ಬೆಳಗಾವಿಯಿಂದಲೇ ಉತ್ತರಕರ್ನಾಟಕಕ್ಕೆ ಲಸಿಕೆ ಪೂರೈಕೆ
ಶೀಘ್ರವೇ ಬೆಳಗಾವಿ ತಲುಪಲಿದೆ ಕೊರೊನಾ ವ್ಯಾಕ್ಸಿನ್
Team Udayavani, Jan 12, 2021, 4:19 PM IST
ಬೆಳಗಾವಿ: ಒಂದು ವರ್ಷದಿಂದ ಮಹಾಮಾರಿಯ ಹೊಡೆತದಿಂದ ನಲುಗಿ ಬದುಕಿನ ಸಂತಸ ಕಳೆದುಕೊಂಡಿದ್ದ ದೇಶದ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಯಾವುದೇ ಕ್ಷಣದಲ್ಲಿಯೂ ಕೋವಿಡ್ ಲಸಿಕೆ ಬೆಳಗಾವಿಗೆ ಬಂದಿಳಿಯಲಿದ್ದು, ಸಿದ್ಧತೆ ಪೂರ್ಣಗೊಂಡಿದೆ. ಅಲ್ಲದೇ ಇಲ್ಲಿಂದಲೇ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಗೆ ಲಸಿಕೆ ರವಾನೆ ಆಗಲಿದೆ. ನಗರದ ವ್ಯಾಕ್ಸಿನ್ ಡಿಪೋದಲ್ಲಿರುವ ಜಿಲ್ಲಾ ಆರೋಗ್ಯ ಕೇಂದ್ರದ ಕಚೇರಿಯಲ್ಲಿರುವ ಉಗ್ರಾಣದಲ್ಲಿ ಲಸಿಕೆ ಸಂಗ್ರಹವಾಗಲಿದೆ. ಪುಣೆಯಿಂದ ನೇರವಾಗಿ ಬೆಳಗಾವಿ ಉಗ್ರಾಣಕ್ಕೆ ಸಾಗಾಟ ಮಾಡಿ ಅಲ್ಲಿಂದ ಇನ್ನುಳಿದ ಎಂಟು ಜಿಲ್ಲೆಗಳಿಗೆ ರವಾನೆ ಮಾಡಲಾಗುವುದು.
ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲಸಿಕೆ ಹಾಕಲು ಜ.16 ನಿಗದಿ ಮಾಡುತ್ತಿದ್ದಂತೆ ದೇಶದ ಜನರಲ್ಲಿ ಆಶಾಕಿರಣ ಮೂಡಿದ್ದು, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಸಂತಸ ಇಮ್ಮಡಿಯಾಗಿದೆ. ಒಟ್ಟು ನಾಲ್ಕು ಲಸಿಕೆ ಬೆಳಗಾವಿ ತಲುಪಲಿದೆ. ಉಗ್ರಾಣದಲ್ಲಿ ಸಂಗ್ರಹಿಸಿ ವಿಜಯಪುರ,ಬಾಗಲಕೋಟೆ, ಧಾರವಾಡ, ಕೊಪ್ಪಳ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳಿಗೆ ಲಸಿಕೆ ರವಾನೆ ಆಗಲಿದೆ. ಬಳಿಕ ಬೆಳಗಾವಿ ಜಿಲ್ಲೆಯ ಆಯಾ ತಾಲೂಕು ಆಸ್ಪತ್ರೆಗಳಿಗೆ ಕಳುಹಿಸಲಾಗುವುದು. ನಂತರ ಲಸಿಕೆ ಹಾಕುವ ಕೇಂದ್ರಗಳಿಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುವುದು.
30 ಸಾವಿರ ಮಂದಿ ನೋಂದಣಿ: ಈಗಾಗಲೇ ಕೋವಿಡ್ ಆ್ಯಪ್‌ನಲ್ಲಿ 30 ಸಾವಿರ ಆರೋಗ್ಯ ಸೇವೆ ಮಾಡುವವರು ಮೊದಲ ಹಂತದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 16 ಸಾವಿರ ಖಾಸಗಿ ವಲಯ ಹಾಗೂ 14 ಸಾವಿರ ಸರ್ಕಾರಿ ವಲಯದವರ ಹೆಸರು ನೋಂದಣಿ ಆಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಅಗತ್ಯ ಪೂರ್ವಭಾವಿ ಸಿದ್ಧತೆ ಜಿಲ್ಲಾಡಳಿತ ಮಾಡಿಕೊಂಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಸಂಗ್ರಹಕ್ಕೆ ಶೀತಲೀಕರಣ ಘಟಕಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲಿಂದ ಜಿಲ್ಲೆಯ 300-320 ಲಸಿಕೆ ವಿತರಣೆ ಕೇಂದ್ರಗಳಿಗೆ ವಿತರಿಸಲಾಗುತ್ತದೆ. ಜಿಲ್ಲೆಯಲ್ಲಿ ಎರಡು ಬಾರಿ ಲಸಿಕೆ ವಿತರಣೆ ಅಣಕು ತಾಲೀಮು ನಡೆಸಲಾಗಿದೆ. ಜ.2ರಂದು ಕಿತ್ತೂರು, ವಂಟಮೂರಿ, ಹುಕ್ಕೇರಿ ಮತ್ತು. ಜ.8ರಂದು ಗೋಕಾಕ, ನಿಪ್ಪಾಣಿ, ಯಕ್ಸಂಬಾ, ಅಥಣಿ ಸೇರಿ 7 ಕಡೆಗೆ ಸೇರಿ 10 ಕಡೆಗೆ ಡ್ರೈರನ್ ನಡೆಸಲಾಗಿದೆ. 520 ಮಂದಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯ ಎಲ್ಲ ಭಾಗದಲ್ಲಿಯೂ ಲಸಿಕೆ ಹಾಕುವ ಕೇಂದ್ರಗಳಿವೆ.
ಇದನ್ನೂ ಓದಿ: ಉತ್ತರಪ್ರದೇಶ ಅತ್ಯಾಚಾರ ಘಟನೆ ಖಂಡಿಸಿ ಪ್ರತಿಭಟನೆ
ಕೇಂದ್ರದಲ್ಲಿ 5 ಜನ ಕರ್ತವ್ಯ: ಒಂದು ಕೇಂದ್ರದಲ್ಲಿ ಒಬ್ಬರು ವ್ಯಾಕ್ಸಿನೇಟರ್ ಸೇರಿ ಐದು ಜನ ಸಿಬ್ಬಂದಿ ಕರ್ತವ್ಯನಿರ್ವಹಿಸಲಿದ್ದಾರೆ. ಪ್ರತಿ ಕೇಂದ್ರಕ್ಕೆ ಸೆಕ್ಯೂರಿಟಿ ಗಾರ್ಡ್ ಅಥವಾ ಪೊಲೀಸ್ ಸಿಬ್ಬಂದಿ ಅಗತ್ಯವಿದೆ. ಪ್ರತಿ ಕೇಂದ್ರದಲ್ಲಿ ಮೂರು ಕೊಠಡಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಮೀಪದ ಕ್ಲಿನಿಕ್, ನಸಿಂìಗ್ ಹೋಂ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಲ್ಲಿನ ಸಿಬ್ಬಂದಿಗೆ ಲಸಿಕೆ ವಿತರಿಸಲು ಅಲ್ಲಿಯೇ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.
ದಿನಕ್ಕೆ 100 ಮಂದಿಗೆ ಲಸಿಕೆ: ಪ್ರತಿ ಕೇಂದ್ರದಲ್ಲಿ ದಿನಕ್ಕೆ 100 ಮಂದಿಗೆ ಲಸಿಕೆ ನೀಡಲಾಗುವುದು. ಸರ್ಕಾರಿ ಆರೋಗ್ಯ ಕಾರ್ಯಕರ್ತರಿಗೆ ಎರಡು ದಿನಗಳಲ್ಲಿ ಲಸಿಕೆ ನೀಡುವ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಕೆಎಲ್‌ಇ ಅಂತಹ ದೊಡ್ಡ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಿಬ್ಬಂದಿ ಇರುವುದರಿಂದ ಐದು ದಿನಗಳವರೆಗೆ ಲಸಿಕೆ ಹಾಕುವ ಕಾರ್ಯ ಸಾಗಲಿದೆ. ವ್ಯಾಕ್ಸಿನ್ ಡಿಪೋದಲ್ಲಿರುವ ಕೇಂದ್ರೀಕೃತ ಕೋಲ್ಡ್ ಸ್ಟೋರೇಜ್‌ನಿಂದ ಐಸ್‌ಲೈನ್x ರೆμÅಜರೇಟರ್‌ಗಳಲ್ಲಿ(ಐಎಲ್ ಆರ್) ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆಗಳನ್ನು ಸರಬರಾಜು ಮಾಡಲಾಗುತ್ತದೆ. 180 ಕಡೆಗೆ ಡೀಪ್ ಫ್ರೀಜರ್ ಗಳು ಲಭ್ಯ ಇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಶೀತಲೀಕರಣ ಘಟಕದಿಂದ ವಿತರಣೆ ಕೇಂದ್ರಗಳಿಗೆ ಕೋಲ್ಡ್‌ಬಾಕ್ಸ್ ಹಾಗೂ ಐಸ್ ಕ್ಯಾರಿಯರ್‌ಗಳಲ್ಲಿ ಲಸಿಕೆಗಳನ್ನು ತಲುಪಿಸಲಾಗುತ್ತದೆ.
ಲಸಿಕೆ ಸಂಗ್ರಹ ಸಾಮರ್ಥ್ಯ ಹೆಚ್ಚು
ಈಗಾಗಲೇ ವ್ಯಾಕ್ಸಿನ್ ಡಿಪೋದಲ್ಲಿರುವ ಜಿಲ್ಲಾ ಆರೋಗ್ಯ ಕಚೇರಿಯ ಕೊಠಡಿಯಲ್ಲಿ ಲಸಿಕೆ ಉಗ್ರಾಣ ಮಾಡಿಕೊಳ್ಳಲಾಗಿದೆ. ಇಲ್ಲಿ ಆರೂವರೆ ಲಕ್ಷ ಲೀಟರ್ ಸಂಗ್ರಹಿಸಿಡುವ ಸಾಮರ್ಥ್ಯ ಇದ್ದು, 13.50 ಲಕ್ಷ ಲಸಿಕೆಗಳನ್ನು ಸಂಗ್ರಹಿಸಿ ಇಡಬಹುದಾಗಿದೆ. ಒಂದು ವಾಕ್ ಇನ್ ಕೂಲರ್ ಇದೆ. ಜತೆಗೆ ಎರಡು ವರ್ಷಗಳ ಹಿಂದೆಯೇ ಜಿಲ್ಲಾ ಮಟ್ಟದ ಲಸಿಕೆ ಸಂಗ್ರಹ ಕಟ್ಟಡ ಸಿದ್ಧಗೊಂಡಿದೆ. ಅಗತ್ಯ ಬಿದ್ದರೆ ಇಲ್ಲಿಯೂ ಸಂಗ್ರಹ ಮಾಡಲಾಗುವುದು. ವಾಕ್ ಇನ್ ಸಿಜರ್, ವಾಕ್ ಇನ್ ಕೂಲರ್ ಇದೆ. ಒಟ್ಟು 32 ಲಕ್ಷ ಡೋಸ್‌ಗಳನ್ನು ಸಂಗ್ರಹ ಮಾಡಿಕೊಳ್ಳುವ ಸಾಮರ್ಥ್ಯವಿದೆ.
ಬೆಳಗಾವಿ ವಿಮಾನ ನಿಲ್ದಾಣಕ್ಕೆ ಲಸಿಕೆ ಯಾವುದೇ ಕ್ಷಣದಲ್ಲಿಯೂ ಬರಲಿದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರೋಗ್ಯ ಇಲಾಖೆ ಅಧಿ ಕಾರಿಗಳು ವಿಮಾನ ನಿಲ್ದಾಣದ ಅಧಿ ಕಾರಿಗಳೊಂದಿಗೆ ಲಸಿಕೆ ಸರಬರಾಜು ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ವಿಮಾನ ಬಂದ ಮೇಲೆ ವಾಹನವನ್ನು ಒಳಗೆ ತೆಗೆದುಕೊಂಡು ಹೋಗಿ ಬಾಕ್ಸ್‌ಗಳನ್ನು ತುಂಬಿ ಉಗ್ರಾಣಕ್ಕೆ ಸಾಗಿಸಲಾಗುತ್ತದೆ. ಆದರೆ ಇನ್ನೂವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ರಾಜೇಶಕುಮಾರ ಮೌರ್ಯ, ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…
Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.