ಮೌಡ್ಯ ಹೆಚ್ಚಳ ಉತ್ತಮ ಬೆಳವಣಿಗೆ ಅಲ್ಲ
ಸಾಹಿತಿ ಡಾ| ಪ್ರಕಾಶ್ ಗ .ಖಾಡೆ ಅವರಿಗೆ ಹರಿಹರಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು
Team Udayavani, Feb 8, 2021, 3:39 PM IST
ಹರಿಹರ: ಸಮಾಜದಲ್ಲಿ ದಿನೇ ದಿನೇ ವೈಜ್ಞಾನಿಕ, ವೈಚಾರಿಕ ಮನೋಭಾವ ಕ್ಷೀಣಿಸಿ ಮೂಢನಂಬಿಕೆ ಹೆಚ್ಚುತ್ತಿದೆ ಎಂದು ಭದ್ರಾವತಿಯ ಸರ್.ಎಂ.ವಿ ಕಾಲೇಜಿನ ಪ್ರಾಧ್ಯಾಪಕ ಡಾ| ಡಿ. ಶಿವಲಿಂಗೇಗೌಡ ಆತಂಕ ವ್ಯಕ್ತಪಡಿಸಿದರು.
ಸಾಹಿತ್ಯ ಸಂಗಮ ವತಿಯಿಂದ ನಗರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಹರಿಹರಶ್ರೀ ಪ್ರಶಸ್ತಿ ಪ್ರಧಾನ ಮತ್ತು
ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶವಾಸಿಗಳು ಮೌಡ್ಯ ತೊರೆದು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಇಂದಿನ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದಾರೆ.
ಬಹುತೇಕ ಮಾಧ್ಯಮಗಳು ಪ್ರಜಾಪ್ರಭುತ್ವ, ಸಂವಿಧಾನಿಕ ಮೌಲ್ಯಗಳನ್ನು ಪಸರಿಸುವ ಬದಲು ಮೌಡ್ಯಗಳನ್ನು ಬಿತ್ತುತ್ತಿವೆ ಎಂದು ವಿಷಾದಿಸಿದರು. ಯಾವ ದೇಶದಲ್ಲಿ ಸಾಹಿತಿಗಳು ಮೇಲ್ಪಂಕ್ತಿಯಲ್ಲಿರುತ್ತಾರೋ ಆ ದೇಶ ಪ್ರಗತಿಯಲ್ಲಿರುತ್ತದೆ. ಎಲ್ಲಿ ಕೇವಲ ರಾಜ ಕಾರಣಿಗಳು ಮೇಲ್ಪಂಕ್ತಿಯ ಲ್ಲಿರುತ್ತಾರೋ ಆ ದೇಶ ಏನಾಗುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ ಎಂದರು.
ಹರಿಹರಶ್ರೀ ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಡಾ| ಪ್ರಕಾಶ್ ಗ. ಖಾಡೆ ಮಾತನಾಡಿ, ಸಾಹಿತಿಯಾದವನಿಗೆ ಸಾಮಾಜಿಕ ಕಳಕಳಿ, ಸೃಜನಶೀಲತೆ ಇದ್ದರೆ ಮಾತ್ರ ಮೌಲ್ಯಯುತ ಕವನ ರಚನೆ ಸಾಧ್ಯ. ಸಾಹಿತ್ಯ ಸಂಗಮ ಸಂಸ್ಥೆ ರಾಜ್ಯ ಮಟ್ಟದಲ್ಲಿ ಕವನ ಸಂಕಲನಗಳನ್ನು ತರಿಸಿಕೊಂಡು ಮೌಲ್ಯಮಾಪಕರಿಂದ ಆಯ್ಕೆ ಮಾಡಿಸಿ ಪ್ರಶಸ್ತಿ ನೀಡುವ ಪ್ರಕ್ರಿಯೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೊ| ಎಚ್.ಎ. ಭಿವರ್ತಿಮಠ ಮಾತನಾಡಿ, ಬೆಂಗಳೂರಿನಲ್ಲಿ ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ಸಾಹಿತಿಗಳ ವಾಕ್ ಸ್ವಾತಂತ್ರದ ಮೇಲೆ ನಡೆದ ಪ್ರಹಾರ. ಸಲ್ಲದ ಕಾರಣಗಳನ್ನು ನೀಡಿ ಇಂತಹ ಹೇಯ ಕೃತ್ಯವನ್ನು ಸಮರ್ಥಿಸುತ್ತಿರುವುದು ಶೋಚನೀಯ ಎಂದರು.
ಕಾರ್ಮಿಕ ಮುಖಂಡ ಎಚ್. ಕೆ. ಕೊಟ್ರಪ್ಪ, ಕನ್ನಡ ಪರ ಹೋರಾಟಗಾರ ಎಕ್ಕೆಗೊಂದಿ ರುದ್ರೇಗೌಡರಿಗೆ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ ಸಿ.ಎನ್. ಹುಲಿಗೇಶ್, ಸಾಹಿತಿ ಜೆ. ಕಲೀಂ ಭಾಷ, ಪ್ರೊ| ಸಿ.ವಿ.ಪಾಟೀಲ್, ಎಚ್. ನಿಜಗುಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಪ್ಪ, ಸದಾನಂದ ಕುಂಬಳೂರು, ಕೊಟ್ರಪ್ಪ, ಅಜೀಜ್ ರೆಹಮಾನ್, ಹುಲಿಕಟ್ಟೆ ಚನ್ನಬಸಪ್ಪ, ಭೂಮೇಶ್, ಎಂ.ವಿ. ಹೊರಕೇರಿ, ಪಿ.ಎಂ. ಇಂದೂಧರ ಸ್ವಾಮಿ, ಡಿ.ಟಿ. ತಿಪ್ಪಣ್ಣ ರಾಜು, ಪರಶುರಾಮ್ ಅಂಬೇಕರ್, ಸುಬ್ರಹ್ಮಣ್ಯ ನಾಡಿಗೇರ್, ನಾಗರತ್ನಮ್ಮ, ಶಾಂತಾ ಹುಲ್ಯಾಳಮಠ, ಸುಜಾತಾ ಗೋಪಿನಾಥ್, ಗಂಗಮ್ಮ ಸುರೇಶಪ್ಪ, ರಿಯಾಜ್ ಅಹ್ಮದ್, ಬಿ.ಬಿ. ರೇವಣ ನಾಯ್ಕ, ಡಿ.ಎಂ. ಮಂಜುನಾಥಯ್ಯ ಮತ್ತಿತರರು ಇದ್ದರು.
ಓದಿ: 31ನೇ ಜಿಲ್ಲೆಯಾಗಿ ವಿಜಯನಗರ: ಅಧಿಕೃತ ಘೋಷಣೆ ಮಾಡಿದ ರಾಜ್ಯ ಸರ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.