ಬೇಡವಾದ ಮಕ್ಕಳ ರಕ್ಷಣೆಗೆ ತೊಟ್ಟಿಲು

Team Udayavani, May 23, 2017, 1:21 PM IST

dvg2.jpg

ದಾವಣಗೆರೆ: ಬೇಡವಾದ ಮಕ್ಕಳ ರಕ್ಷಣೆಗೆ ಇನ್ನು ಮುಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಸ್ಪತ್ರೆಗಳಲ್ಲಿ ತೊಟ್ಟಿಲು ಇಡುವ ಕಾರ್ಯಕ್ರಮ ರೂಪಿಸಿದೆ ಎಂದು ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ತಿಳಿಸಿದ್ದಾರೆ. 

ಸೋಮವಾರ ಸರ್ಕಾರಿ ಬಾಲಕರ ಮಂದಿರದಲ್ಲಿ ಆರ್ಥಿಕ ಹಿಂದುಳಿದ ಮಕ್ಕಳ ಬೇಸಿಗೆ ಶಿಬಿರ ವಿದ್ಯಾ ವಿಹಾರ ಸಮಾರೋಪದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಇಷ್ಟವಿಲ್ಲದೆ ಮಕ್ಕಳನ್ನು ಹೆರುವವರು ಆ ನವಜಾತ ಶಿಶುವನ್ನ ಎಲ್ಲೆಂದರಲ್ಲಿ ಬೀಸಾಡುವ ಬದಲು ನಮ್ಮ ಇಲಾಖೆಯಿಂದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಇಡಲಾಗುವ ತೊಟ್ಟಿಲಲ್ಲಿ ಹಾಕಿ ಹೋದರೆ ಸಾಕು.

ನಾವು ಅವುಗಳನ್ನು ರಕ್ಷಣೆ, ಪಾಲನೆ-ಪೋಷಣೆ ಮಾಡುತ್ತೇವೆ ಎಂದರು. ಇಂದು ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬೀಸಾಡಿ ಹೋಗುವ ಪ್ರಕರಣ ಹೆಚ್ಚುತ್ತಿವೆ. ಅಂತಹ ಶಿಶುಗಳು ಜನರ ಕಣ್ಣಿಗೆ ಬಿದ್ದರೆ ರಕ್ಷಣೆ ಆಗಲಿವೆ. ಬೀಳದೇ ಹೋದರೆ ನಾಯಿ, ಹಂದಿ, ನೀರು ಪಾಲಾಗುವ ಆತಂಕ ಇರುತ್ತದೆ.

ಇದನ್ನು ತಪ್ಪಿಸುವ ಉದ್ದೇಶದಿಂದ ಈ ತೊಟ್ಟಿಲು ಇಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅವರು ತಿಳಿಸಿದರು. ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿ ಬಾಲ ಭವನದ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ಆಟಿಕೆ ರೈಲು ಬಂದಿದೆ. ಮಾರ್ಗ ಸಹ ಸಿದ್ಧಗೊಂಡಿದೆ. ಸಣ್ಣ ಪುಟ್ಟ ಕೆಲಸ ಮಾತ್ರ ಬಾಕಿ ಇವೆ.

ಒಟ್ಟು 2.5 ಕೋಟಿ ವೆಚ್ಚದಲ್ಲಿ  ನಿರ್ಮಾಣ ಮಾಡುತ್ತಿರುವ ಪಾರ್ಕ್‌ನಲ್ಲಿ ಮಕ್ಕಳ ಆಟಿಕೆ ಅಳವಡಿಕೆಗೆ 50 ಲಕ್ಷ ರೂ. ಅನುದಾನ ಕೋರಲಾಗಿದೆ ಎಂದು ಅವರು ತಿಳಿಸಿದರು. ನಮ್ಮ ಇಲಾಖೆಯಿಂದ ನಡೆಸಲ್ಪಡುವ ಬಾಲ ಮಂದಿರಗಳಲ್ಲಿ ಈಗ 15 ಅನಾಥ ಮಕ್ಕಳಿದ್ದಾರೆ. ಅವುಗಳನ್ನು ನಾವು ದತ್ತು ಕೊಡಲು ಸಿದ್ಧರಿದ್ದೇವೆ.

ಆನ್‌ಲೈನ್‌ ಮೂಲಕ ಅರ್ಜಿ ಹಾಕಿ, ಇಚ್ಛೆಯುಳ್ಳವರು ಅವರನ್ನು ದತ್ತು ತೆಗೆದುಕೊಳ್ಳಬಹುದು ಎಂದು ಅವರು ತಿಳಿಸಿದರು. ಬೆಂಗಳೂರಿನ ಟ್ಯಾಲೆಂಟ್‌ ಸರ್ಚ್‌ ಫೌಂಡೇಷನ್‌ ಅಧ್ಯಕ್ಷ ಡಾ| ಸಲೀಂ ಜಿ. ಸೊನೆಖಾನ್‌ ಮಾತನಾಡಿ, ರಾಜ್ಯ, ಕೇಂದ್ರ ಪಠ್ಯಕ್ರಮದಲ್ಲಿ ಮಕ್ಕಳ ಕಲೆ ಗುರುತಿಸುವ ವಿಷಯಗಳು ಇಲ್ಲ.

ಇಂಥ ಶಿಬಿರ ಮೂಲಕ ಮಕ್ಕಳ ಕಲೆ ಕಂಡು ಹಿಡಿದು ಪ್ರೋತ್ಸಾಹಿಸಬೇಕಾಗಿದೆ ಎಂದರು. ಅಸಾಧರಣ ಮತ್ತು ಮುರುಘಾಮಠದ ಜಯದೇವಶ್ರೀ ಪ್ರಶಸ್ತಿ ಪಡೆದ ಸಿರಿ ಎಂಬ ವಿದ್ಯಾರ್ಥಿ ಎರಡು ಪ್ರಶಸ್ತಿ ಮೊತ್ತ 20 ಸಾವಿರ ರೂ.ಗಳನ್ನು ಮಕ್ಕಳ ದಿನಾಚರಣೆ ನಿಧಿಗೆ ಕೊಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದಳು.  

ಟಾಪ್ ನ್ಯೂಸ್

By Election; ಮೂರು ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿಗಳು ಅಂತಿಮ: ಸಚಿವ ಲಾಡ್

By Election; ಮೂರು ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿಗಳು ಅಂತಿಮ: ಸಚಿವ ಲಾಡ್

Sirsi: ಮೂಡಾ ಹಗರಣದ ಮೂಲಕ ಸಿದ್ರಾಮಣ್ಣ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ: ಕಾಗೇರಿ ಲೇವಡಿ

Sirsi: ಮುಡಾ ಹಗರಣದ ಮೂಲಕ ಸಿದ್ರಾಮಣ್ಣ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ: ಕಾಗೇರಿ ಲೇವಡಿ

nisha yogeshwar

Video: ಎಲ್ಲಾ ಸತ್ಯ ಹೊರ ತರುತ್ತೇನೆ: ತಂದೆ ವಿರುದ್ದ ಬಾಂಬ್‌ ಹಾಕಿದ ಸಿಪಿವೈ ಪುತ್ರಿ ನಿಶಾ

013

Kiccha Sudeep: ಪ್ರಜ್ಞೆಯಲ್ಲಿರುವಾಗ ನನ್ನ ತಾಯಿಯನ್ನು ಕೊನೆಯ ಬಾರಿಗೆ ನೋಡಲು ಆಗಲೇ ಇಲ್ಲ..

New Threat: ನ.1ರಿಂದ 19ರವರೆಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ: ಪನ್ನು ಬೆದರಿಕೆ

New Threat: ನ.1ರಿಂದ 19ರವರೆಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ: ಪನ್ನು ಬೆದರಿಕೆ

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅ. 22ರಂದು ಬೆಂಗಳೂರಲ್ಲಿ ವೀರಶೈವ ಲಿಂಗಾಯತ ಸಭೆ: ಶಾಮನೂರು

ಅ. 22ರಂದು ಬೆಂಗಳೂರಲ್ಲಿ ವೀರಶೈವ ಲಿಂಗಾಯತ ಸಭೆ: ಶಾಮನೂರು

Davanagere: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಅ.23ರಂದು ಪ್ರತಿಭಟನೆ: ರವಿನಾರಾಯಣ್

Davanagere: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಅ.23ರಂದು ಪ್ರತಿಭಟನೆ: ರವಿನಾರಾಯಣ್

Yatnal 2

Government ಪತನ ಸಂಚು ಹೇಳಿಕೆ; ದಾವಣಗೆರೆಯಲ್ಲಿ ಯತ್ನಾಳ್ ವಿರುದ್ಧ ಪ್ರಕರಣ ದಾಖಲು

accident

Davanagere; ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃ*ತ್ಯು

Davanagere: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ಹರಿಹರ- ಹರಪನಹಳ್ಳಿ ಸಂಚಾರ ಬಂದ್

Davanagere: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ಹರಿಹರ- ಹರಪನಹಳ್ಳಿ ಸಂಚಾರ ಬಂದ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Fraud: ವಿದೇಶದಲ್ಲಿ ಉದ್ಯೋಗ‌ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್‌ 

Fraud: ವಿದೇಶದಲ್ಲಿ ಉದ್ಯೋಗ‌ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್‌ 

1(1)

Bantwal: ಹೇಗಿದ್ದ ಕಲ್ಲಡ್ಕ ಈಗ ಹೇಗಾಗಿ ಹೋಗಿದೆ!

By Election; ಮೂರು ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿಗಳು ಅಂತಿಮ: ಸಚಿವ ಲಾಡ್

By Election; ಮೂರು ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿಗಳು ಅಂತಿಮ: ಸಚಿವ ಲಾಡ್

0527

Bengaluru: ತಂದೆ ಸಾಲದ ಹಣ ವಾಪಸ್‌ ಕೊಡದಕ್ಕೆ ಬಾಲಕಿ ಮೇಲೆ ರೇಪ್‌

031

Bengaluru: ನೌಕರಿ ಕೊಡಿಸುವುದಾಗಿ 47 ಲಕ್ಷ ರೂ. ದೋಚಿದ ಪೊಲೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.