ಸಂಸ್ಕೃತಿ ರಕ್ಷಣೆ ಎಲ್ಲರ ಜವಾಬ್ದಾರಿ

Team Udayavani, Jan 14, 2019, 6:19 AM IST

dvg-8.jpg

ದಾವಣಗೆರೆ: ಹಿಂದೂ ಸಂಸ್ಕೃತಿ, ಸಂಸ್ಕಾರ ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ಮಾತೆಯ ಮೇಲಿದೆ ಎಂದು ರಾಜಸ್ಥಾನದ ಶ್ರೀ ಶಕ್ತಿಪೀಠದ ಸಾಧ್ವಿ ಸಮದರ್ಶಿ ದಾದಿ ಮಾಬ ಹೇಳಿದರು.

ಮೋತಿ ವೀರಪ್ಪ ಪದವಿಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ಧರ್ಮ ಜಾಗರಣ ಸಮನ್ವಯ ಸಮಿತಿ ಲೋಕ ಕಲ್ಯಾಣಾರ್ಥ ಹಮ್ಮಿಕೊಂಡಿದ್ದ ಶ್ರೀ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ಸಂಸ್ಕಾರದ ಕೊರತೆಯಿಂದ ಇಂದು ಧರ್ಮಾಂತರಕ್ಕೆ ಬಲಿಯಾಗುತ್ತಿರುವುದು ಹೆಚ್ಚಾಗಿದೆ. ಜಾಗೃತರಾಗದಿದ್ದರೆ ಸಂಸ್ಕೃತಿ ನಾಶವಾಗಲಿದೆ. ಅನ್ಯ ಧರ್ಮಿಯರನ್ನು ಕೊಲ್ಲುವ, ಧರ್ಮಾಂತರಗೊಳಿಸುವ ಕಾರ್ಯದಿಂದ ಸ್ವರ್ಗ ಪ್ರಾಪ್ತಿ ಆಗುತ್ತದೆ ಎಂಬ ಕಲ್ಪನೆ ಹಿಂದೂ ಧರ್ಮದ್ದಲ್ಲ ಎಂದರು.

ಅನ್ಯ ಧರ್ಮಗಳು ಧರ್ಮ ಪ್ರಚಾರದ ಮೂಲಕ ಧರ್ಮಾಂತರದಲ್ಲಿ ತೊಡಗಿವೆ. ಒಂದು ಕೈಯಲ್ಲಿ ಪುಸ್ತಕ ಇನ್ನೊಂದರಲ್ಲಿ ಖಡ್ಗ ಹಿಡಿದು ಲವ್‌ ಜಿಹಾದ್‌ ನಡೆಯುತ್ತಿದ್ದು ಎಚ್ಚೆತ್ತುಕೊಳ್ಳಬೇಕಿದೆ. ಶಬರಿಮಲೆ ದೇವಸ್ಥಾನಕ್ಕೆ ಅನ್ಯ ಧರ್ಮದ ಮಹಿಳೆಯರ ಪ್ರವೇಶಕ್ಕೆ ಪೊಲೀಸರು ಸಹಕಾರ ನೀಡುವ ಮೂಲಕ ಹಿಂದೂ ಸಂಪ್ರದಾಯ, ಆಚರಣೆಗೆ ಅಪಚಾರ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.

ಸತ್ಯಯುಗ, ತ್ರೇತಾಯುಗದಲ್ಲಿ ಭಾರತ, ಅಫ್ಘಾನಿಸ್ಥಾನ್‌, ಪಾಕಿಸ್ತಾನ, ನೇಪಾಳ್‌, ಭೂತಾನ್‌, ಬಾಂಗ್ಲಾದೇಶ ಸೇರಿದಂತೆ ಭರತಖಂಡವಾಗಿತ್ತು. ಕಾಲಾಂತರದಲ್ಲಿ ವಿದೇಶಿಗರ ದಾಳಿಯಿಂದ ಈ ಖಂಡದ ಭೂ ಪ್ರದೇಶಗಳು ಪ್ರತ್ಯೇಕವಾಗಿ ಭಾರತ ದೇಶವಾಗಿ ಉಳಿದಿದೆ. ಬಾಬರ್‌ ವಿನಾಶ ಮಾಡಿದ ರಾಮಮಂದಿರ ಅಯೋಧ್ಯೆಯ ಸ್ಥಳದಲ್ಲಿ ಪುನಃ ನಿರ್ಮಾಣವಾಗಬೇಕಿದೆ ಎಂದರು.

ಸಮಿತಿಯ ಮುಖ್ಯ ವಕ್ತಾರ ಪಟ್ಟಾಭಿರಾಮ್‌ ಮಾತನಾಡಿ, ನಮ್ಮೆಲ್ಲರ ಪ್ರಯತ್ನದಿಂದ ಇಡೀ ಭಾರತ ವಿಕಾಸ ಆಗುವ ಮೂಲಕ ಜಗತ್ತಿಗೆ ತಾಯಿ ಆಗಬೇಕು. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರು ಭಾರತ ಸೂಪರ್‌ ಪವರ್‌ ಆಗಬೇಕೆಂದು ಕನಸು ಹೊಂದಿದ್ದರು. ಸೂಪರ್‌ ಪವರ್‌ ಎಂದರೆ ಮನುಷ್ಯನ ಮನಸ್ಸು, ಆತ್ಮ, ಬುದ್ಧಿ ವಿನಃ ಯಾವುದೇ ತಂತ್ರಜ್ಞಾನದ ಕಂಪ್ಯೂಟರ್‌, ಯಂತ್ರ, ಹಣವಲ್ಲ ಎಂದು ತಿಳಿಸಿದರು.

ದೇಶದ ಅವನತಿಗೆ ನಮ್ಮ ಧರ್ಮದ ಬಗ್ಗೆ ನಾವು ಹೊಂದಿರುವ ಅಜ್ಞಾನ ಕಾರಣ. ವೀರಶೈವ-ಲಿಂಗಾಯಿತ, ಕುರುಬ, ಇಸ್ಲಾಂ, ಕ್ರಿಶ್ಚಿಯನ್‌ ಇವು ಮತಗಳು ಮಾತ್ರ. ಆದರೆ, ಧರ್ಮ ಕೇವಲ ಒಂದು ಜಾತಿ, ಸಂಪ್ರದಾಯ, ಭಾಷೆ ಅಲ್ಲ. ಅದು ಎಲ್ಲವನ್ನು ಒಳಗೊಂಡಿರುವಂಥದ್ದು, ಅದೇ ನಿಜವಾದ ಧರ್ಮ. ಧರ್ಮವೇ ಪುಣ್ಯ, ಅಧರ್ಮವೇ ಪಾಪ. ಧರ್ಮ ಪರಂಪರೆಯ ಉಳಿವಿನ ಕೆಲಸಕ್ಕೆ ಸತ್ಯನಾರಾಯಣ ಸ್ವಾಮಿ ಪೂಜೆಯೂ ಒಂದು ಮಾರ್ಗವಾಗಿದೆ ಎಂದು ಹೇಳಿದರು.

ಪ್ರಪಂಚದಲ್ಲಿ ಶಾಂತಿ, ಸುಖ, ನೆಮ್ಮದಿ ಇಲ್ಲದ್ದಕ್ಕೆ ಇಡೀ ವಿಶ್ವ ಭಾರತದತ್ತ ಮುಖ ಮಾಡಿ ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಧರ್ಮಿಯರು ತಮ್ಮ ತನು, ಮನ, ಧನವನ್ನು ಸಮಾಜದ ಒಳಿತಿಗೆ ಅರ್ಪಣೆ ಮಾಡುವುದರೊಟ್ಟಿಗೆ ಬದುಕನ್ನು ಹಸನಾಗಿಸಿಕೊಳ್ಳಬೇಕು. ಭಾರತ ತನ್ನ ಸ್ವ-ಸಾಮರ್ಥ್ಯದ ಬಲದಿಂದ ಪ್ರಗತಿ ಹೊಂದಬೇಕು ಎಂದರು.

ಧರ್ಮಜಾಗರಣ ಪ್ರಮುಖ್‌ ಮುನಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಹಗಲಿರುಳು ದೇಶ ರಕ್ಷಿಸುವ ಯೋಧರು ಬಲಿದಾನ, ತ್ಯಾಗಗಳ ಪ್ರತಿರೂಪ. ಹಾಗಾಗಿ ಇಂದಿನ ಯುವಪೀಳಿಗೆಗೆ ಅಂಥವರು ಮಾದರಿ ಆಗಬೇಕೆ ಹೊರತು ಚಲನಚಿತ್ರ ನಟ-ನಟಿಯರಲ್ಲ, ಕ್ರಿಕೆಟ್ ಆಡುವವರಂತಹ ಸೋಮಾರಿಗಳಲ್ಲ ಎಂದು ಕಿವಿಮಾತು ಹೇಳಿದರು.

ಸಮಿತಿಯಿಂದ ಹಮ್ಮಿಕೊಂಡಿರುವ ಶ್ರೀ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಮಂಗಳಮುಖೀಯರು, ಪೌರ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಸಾವಿರಾರು ಕುಟುಂಬಗಳು ಭಾಗವಹಿಸಿರುವುದು ಸಮಾನತೆಯ ಸಂಕೇತವಾಗಿದೆ. ಧರ್ಮ ಯಾವುದೇ ಭೇದವಿಲ್ಲದೇ ಎಲ್ಲರಿಗೂ ಅವಕಾಶ ನೀಡಿರುವ ಸಮಾನ ವೇದಿಕೆಯಾಗಿದೆ. ಶೋಷಿತ, ಅವಕಾಶ ವಂಚಿತರನ್ನು ಒಟ್ಟಿಗೆ ಸೇರಿಸುವ ಕಾರ್ಯ ಆರ್‌ಎಸ್‌ಎಸ್‌ನಿಂದ ನಿರಂತರವಾಗಿ ನಡೆಯುತ್ತಿದೆ. ಇದು ಈ ಧಾರ್ಮಿಕ ಕಾರ್ಯಕ್ರಮದ ಸದುದ್ದೇಶವಾಗಿದೆ ಎಂದರು.

ಸ್ವಾಗತ ಸಮಿತಿ ಅಧ್ಯಕ್ಷ ದೇವರಮನೆ ಶಿವಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆ.ಬಿ. ಶಂಕರನಾರಾಯಣ, ಕಾರ್ಯದರ್ಶಿ ಅಜಯ್‌ಕುಮಾರ್‌, ಡಿ. ಕರಿಯಪ್ಪ, ಜಿ. ಕೊಟ್ರೇಶ್‌ ಗೌಡ ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

1-dvg

Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.