Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

ಸಿಎಂ ಸಿದ್ದರಾಮಯ್ಯ ಬ್ಲ್ಯಾಕ್ ಮೇಲ್ ಮಾಡುವ ಬದಲು ಹಗರಣಗಳ ತನಿಖೆ ಮಾಡಿಸಲಿ

Team Udayavani, Jul 21, 2024, 9:26 PM IST

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಲ್ಯಾಕ್ ಮೇಲ್ ಮಾಡುವ ಬದಲು ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ, ಹಗರಣಗಳ ತನಿಖೆ ಮಾಡಿಸಲಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸರ್ಕಾರಗಳ ಅವಧಿಯಲ್ಲಿ ನಡೆದಿರುವ ಹಗರಣ, ಭ್ರಷ್ಟಾಚಾರದ ತನಿಖೆ ಮಾಡಿಸುತ್ತೇವೆ ಎಂದು ಸಿದ್ದರಾಮಯ್ಯ ಬ್ಲ್ಯಾಕ್ ಮೇಲ್ ಮಾಡುವ ಬದಲಿಗೆ ಅವರದ್ದೇ ಸರ್ಕಾರ, ಅಧಿಕಾರ ಇದೆ. ಕಾಂಗ್ರೆಸ್ ಮಾತ್ರವಲ್ಲ ಅಧಿಕಾರ ನಡೆಸಿದ ಎಲ್ಲ ಪಕ್ಷಗಳ ಸರ್ಕಾರದ ಅವಧಿಯಲ್ಲಿನ ಹಗರಣ, ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸಲಿ ಬೇಡ ಅಂದವರು ಯಾರು ಎಂದು ಪ್ರಶ್ನಿಸಿದರು.

ವಾಲ್ಮೀಕಿ ಹಗರಣದ ತನಿಖೆಯನ್ನು ಎಸ್‌ಐಟಿ ಮೂಲಕ ಮಾಡಿಸಿ, ಮಾಜಿ ಸಚಿವ ನಾಗೇಂದ್ರಗೆ ಕ್ಲೀನ್ ಚಿಟ್ ನೀಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಎಸ್‌ಐಟಿ ಅಂದ್ರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಂ.. ಎಂದು ದೂರಿದರು.

ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಸಂಪೂರ್ಣ ಮನೆಗಳು ಬಿದ್ದವರಿಗೆ ಮನೆಗೆ ನೆರವು, ಮನೆ ಬಾಡಿಗೆ ಕಟ್ಟಲು ಹಣ ನೀಡುತ್ತಿದ್ದೆವು. ಆದರೆ, ಸುಳ್ಳು ಪ್ರಚಾರ, ಭರವಸೆ, ಬೋಗಸ್ ಆಶ್ವಾಸನೆ ನೀಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ.

ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ಬಳಸಿಕೊಳ್ಳುತ್ತಿದೆ. ವಾಲ್ಮೀಕಿ ನಿಗಮ, ಮುಡಾದ ಬ್ರಹ್ಮಾಂಡ ಭ್ರಷ್ಟಾಚಾರ ಎಲ್ಲವೂ ಜನರ ಕಣ್ಣುಗಳ ಮುಂದಿವೆ. ಸಿದ್ದರಾಮಯ್ಯಗೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯನವರೇ 2013 ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದಿರಿ. ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್ ಮೇಲೆ ಆರೋಪ ಮಾಡಿದ್ದಾರೆ, ಅರ್ಕಾವತಿ ಬಡಾವಣೆಯ ಹಗರಣದ ಕಡತವನ್ನು ಜಗದೀಶ ಶೆಟ್ಟರ್ ಕಡತವನ್ನು ತಿರಸ್ಕರಿಸಿದ್ದರು. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆದಾಗ ಸಾವಿರಾರು ಕೋಟಿ ರೂ.ಗಳ ಭ್ರಷ್ಟಾಚಾರದ ಅರ್ಕಾವತಿ ಕಡತಕ್ಕೆ ರೀಡೂ ಅಂತಾ ಮಾಡಿದ್ದೀರಿ. ಮಾಡಿ ಫೈ ಮಾಡಿ, ರೀಡೂ ಮಾಡಿದ್ದೂ ನೀವಲ್ಲವೇ ಎಂದು ಪ್ರಶ್ನಿಸಿದರು.

ಬೆಳೆ ಹಾನಿ ಪರಿಹಾರ ನೀಡುವ ಕಡೆ ಸಿದ್ದರಾಮಯ್ಯ ಸರ್ಕಾರ ಗಮನಹರಿಸಲಿ. ಇಂದಿಗೂ ಬರ ಪರಿಹಾರವನ್ನೇ ಈ ಸರ್ಕಾರ ನೀಡಿಲ್ಲ. ಹಿಂದಿನಿಂದಲೂ ಕೇಂದ್ರದತ್ತ ಬೊಟ್ಟು ಮಾಡುವ ಕೆಲಸ ಸಿದ್ದರಾಮಯ್ಯ ಮಾಡುತ್ತಲೇ ಬಂದಿ ದ್ದಾರೆ. ಈಗಲೂ ಅದನ್ನೇ ಮಾಡದೆ ರೈತರಿಗೆ ಬರ ಪರಿಹಾರ ನೀಡುವ ಮನಸ್ಸು ಮಾಡಲಿ ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಒಂದೇ ಒಂದು ಗ್ರಾಪಂಗೆ ಒಂದು ಮನೆಯನ್ನೂ ಕೊಟ್ಟಿಲ್ಲ. ನಮ್ಮ ಸರ್ಕಾರವಿದ್ದಾಗ ನಮ್ಮ ನಮ್ಮ ಕ್ಷೇತ್ರಕ್ಕೆ 4500 ಮನೆ ತಂದಿದ್ದೆವು. ಸಿದ್ದರಾಮಯ್ಯನವರದ್ದು ದುರಂತದ ಸರ್ಕಾರವಾಗಿದೆ. ಇದೊಂದು ಪಾಪದ ಸರ್ಕಾರವಿದ್ದು, ದಪ್ಪನೆಯ ಚರ್ಮದ ಸರ್ಕಾರವಾಗಿದೆ. ರೈತರ ಬಗ್ಗೆಯೂ ಕಾಳಜಿಯೇ ಇಲ್ಲ, ಜನ ಸಾಮಾನ್ಯರಿಗೂ ಸ್ಪಂದಿಸದ ಸರ್ಕಾರವಾಗಿದೆ ಎಂದು ದೂರಿದರು.

ಟಾಪ್ ನ್ಯೂಸ್

bansuri

ಬಾನ್ಸುರಿ ವಿರುದ್ಧ ಮಾಜಿ ಸಚಿವ ಜೈನ್‌ ದಾಖಲಿಸಿದ್ದ ಕೇಸು ವಜಾ

1-sachiva

Fraud case: ಮಹಾರಾಷ್ಟ್ರ ಸಚಿವಗೆ 2 ವರ್ಷ ಜೈಲು

1-ccchav

Chhaava ಚಿತ್ರವನ್ನು ಕಾಲ್ಪನಿಕವೆಂದ ನಟಿ ಸ್ವರಾ: ನೆಟ್ಟಿಗರಿಂದ ಟೀಕೆ

Kotekar Bank: ಲಾಕರ್‌ನಲ್ಲಿ ಇರಿಸಿದ್ದ 8 ಲಕ್ಷ ರೂ. ಗೆದ್ದಲುಪಾಲು!

Kotekar Bank: ಲಾಕರ್‌ನಲ್ಲಿ ಇರಿಸಿದ್ದ 8 ಲಕ್ಷ ರೂ. ಗೆದ್ದಲುಪಾಲು!

Cricket Red ball

Ranji ಸೆಮಿಫೈನಲ್ಸ್‌ ಹೋರಾಟ; ಮುಂಬಯಿ ಗೆಲುವಿಗೆ ಕಠಿನ ಸವಾಲು

Mysuru ಉದಯಗಿರಿ ಗಲಭೆ ಪ್ರಕರಣ: ಮೌಲ್ವಿ ಬಂಧನ

Mysuru ಉದಯಗಿರಿ ಗಲಭೆ ಪ್ರಕರಣ: ಮೌಲ್ವಿ ಬಂಧನ

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಹೆಜ್ಜೇನು ದಾಳಿಯಿಂದ ಮೃತಪಟ್ಟ ರೈತ

Davanagere: ಹೆಜ್ಜೇನು ದಾಳಿಯಿಂದ ಮೃತಪಟ್ಟ ರೈತ

Davanagere: I can’t say anything about the Hebbalkar-Ravi case: Speaker UT Khader

Davanagere: ಹೆಬ್ಬಾಳ್ಕರ್‌- ರವಿ ಪ್ರಕರಣದ ಬಗ್ಗೆ ನಾನೇನು ಹೇಳಲಾರೆ: ಸ್ಪೀಕರ್‌ ಖಾದರ್

Precautionary measures to prevent load shedding this time: Minister K.J. George

Electricity: ಈ ಬಾರಿ ಲೋಡ್‌ ಶೆಡ್ಡಿಂಗ್‌ ಆಗದಂತೆ ಮುಂಜಾಗೃತಾ ಕ್ರಮ: ಸಚಿವ ಕೆ.ಜೆ. ಜಾರ್ಜ್

Davanagere: ಕೆಪಿಸಿಸಿ ಅಧ್ಯಕ್ಷರ ಹುದ್ದೆ ಖಾಲಿ ಇಲ್ಲ: ಸಚಿವ ಕೆ.ಜೆ. ಜಾರ್ಜ್

Davanagere: ಕೆಪಿಸಿಸಿ ಅಧ್ಯಕ್ಷರ ಹುದ್ದೆ ಖಾಲಿ ಇಲ್ಲ: ಸಚಿವ ಕೆ.ಜೆ. ಜಾರ್ಜ್

Davanagere: 115 ರೂ. ಕೇಳಿದ್ದಕ್ಕೆ ಬೇಕರಿ ಮಾಲೀಕನಿಗೆ ಚಾಕುವಿನಿಂದ ಇರಿದ ವ್ಯಕ್ತಿ

Davanagere: 115 ರೂ. ಕೇಳಿದ್ದಕ್ಕೆ ಬೇಕರಿ ಮಾಲೀಕನಿಗೆ ಚಾಕುವಿನಿಂದ ಇರಿದ ವ್ಯಕ್ತಿ

MUST WATCH

udayavani youtube

ಬೆಂಗಳೂರಿಗರು ಈ ಜಾಗಕ್ಕೊಮ್ಮೆ ತಪ್ಪದೇ ಭೇಟಿ ಕೊಡಿ

udayavani youtube

ಮಠ ಗುರುಪ್ರಸಾದ್ ಕೊನೇ ಕಾಲ್ ಆಡಿಯೋ | ಪತ್ನಿಗೆ ಹೇಳಿದ್ದೇನು ?

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

ಹೊಸ ಸೇರ್ಪಡೆ

bansuri

ಬಾನ್ಸುರಿ ವಿರುದ್ಧ ಮಾಜಿ ಸಚಿವ ಜೈನ್‌ ದಾಖಲಿಸಿದ್ದ ಕೇಸು ವಜಾ

1-sachiva

Fraud case: ಮಹಾರಾಷ್ಟ್ರ ಸಚಿವಗೆ 2 ವರ್ಷ ಜೈಲು

POPE

ಪೋಪ್‌ ಫ್ರಾನ್ಸಿಸ್‌ ಆರೋಗ್ಯದಲ್ಲಿ ಕೊಂಚ ಚೇತರಿಕೆ: ವ್ಯಾಟಿಕನ್‌

1-ccchav

Chhaava ಚಿತ್ರವನ್ನು ಕಾಲ್ಪನಿಕವೆಂದ ನಟಿ ಸ್ವರಾ: ನೆಟ್ಟಿಗರಿಂದ ಟೀಕೆ

Kasaragod ವನ್ಯ ಜೀವಿ ದಾಳಿ: ಕಾಸರಗೋಡಿನಲ್ಲಿ 4 ವರ್ಷದಲ್ಲಿ 20 ಸಾವು

Kasaragod ವನ್ಯ ಜೀವಿ ದಾಳಿ: ಕಾಸರಗೋಡಿನಲ್ಲಿ 4 ವರ್ಷದಲ್ಲಿ 20 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.