ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಕಡಿವಾಣ ಹಾಕಿ
Team Udayavani, Sep 24, 2019, 9:48 AM IST
ದಾವಣಗೆರೆ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸರ್ಕಾರಿ ಬಸ್ ಸೇವೆ, ಮಾಲಿನ್ಯ ತಡೆ, ಕೆಎಸ್‌ಆರ್‌ಟಿಸಿ ಬಸ್ ಡಿಪೋ ನಿರ್ಮಾಣ, ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಕಡಿವಾಣ, ಕೆಲಸ, ಖಾತೆ ಬದಲಾವಣೆ ಸೇರಿದಂತೆ ವಿವಿಧ ಅಹವಾಲು-ಕೋರಿಕೆ ಅರ್ಜಿ ಸ್ವೀಕರಿಸಲಾಗಿದೆ.
ಮಾಗಾನಹಳ್ಳಿ ಪ್ರಕಾಶ್ ಹಾಗೂ ಅವರ ಸಹೋದರ, ಹೈಸ್ಕೂಲ್ ಮೈದಾನದ ಹಿಂಭಾಗದಲ್ಲಿರುವ 5 ಎಕರೆ 14 ಗುಂಟೆ ಜಮೀನಿನ ಮೂಲ ಮಾಲೀಕರು ನಾವಾಗಿದ್ದೇವೆ. ಪಹಣಿ ಕೂಡ ನಮ್ಮ ಹೆಸರಲ್ಲಿದೆ. ಆದರೂ ದಾವಣಗೆರೆ ಎಸಿಯವರು ನಮ್ಮ ಹೆಸರಿಗೆ ಖಾತೆ ಮಾಡಿಕೊಡದೆ, ಪ್ರಸ್ತುತ ಸ್ವಾಧೀನದಲ್ಲಿರುವವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ.
ನಮ್ಮಿಂದ ಹಣ ನಿರೀಕ್ಷಿಸುತ್ತಿದ್ದು, ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ದೂರಿದರಲ್ಲದೆ, ಈ ಜಾಗಕ್ಕೆ ಸಂಬಂಧಿ ಸಿದಂತೆ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಡಿಸಿ ಕೋರ್ಟಿನಲ್ಲೂ ಈ ಪ್ರಕರಣವಿದ್ದು, ತಮ್ಮ ಕಡೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ಆಗ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಖಾತೆ ಸೇರಿದಂತೆ ಯಾವುದೇ ದಾಖಲೆ ಮಾಡಿಸಲು ಒಂದು ವಿಧಾನ ಇರುತ್ತದೆ. ಆ ಖಾತೆ ವಜಾ ಮಾಡಿಸಲು ಅಪೀಲು ಅಥವಾ ಅರ್ಜಿ ನೀಡಬೇಕು. ನಂತರ ಈ ಕುರಿತು ವಿಚಾರಣೆ ನಡೆಸಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದ ಅಷ್ಟೂ ದಾಖಲಾತಿಗಳನ್ನು ತೆಗೆದುಕೊಂಡು ಬಂದಲ್ಲಿ ತಾವು ಪರಿಶೀಲಿಸುವುದಾಗಿ ತಿಳಿಸಿದರು.
ಮೋತಿವೀರಪ್ಪ ಬಡಾವಣೆಯಮಹಿಳೆಯೋರ್ವರು, ತಮ್ಮ ವಸತಿ ಬಳಿ ರಸ್ತೆ ಮೇಲೆ ಕಾಂಪೌಂಡ್ ನಿರ್ಮಿಸಲಾಗಿದ್ದು, ಈ ಕಾಂಪೌಂಡ್ ತೆರವುಗೊಳಿಸುವಂತೆ ಮನವಿ ಮಾಡಿದಾಗ ಜಿಲ್ಲಾ ಧಿಕಾರಿ, ಅರ್ಜಿ ಪಾಲಿಕೆ ಆಯುಕ್ತರಿಗೆ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಎಸ್‌ಪಿಎಸ್ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು, ರಿಂಗ್ ರಸ್ತೆಯಲ್ಲಿ ಮಣ್ಣು ಹಾಕಲಾಗಿದೆ. ಇದರಿಂದ ಧೂಳು ಸೃಷ್ಟಿಯಾಗುತ್ತಿದೆ. ಚರಂಡಿಗಳ ಪಕ್ಕದಲ್ಲಿ ಹಾಕಿದ ಮಣ್ಣನ್ನು ಸಮತಟ್ಟು ಮಾಡಿಲ್ಲ. ರಸ್ತೆಗಳ ತುಂಬ ಗುಂಡಿಗಳಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಹಲವು ರಸ್ತೆಗಳಲ್ಲಿ ಡ್ರೈನೇಜ್ ವ್ಯವಸ್ಥೆ ಇಲ್ಲ. ಮಾಹಿತಿ ಫಲಕಗಳಿಲ್ಲ.
ಆದ್ದರಿಂದ ಈ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಮುಗಿಸಿ, ಇಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಎಸ್‌ಪಿಎಸ್ ನಗರ ನಿವಾಸಿಗಳಾದ ಮಹಾಲಕ್ಷ್ಮೀ, ಇತರರು ಮನವಿ ಮಾಡಿದರು. ಜಿಲ್ಲಾಧಿಕಾರಿಗಳು, ಸ್ಮಾರ್ಟ್‌ಸಿಟಿ ಅಧಿಕಾರಿಗಳೂ ಸಭೆಗೆ ಬರಬೇಕು. ಈ ಮನವಿಯನ್ನು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಿ, ಸೂಕ್ತ ಕ್ರಮ ಕೈಗೊಳ್ಳಲುತಿಳಿಸುತ್ತೇನೆ ಎಂದರು.
ಚನ್ನಗಿರಿ ತಾಲೂಕಿನ ತ್ಯಾವಣಿಗಿಯ ಟಿ.ಎನ್.ವೀರೇಂದ್ರಕುಮಾರ್, ದೊಡ್ಡಘಟ್ಟದ ಅಲ್ಲಾಭಕ್ಷ, ಕೆರೆಬಿಳಚಿಯ ಹೈದರ್ ಅಲಿ ಖಾನ್ ಎಂಬುವರು, ದಾವಣಗೆರೆ-ಚನ್ನಗಿರಿ ಮಾರ್ಗದಲ್ಲಿ 2 ಸಾವಿರ ವಿದ್ಯಾರ್ಥಿಗಳು, 800 ಜನ ಅಂಗವಿಕಲರು, ಹಿರಿಯ ನಾಗರಿಕರು, ಅಧಿಕಾರಿಗಳು ಸೇರಿದಂತೆ ದಿನನಿತ್ಯ ಸಾರ್ವಜನಿಕರು ಪ್ರಯಾಣಿಸುತ್ತಿದ್ದು, ಈ ಗ್ರಾಮಗಳಿಗೆ ಹೆಚ್ಚುವರಿ ಬಸ್ ಸಂಚಾರದ ಅವಶ್ಯಕತೆ ಇದೆ. ಇದಕ್ಕಾಗಿ ಹೋರಾಟ ಮಾಡಿದರೂ ಕೇವಲ ಬೆಳಿಗ್ಗೆ ಮಾತ್ರ ಹೆಚ್ಚುವರಿ ಬಸ್ ಬಿಡಲಾಗುತ್ತಿದೆ. ಸಂಜೆಗೂ ಹೆಚ್ಚುವರಿ ಬಸ್ ಸೌಕರ್ಯ ನೀಡಬೇಕೆಂದು ಮನವಿ ಮಾಡಿದರು.
ದಾವಣಗೆರೆ ನಗರದ ಶಕ್ತಿನಗರದ ನಿವಾಸಿ ಯುವತಿಯೋರ್ವರು ತಾವು ಎಂ.ಕಾಂ ಪದವೀಧರೆಯಾದರೂ ಕೆಲಸ ಸಿಕ್ಕಿಲ್ಲ. ಮನೆಯಲ್ಲಿ ಆರ್ಥಿಕ ಸಮಸ್ಯೆ ಬಹಳ ಇದೆ. ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್, ಕಂಪ್ಯೂಟರ್ ಜ್ಞಾನವಿದ್ದು, ಯಾವುದಾದರೂ ಕೆಲಸ ದೊರಕಿಸಿಕೊಡುವಂತೆ ಮಾಡಿದ ಮನವಿಗೆ ಜಿಲ್ಲಾ ಧಿಕಾರಿಗಳು, ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಿ ಕೆಲಸ ದೊರಕಿಸಿಕೊಡುವುದಾಗಿ ಹೇಳಿದಾಗ, ಸಭೆಯಲ್ಲಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಬಸವರಾಜ್ ಬಣಕಾರ್, ತಮ್ಮ ವಿವಿ ಕಚೇರಿಯಲ್ಲಿ ಕೆಲಸ ನೀಡುವುದಾಗಿ ತಿಳಿಸಿದರು. ಹರಿಹರ ತಾಲೂಕಿನ ಪಾಮೇನಹಳ್ಳಿ
ಗ್ರಾಮದ ಎಸ್.ಮಸಿಯಪ್ಪ, ಮಹಿಂದ್ರಾ ಆ್ಯಂಡ್ ಮಹಿಂದ್ರಾ ಫೈನಾನ್ಸ್‌ನಲ್ಲಿ ಟ್ರಾಕ್ಟರ್ ಗಾಗಿ 2012ನೇ ಸಾಲಿನಲ್ಲಿ ಟ್ರಾಕ್ಟರ್ ಖರೀದಿಗಾಗಿ 3,80,000 ಸಾಲ ಪಡೆದಿದ್ದು, ಬೆಳೆ ವೈಫಲ್ಯದಿಂದಾಗಿ ಸಾಲದ ಒಟ್ಟು ಬಡ್ಡಿ 1,48,960 ರೂ. ಮತ್ತು ಅಸಲು ಬಡ್ಡಿ ಸೇರಿ 5,28,960 ರೂ. ವಿಳಂಬವಾಗಿ ಪಾವತಿಸಿದ್ದೇನೆ. ಆದರೆ
ಈಗ ಚಕ್ರಬಡ್ಡಿಯ ರೂಪದಲ್ಲಿ 1,28,427 ರೂ. ಪಾವತಿಸುವಂತೆ ಒತ್ತಾಯಿಸುತ್ತಿದ್ದು, ತಮಗೆ ನ್ಯಾಯ ದೊರಕಿಸಿಕೊಡಬೇಕೆಂಬ ಮನವಿಗೆ ಆ ಫೈನಾನ್ಸ್ ನವರೊಂದಿಗೆ ಮಾತನಾಡಿ, ಪರಿಶೀಲಿಸಲಾಗುವುದು ಎಂದು ಡಿಸಿ ತಿಳಿಸಿದರು.
ಹರೀಶ್ ಹಳ್ಳಿ, ನಗರದಲ್ಲಿ ಅನ ಧಿಕೃತ ಕಟ್ಟಡಗಳ ನಿರ್ಮಾಣ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂಬ ಮನವಿಗೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರಿಗೆ ಈ ಕುರಿತು ಪರಿಶೀಲಸಿ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಿದರು.
ರೇಣುಕಾ ಪ್ರಸಾದ್ ಎಂಬುವವರು ದೂಡಾದಲ್ಲಿ 20 ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು, ಬೇರೆಡೆ ವರ್ಗಾವಣೆ ಆಗದೆ ಇಲ್ಲಿಯೇ ಉಳಿದುಕೊಂಡಿದ್ದಾರೆ. ಅರ್ಜಿದಾರರಿಗೆ ವಿನಾ ಕಾರಣ ಸತಾಯಿಸುತ್ತಾರೆ. ಹಣದ ಬೇಡಿಕೆ ಇಡುತ್ತಾರೆಂದು ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.
ನಗರದಲ್ಲಿ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ನಗರ ಸಂಚಾರಿ ಬಸ್‌ಗಳು ಸಂಚರಿಸುವಾಗ ಚಾಲಕರು ಹಲವಾರು ಬಾರಿ ಹೇಳಿದರೂ ಬಾಗಿಲು ಹಾಕದೇ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದು, ಶಾಲಾ-ಕಾಲೇಜಿನ ಮಕ್ಕಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಪದ್ಮಾ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ.ಜಿ, ಉಪವಿಭಾಗಾ ಕಾರಿ ಕುಮಾರಸ್ವಾಮಿ, ವಿಶೇಷ ಭೂಸ್ವಾಧಿಧೀನಾಧಿ ಕಾರಿ ರೇಷ್ಮಾ ಹಾನಗಲ್, ಡಿಎಚ್‌ಓ ಡಾ| ರಾಘವೇಂದ್ರಸ್ವಾಮಿ, ಡಿಡಿಪಿಐ ಪರಮೇಶ್ವರಪ್ಪ, ಆರ್‌ಟಿಓ ಎನ್.ಜೆ.ಬಣಕಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ
ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.