![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Dec 28, 2020, 4:46 PM IST
ಹೊನ್ನಾಳಿ: ಕೋವಿಡ್-19 ಉಲ್ಬಣ ಸಮಯದಲ್ಲಿಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರುಸೇರಿದಂತೆ ಕೋವಿಡ್ ವಾರಿಯರ್ಸ್ ಉತ್ತಮಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದು ಜೀವ ವಿಮಾ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಪ್ರತಿನಿಧಿ ವನಜಾಕ್ಷಮ್ಮ ರುದ್ರಪ್ಪ ಹೇಳಿದರು.
ನ್ಯಾಮತಿ ಪಟ್ಟಣದ ಅವರ ಮನೆಯಲ್ಲಿಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದರಿಂದ ವನಜಾಕ್ಷಮ್ಮ ಅವರು ಜೀವವಿಮಾ ನಿಗಮದಅಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಲ್‌ಐಸಿ ಮಹಿಳಾ ಪ್ರತಿನಿಧಿಯಾಗಿ ತಾವು ಬೆಳೆದ ಬಗ್ಗೆ ವಿವರಿಸಿ, ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಸಮಾಜ ಸೇವೆಗಾಗಿಬಳಸುತ್ತಿರುವುದಾಗಿ ತಿಳಿಸಿದರು. ಜೀವ ವಿಮಾ ಸಹಾಯದೊಂದಿಗೆ ಶಾಲೆಗಳಿಗೆ ದೇಣಿಗೆ,ದೇವಸ್ಥಾನಕ್ಕೆ ಕೊಳವೆ ಬಾವಿ ಕೊರೆಸಿಕೊಟ್ಟಿದ್ದು,ಕೆಲವು ಗ್ರಾಮಗಳನ್ನು ವಿಮಾ ಗ್ರಾಮವೆಂದು ಪರಿಗಣಿಸಿ ಅನುದಾನವನ್ನು ನೀಡುವ ಮೂಲಕ ಸಮಾಜ ಸೇವೆ ಮಾಡುತ್ತಿರುವುದಾಗಿ ತಿಳಿಸಿದರು.
ಗ್ರಾಪಂ ಮಾಜಿ ಸದಸ್ಯ ಪೂಜಾರ ಚಂದ್ರಶೇಖರ ಮಾತನಾಡಿ, ಸಮಾಜದಲ್ಲಿ ಮಹಿಳೆಯರುಸಮಾಜಮುಖೀ ಕೆಲಸಗಳನ್ನು ಮಾಡುವ ಮೂಲಕಸಮಾಜಕ್ಕೆ ಮಾದರಿ ಆಗಬೇಕು ಎಂದರು. ಕದಳಿ ಮಹಿಳಾ ಸಮಾಜದ ಅಧ್ಯಕ್ಷೆ ಅಂಬಿಕಾ ಬಿದರಗೆಡ್ಡೆ ಮತ್ತು ಎಂ.ಎಸ್. ಭಾರತಿ ಮಾತನಾಡಿ, ವನಜಾಕ್ಷಮ್ಮ ಅವರು ಎಲ್‌ಐಸಿ ಪ್ರತಿನಿಧಿ ಆಗಿ ಸಮಾಜ ಮತ್ತು ಕುಟುಂಬದ ನಿರ್ವಹಣೆ ಮಾಡುವ ಮೂಲಕ ಇತರೆ ಮಹಿಳೆಯರಿಗೆ ಮಾದರಿ ಆಗಿದ್ದಾರೆ ಎಂದರು. ಜೀವಿವಿಮಾಪ್ರತಿನಿಧಿ ಗಳ ಸಂಘದ ಅಧ್ಯಕ್ಷ ಬಸವರಾಜಪ್ಪ,ಚಿಕ್ಕ ಪಾಲಿಸಿ ಮಾಡುವುದರಿಂದ ಇಂದು ಕೋಟಿ ವ್ಯವಹಾರ ಮಾಡುವ ಮೂಲಕ ಎಂಆರ್ ಡಿಟಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ವನಜಾಕ್ಷಮ್ಮ ಸಾಧನೆ ದೊಡ್ಡದು ಎಂದರು.
ಶಿಕ್ಷಕ ಸಿದ್ದಪ್ಪ, ರಘು, ಆಶಾ ಕಾರ್ಯಕರ್ತೆಯರಾದ ಇಂದ್ರಮ್ಮ, ಸುನೀತಾ, ಪತ್ರಕರ್ತರಾದ ಎಚ್.ಎಂ. ಸದಾಶಿವಯ್ಯ, ಡಿ.ಎಂ. ಹಾಲಾರಾಧ್ಯ ಮಾತನಾಡಿದರು. ಕೋವಿಡ್ ವಾರಿಯರ್ಸ್ ಆಶಾ ಕಾರ್ಯಕರ್ತೆಯರಾದ ಸುನೀತಾ, ರೂಪಾ, ಆಶಾ, ಜಯಶೀಲಾ, ರೇಖಾ, ರೋಹಿಣಿ, ವಿನೋದಮ್ಮ, ಇಂದ್ರಮ್ಮ, ಪ್ಲೆಟೂನ್‌ರಾಘವೇಂದ್ರ ಮುಳೇಕರ್, ಪತ್ರಕರ್ತರಾದಡಿ.ಎಂ. ಹಾಲಾರಾಧ್ಯ, ಎಚ್.ಎಂ. ಸದಾಶಿವಯ್ಯ ಅವರನ್ನು ವನಜಾಕ್ಷಮ್ಮ ದಂಪತಿ ಸನ್ಮಾನಿಸಿದರು. ಜೀವವಿಮಾ ವ್ಯವಸ್ಥಾಪಕ ಜಯಸಿಂಹಜೆರಪು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪ ವ್ಯವಸ್ಥಾಪಕ ಗೋಪಾಲ ಕೃಷ್ಣಾಚಾರ್ ಸ್ವಾಗತಿಸಿದರು. ರಾಘವೇಂದ್ರ ಮುಳೇಕರ ವಂದಿಸಿದರು.
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ
Davanagere: ಪಕ್ಷದಿಂದ ಯತ್ನಾಳ್ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?
Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ
Davanagere: ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್
Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ
You seem to have an Ad Blocker on.
To continue reading, please turn it off or whitelist Udayavani.