ದೇಶದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಬದ್ಧ
ಅಭಿವೃದ್ಧಿ ಸಹಿಸದ ಕಾಂಗ್ರೆಸ್ ನಾಯಕರಿಂದ ಟೀಕೆ! ಬಿಜೆಪಿ ಬೆಂಬಲಿತ ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ
Team Udayavani, Mar 7, 2021, 6:31 PM IST
ಜಗಳೂರು: ದೇಶದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಶ್ರಮಿಸುತ್ತಿದ್ದು, ಇದನ್ನು ಸಹಿಸದ ವಿರೋಧ ಪಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿನಾಃ ಕಾರಣ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದರು.
ಪಟ್ಟಣದ ತರಳಬಾಳು ಕೇಂದ್ರದಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ಬಿಜೆಪಿ ಬೆಂಬಲಿತ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿರೋಧ ಪಕ್ಷ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಭಿವೃದ್ಧಿ ಸಹಿಸದೇ ವಿರೋಧ ವ್ಯಕ್ತ ಪಡಿಸುತ್ತಿರುವುದು ಸರಿಯಲ್ಲ. ಹಣ, ಸಮಯ, ಪರಿಶ್ರಮ, ಉತ್ತಮ ಆಡಳಿತಕ್ಕಾಗಿ ಒಂದು ದೇಶ, ಒಂದು ಚುನಾವಣೆಗೆ ಜಾರಿಗೆ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ವಿರೋಧ ಪಡಿಸುತ್ತಿರುವುದು ಸಾರ್ವಜನಿಕರ ಹಿತದೃಷಿಯಿಂದ ಸರಿಯಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ವಿಕಾಸ, ರಾಮ ರಾಜ್ಯ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಆಗಬೇಕೆಂಬ ರಾಷ್ಟ್ರಪಿತ ಮಹಾತ್ಮ ಗಾಂ ಧಿ ಕಂಡಿದ್ದ ರಾಮ ರಾಜ್ಯ ಮಾಡುವ ಕನಸನ್ನು ನನಸು ಮಾಡಲು ಬಿಜೆಪಿ ಶ್ರಮಿಸುತ್ತಿದೆ. ಗ್ರಾಮ ಪಂಚಾಯಿತಿಗೆ ವರ್ಷಕ್ಕೆ ಪ್ರಧಾನಂತ್ರಿ ನರೇಂದ್ರ ಮೋದಿ ಅವರು 1 ಕೋಟಿಗೂ ಅ ಧಿಕ ಹಣ ಬಿಡುಗಡೆ ಮಾಡುತ್ತಿದೆ. ಶೌಚಾಲಯ ನಿರ್ಮಾಣ, ಕೋವಿಡ್ ನಿಯಂತ್ರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೇಂದ್ರ ಹಾಗೂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಮಾಡುತ್ತಿವೆ ಎಂದರು.
ದಾವಣಗೆರೆ ಸಿಟಿ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ನರೇಂದ್ರ ಮೋದಿ ಅವರು 100 ಕೋಟಿ ಬಿಡುಗಡೆಗೊಂಡ ಹಣದಲ್ಲಿ ರಸ್ತೆಗಳು, ವಿದ್ಯುತ್ ಅಲಂಕಾರುಗಳು ನಡೆಯುತ್ತಿದೆ. ಶಾಮನೂರು ಶಿವಶಂಕರಪ್ಪ ಅವರು ಮಾಡಿದ್ದಲ್ಲ. ಜಗಳೂರಿಗೆ ಅಪ್ಪರ್ ಭದ್ರಾ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತರುವುದು ಅಷ್ಟು ಸುಲುಭವಲ್ಲ. ಸಿರಿಗೆರೆ ಶ್ರೀಗಳು, ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಶಾಸಕ ಎಸ್ .ವಿ.ರಾಮಚಂದ್ರ ಸರ್ಕಾರದ ಮೇಲೆ ಒತ್ತಡ ಮಾಡಿ ಜಾರಿ ತಂದಿದ್ದಾರೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಇರುವ ಸೌಲಭ್ಯಗಳು, ಪ್ರಧಾನ ಮಂತ್ರಿ, ಮುಖ್ಯಮಂತ್ರಿಗೂ ಸಂಸದರಿಗೂ, ಶಾಸಕರಿಗೂ ಚೆಕ್‌ಗೆ ಸಹಿ ಮಾಡಿ ನೀಡುವ ಅಧಿ ಕಾರ ಇಲ್ಲ. ಅದು ಅಧ್ಯಕ್ಷರಿಗೆ ಅಧಿ ಕಾರ ನೀಡಿರುವುದು ಮಹಾತ್ಮ ಗಾಂಧಿ ಅಂದುಕೊಂಡಿದ್ದ ಗ್ರಾಮ ಸ್ವರಾಜ್ ಯೋಜನೆಯಿಂದ ಅಭಿವೃದ್ಧಿ ಆಗುತ್ತಿವೆ. ಗ್ರಾಮಗಳ ಅಭಿವೃದ್ಧಿ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಂತೆ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರಿಗೆ ಕರೆ ನೀಡಿದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಬರದ ತಾಲೂಕನ್ನು ಹಸಿರುನಾಡನ್ನಾಗಿ ಸಿರಿಗೆರೆ ಶ್ರೀಗಳ ಪ್ರಯತ್ನದ ಫಲವಾಗಿ 57 ಕೆರೆಗಳಿಗೆ ನೂರು ತುಂಬಿಸುವ ಯೋಜನೆ ಉದ್ಘಾಟನೆ ಹಾಗೂ ಅಪ್ಪರ್ ಭದ್ರಾ ಯೋಜನೆ ಶಂಕು ಸ್ಥಾಪನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕರೆಯಿಸಿ, ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸಬೇಕು ಎಂಬುದು ನನ್ನ ಆಶಯ. ಪಿಎಂ ಮತ್ತು ಸಿಎಂ ಕರೆಸುವ ಜವಾಬ್ದಾರಿ ಸಂಸದ ಜಿ.ಎಂ. ಸಿದ್ದೇಶ್ವರ್, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಅವರ ಮೇಲಿದೆ. ನುಡಿದಂತೆ ನಡೆಯುವ ಜಾಯಮಾನ ನನ್ನದು. ಕೆಲವರಂತೆ ಭರವಸೆ ನೀಡುವ ಸುಳ್ಳು ಹೇಳುವನಲ್ಲ. ಪತ್ರಕರ್ತರ ಸಂಘಕ್ಕೆ 20 ಲಕ್ಷ ಅನುದಾನ ನೀಡಿ ಕಾಮಗಾರಿ ಪ್ರಾರಂಭಿಸಿರುವುದೇ ಇದಕ್ಕೆ ಸಾಕ್ಷಿ ಎಂದರು.
ಸನ್ಮಾನ: ನೂತನವಾಗಿ ಆಯ್ಕೆಯಾದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಪಂ, ಜಿಪಂ, ಎಪಿಎಂಸಿ, ಪಿಎಲ್‌ಡಿ ಬ್ಯಾಂಕ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ಇಂದಿರಾ ರಾಮಚಂದ್ರ, ಜಿ.ಪಂ ಅಧ್ಯಕ್ಷೆ ಶಾಂತಕುಮಾರಿ, ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆಚ್ಚೇನಹಳ್ಳಿ ಸಿದ್ದೇಶ್, ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ವೇಣುಗೋಪಾಲರೆಡ್ಡಿ, ಜಿ.ಪಂ ಸದಸ್ಯರಾದ ಸಿದ್ದಪ್ಪ, ಸವಿತಾ ಕಲ್ಲೇಶಪ್ಪ, ಪಪಂ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ, ಡಿ.ವಿ. ನಾಗಪ್ಪ, ಉಮೇಶ್‌ನಾಯ್ಕ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಗಡಿಮಾಕುಂಟೆ ಸಿದ್ದೇಶ್, ಸಿಂಡಿಕೇಟ್ ಸದಸ್ಯ ಕೃಷ್ಣಮೂರ್ತಿ, ಶಿವಕುಮಾರಸ್ವಾಮಿ, ಜಯಲಕ್ಷಿ ¾à ಮಹೇಶ್, ಜೆ.ವಿ. ನಾಗರಾಜ್, ಅಂಜಿನಪ್ಪ, ಪಣಿಯಾಪುರ ಲಿಂಗರಾಜು ಸೇರಿದಂತೆ ಚುನಾಯಿತ ಪ್ರತಿನಿ ಧಿಗಳು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.