಡಿ, ಹೆಚ್ಚಿನ ಕೆಲಸ ತೆಗೆದುಕೊಳ್ಳುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ. ತಾಂತ್ರಿಕತೆ ಬಳಸಿಕೊಂಡು ಹೆಚ್ಚಿನ ವಹಿವಾಟು ಮಾಡುವ ದುರುದ್ದೇಶವನ್ನು ಕಂಪನಿಗಳು ಬೆಳೆಸಿಕೊಳ್ಳುತ್ತಿವೆ.
ವೈದ್ಯರಿಗೆ ಆಮಿಷಗಳನ್ನೊಡ್ಡಿ, ಹೆಚ್ಚಿನ ಔಷಧ ಮಾರಾಟ ಮಾಡುವಂತೆ ಮಾಡುತ್ತಿವೆ ಎಂದು ಅವರು ದೂರಿದರು. ಡಾ| ಎಚ್.ಎಲ್. ಸುಬ್ಬರಾವ್, ಸಿಐಟಿಯು ಪ್ರಧಾನ ಕಾರ್ಯದಶಿ ಮೀನಾಕ್ಷಿ ಸುಂದರಂ, ಕಾರ್ಯದರ್ಶಿ ಕೆ.ಎನ್. ಉಮೇಶ್, ಕಾಮೇಶ್ವರರಾವ್, ಎಚ್.ಜಿ. ಸುರೇಶ್, ಎಚ್.ಕೆ. ರಾಮಚಂದ್ರಪ್ಪ, ಕೆ.ಎಲ್. ಭಟ್ ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.