ಸ್ವತ್ಛ ಭಾರತ ಕಲ್ಪನೆಗೆ ಸಹಕರಿಸಿ
Team Udayavani, Sep 26, 2017, 4:41 PM IST
ಮಲೇಬೆನ್ನೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಂಕಲ್ಪವಾದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಸ್ವತ್ಛ ಭಾರತ ಕಲ್ಪನೆಯನ್ನು ಸಾಕಾರಗೊಳಿಸುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.
ದಾವಣಗೆರೆ ಜಿಲ್ಲೆ ಉಕ್ಕಡಗಾತ್ರಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕರಿಬಸವೇಶ್ವರ ಗದ್ದಿಗೆಯ ಬೃಹತ್ ವಸತಿ ನಿಲಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮ ವಿಕಾಸ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪುಣ್ಯ ಕ್ಷೇತ್ರಗಳಲ್ಲಿ ಭಕ್ತರಿಗಾಗಿ ನಿರ್ಮಿಸಿರುವ ಸ್ನಾನಘಟ್ಟಗಳನ್ನು, ನದಿ ದಂಡೆಗಳನ್ನು ಸ್ವತ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಎಲ್ಲರದ್ದೂ ಆಗಿದೆ ಎಂದರು.
ದೇಶ ಹಾಳಾಗುತ್ತಿರುವುದು ಹಣ, ಜನರಿಂದಲ್ಲ, ಭ್ರಷ್ಟಾಚಾರದಿಂದ ಎಂದು ಹೇಳಿದರ ಅವರು, ಸರ್ಕಾರ ನೀಡುತ್ತಿರುವ ಅನುದಾನದ ಹಣವು ನಿಮ್ಮದೇ ಆಗಿದೆ. ಇದರಲ್ಲಿ ಭ್ರಷ್ಟಾಚಾರ ಆಗದ ರೀತಿ ಕಾಮಗಾರಿ ಮುಗಿಸಿದರೆ ಅದಕ್ಕಿಂತ ಹೆಚ್ಚಿನ ಸಂತೋಷ ಇನ್ನೊಂದಿಲ್ಲ ಎಂದು ಹೇಳಿದರು.
ತುಂಗಭದ್ರಾ ಶುದ್ಧ ನೀರು ಘಟಕ ಉದ್ಘಾಟಿಸಿದ ವಿಧಾನಸಭಾ ಅಧ್ಯಕ್ಷ ಕೆ.ಬಿ. ಕೋಳಿವಾಡ ಮಾತನಾಡಿ, ಬಡವರಿಗೆ ಆರ್ಥಿಕ ಹೊರೆಯಾಗದಂತೆ ಸರ್ವಧರ್ಮ ಸಾಮೂಹಿಕ ವಿವಾಹ ಏರ್ಪಡಿಸಿರುವುದು ಶ್ಲಾಘನೀಯ ಕಾರ್ಯ. ವಸತಿ ನಿಲಯ, ಅನ್ನ ದಾಸೋಹ ನೀಡುತ್ತಿರುವ ಈ ಕ್ಷೇತ್ರದಲ್ಲಿ ಮುಂದುವರೆದು ಬಡ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ವಿದ್ಯಾ ದಾಸೋಹ ನೀಡುವಂತಾಗಬೇಕು ಎಂದರು.
ವಿಶ್ರಾಂತಿಧಾಮ ಉದ್ಘಾಟಿಸಿದ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಪ್ರಸಿದ್ಧ, ಪವಾಡ, ಪ್ರಭಾವ ನಡೆಯುತ್ತಿರುವ ಈ ಉಕ್ಕಡಗಾತ್ರಿ ಕರಿಬಸವೇಶ್ವರ ಕ್ಷೇತ್ರದ ಅಭಿವೃದ್ಧಿಗೆ ನಾವು ಶ್ರಮಿಸಬೇಕಿದೆ. ಭಕ್ತರ ಕಾಣಿಕೆ ಪ್ರಾಮಾಣಿಕತೆಯಿಂದ ಸದುಪಯೋಗವಾಗುತ್ತಿದೆ. ಮೊದಲ ಹಂತದಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಉಕ್ಕಡಗಾತ್ರಿ ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದರು.
ಕಬ್ಬಿಣಕಂಥಿ ಮಠದ ಶ್ರೀಗಳು, ಬೆಟ್ಟದಹಳ್ಳಿ ಶ್ರೀ ಮಠದ ಶ್ರೀಗಳು, ಸೋಮಶೇಖರ ಶಿವಾಚಾರ್ಯ ಶ್ರೀಗಳು, ಲಿಂಗದಹಳ್ಳಿ ಶ್ರೀಗಳು, ಗೋಡೇಕೆರೆ ಸಂಸ್ಥಾನದ ಮೃತ್ಯುಂಜಯ ದೇಶೀಕೇಂದ್ರ ಶ್ರೀಗಳು, ನಂದಿಗುಡಿ ಶ್ರೀಗಳು ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ 15 ಜೋಡಿ ನೂತನ ವಧು-ವರರಿಗೆ ಆಶೀರ್ವದಿಸಿದರು. ಮುಜರಾಯಿ ಮತ್ತು ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ ಇವರು 108 ಅಡಿ ರಾಜಗೋಪುರದ ಶಿಲಾನ್ಯಾಸ ನೆರವೇರಿಸಿದರು. 350 ಕೆ.ಜಿ. ತೂಕದ ಬೆಳ್ಳಿ ರಥವನ್ನು ಗಣ್ಯರು ಎಳೆಯುವ ಮೂಲಕ ಲೋಕಾರ್ಪನೆಗೊಳಿಸಿದರು. ಟ್ರಸ್ಟ್‌ನ ಉಪಾಧ್ಯಕ್ಷ ಜಿ. ನಂದಿಗೌಡ್ರು ಅಧ್ಯಕ್ಷತೆ ವಹಿಸಿದ್ದರು.
ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಬೃಹತ್ ವಸತಿ ನಿಲಯ ಲೋಕಾರ್ಪಣೆ ಮಾಡಿದರು. ಮಾಜಿ ಶಾಸಕರಾದ ಬಿ.ಪಿ. ಹರೀಶ್, ಡಿ.ಬಿ. ಗಂಗಪ್ಪ, ಮುಖಂಡರಾದ ಆರ್.ಎಲ್.ಪಾಟೀಲ್, ಗಂಟಿ ದೇವರಾಜ್, ಯಲ್ಲಪ್ಪರೆಡ್ಡಿ, ಕಂಬಳಿ ಕೃಷ್ಣಪ್ಪ, ತಾಪಂ ಸದಸ್ಯ ಬಸವರಾಜ್, ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಎಸ್. ಸುರೇಶ್, ನಿರ್ದೇಶಕ ಇಂಧೂಧರ್ ಎನ್. ರುದ್ರಗೌಡ ಹಾಗೂ ದೇವಸ್ಥಾನ ಸಮಿತಿ ನಿರ್ದೇಶಕರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.