ಇಬ್ಬರು ಬಾಲಕರು ಸೇರಿ ಎಂಟು ಜನರಿಗೆ ಕೋವಿಡ್
Team Udayavani, Jun 25, 2020, 9:03 AM IST
ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ ಇಬ್ಬರು ಬಾಲಕರು ಒಳಗೊಂಡಂತೆ ಎಂಟು ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ರೋಗಿ ನಂಬರ್ 8492ರ ಸಂಪರ್ಕದಿಂದ ದಾವಣಗೆರೆಯ ಆಜಾದ್ ನಗರದ 35 ವರ್ಷದ ಮಹಿಳೆ (ರೋಗಿ ನಂಬರ್ 9889)ಯಲ್ಲಿ ಸೋಂಕು ಕಾಣಿಸಿಕೊಂಡಿದೆ. ರೋಗಿ ನಂಬರ್ 8065 ಸಂಪರ್ಕದಿಂದ ಹರಿಹರದ ಶಿವಮೊಗ್ಗ ರಸ್ತೆಯ 24 ವರ್ಷದ ಯುವಕನಲ್ಲಿ(ರೋಗಿ ನಂಬರ್ 9890) ಸೋಂಕು ಬಂದಿದೆ. ರೋಗಿ ನಂಬರ್ 8806 ಸಂಪರ್ಕದಿಂದ ಚನ್ನಗಿರಿಯ ಗೌಡರ ಬೀದಿಯ 14 ವರ್ಷದ ಬಾಲಕ(ರೋಗಿ ನಂಬರ್ 9891) ಸೋಂಕಿಗೆ ಒಳಗಾಗಿದ್ದಾನೆ. ಬಳ್ಳಾರಿ ಜಿಲ್ಲೆಯ ಜಿಂದಾಲ್ ಸಂಪರ್ಕದಿಂದ ಹರಿಹರದ ಎ.ಕೆ. ಕಾಲೋನಿಯ 34 ವರ್ಷದ ವ್ಯಕ್ತಿ (ರೋಗಿ ನಂಬರ್ 9892), 35 ವರ್ಷದ ಮಹಿಳೆ (ರೋಗಿ ನಂಬರ್ 9893) ಸೋಂಕಿಗೆ ಒಳಗಾಗಿದ್ದಾರೆ.
ಬೆಂಗಳೂರಿನಿಂದ ವಾಪಾಸ್ಸಾದ ನಂತರ ತೀವ್ರ ಉಸಿರಾಟದ ಸಮಸ್ಯೆಯಿಂಬದ ಬಳಲುತ್ತಿದ್ದ ಹೊನ್ನಾಳಿ ತಾಲೂಕಿನ ಹತ್ತೂರು ಗ್ರಾಮದ 10 ವರ್ಷದ ಬಾಲಕ (ರೋಗಿ ನಂಬರ್ 9894) ಸೋಂಕಿಗೆ ಒಳಗಾಗಿದ್ದಾರೆ. ರೋಗಿ ನಂಬರ್ 7778 ಸಂಪರ್ಕದಿಂದ ಚನ್ನಗಿರಿಯ ಕುಂಬಾರ ಬೀದಿಯ 11 ವರ್ಷದ ಬಾಲಕ(ರೋಗಿ ನಂಬರ್ 9895), 39 ವರ್ಷದ ವ್ಯಕ್ತಿ (ರೋಗಿ ನಂಬರ್ 9896) ಸೋಂಕು ಕಾಣಿಸಿಕೊಂಡಿದೆ. ಕೋವಿಡ್ ದಿಂದ ಗುಣಮುಖರಾದ ಆವರಗೊಳ್ಳದ 20 ವರ್ಷದ ಯುವಕ ( ರೋಗಿ ನಂಬರ್ 7577) ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದರು. ಬುಧವಾರ 10 ಜನರು ಸೇರಿ ಒಟ್ಟಾರೆ 1,072 ಜನರು ಅವಲೋಕನದಲ್ಲಿ ಇದ್ದಾರೆ. ನಿನ್ನೆ 781 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. 222 ಜನರ ಗಂಟಲು ದ್ರವ ಮಾದರಿ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.