ಜಿಎಸ್‌ಎಸ್ ಜಾತಿ-ಧರ್ಮ ಮೀರಿದ ರಾಷ್ಟ್ರ ಕವಿ
ಬಸವಾಪಟ್ಟಣದಲ್ಲಿ ನಡೆದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನುಡಿ ನಮನ ಕಾರ್ಯಕ್ರಮವನ್ನು ಹಿರಿಯ ಪರ್ತಕರ್ತ ಎನ್.ವಿ. ರಮೇಶ್ ಉದ್ಘಾಟಿಸಿದರು.
Team Udayavani, Feb 15, 2021, 4:03 PM IST
ಚನ್ನಗಿರಿ: ರಾಷ್ಟ್ರಕವಿ ಡಾ| ಜಿ.ಎಸ್. ಶಿವರುದ್ರಪ್ಪ ಅವರು ಯಾವುದೇ ಜಾತಿ, ಧರ್ಮ, ಸಮುದಾಯ ಅನುಸರಿಸದೇ ಮಾನವ ಧರ್ಮ
ಅನುಸರಿಸಿದ್ದರಿಂದ ಹೆಚ್ಚಿನ ಜನಪ್ರಿಯತೆ ಗಳಿಸಲು ಸಾಧ್ಯವಾಯಿತು ಎಂದು ಹಿರಿಯ ಸಾಹಿತಿ ಎಂ.ಬಿ. ನಾಗರಾಜ್ ಕಾಕನೂರು ಹೇಳಿದರು.
ತಾಲೂಕಿನ ಬಸವಾಪಟ್ಟಣ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ
ಹಮ್ಮಿಕೊಂಡಿದ್ದ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ| ಜಿ.ಎಸ್. ಶಿವರುದ್ರಪ್ಪ ಅವರು ನಮ್ಮನ್ನು ಅಗಲಿದ್ದರೂ ಅಪಾರ ಸಾಹಿತ್ಯ ಸಂಪತ್ತನ್ನು ಬಿಟ್ಟು ಹೋಗಿದ್ದಾರೆ. ಜಿಎಸ್‌ಎಸ್ ಅಪರೂಪದ ವ್ಯಕ್ತಿ
ಅಷ್ಟೇ ಅಲ್ಲ. ಕವಿ, ವಿಮರ್ಶಕರಾಗಿ ಕಾವ್ಯ ಮತ್ತು ವಿಮಶಾ ಕ್ಷೇತ್ರಕ್ಕೆ ಶಾಶ್ವತ ಕೊಡುಗೆ ನೀಡಿದ ಮಹಾನುಭಾವ ಎಂದು ಬಣ್ಣಿಸಿದರು.
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಆಯ್ಕೆಯಾಗಿ ಅಲ್ಲಿ ಉತ್ತಮ ರೀತಿಯ ವಾತಾವರಣ ಸೃಷ್ಟಿ ಮಾಡಿದರು. ಇದರಿಂದ ಅವರು ಎಲ್ಲರ
ಮನೆಮಾತಾಗುವುದರ ಮೂಲಕ ಉತ್ತಮ ಕವಿ ಎಂಬುದಾಗಿ ನಾಮಾಂಕಿತರಾದರು. ಅವರ ಕವಿತೆಯಲ್ಲಿ ವಿಸ್ಮಯ ಮತ್ತು ಆಶ್ಚರ್ಯಗಳು
ಒಳಗೊಂಡಿದ್ದವು. ಶಿವರುದ್ರಪ್ಪ ಜಾತಿ, ಮತ ಮೀರಿ ಬೆಳೆದವರು. ಅವರು ಯಾವುದೇ ಒಂದು ಕಟ್ಟುಪಾಡಿಗೆ ಒಳಗಾಗಿರಲಿಲ್ಲ. ಸಮಾಜದ
ಮೇಲೆ ಅವರು ಇಟ್ಟಿದ್ದ ಕಾಳಜಿ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.
“ಪ್ರಸ್ತುತ ಎಲ್ಲೆಡೆ ಅಂಧಕಾರ, ಮೂಢನಂಬಿಕೆ ಹೆಚ್ಚಾಗುತ್ತಿದೆ. ಅನೇಕರು ತಮ್ಮ ಪ್ರಭಾವ ಬೀರುವ ಮೂಲಕ ಜನಸಾಮಾನ್ಯರನ್ನು ಅಂಧಕಾರದಲ್ಲಿ ಮುಳುಗಿಸಿದ್ದಾರೆ. ಶಿಕ್ಷಕರಾಗಿರಲಿ, ಪೋಷಕರಾಗಿರಲಿ ಹಾಗೂ ಸ್ನೇಹಿತರಾಗಿರಲಿ ಯಾರೇ ಏನೇ ಹೇಳಿದರೂ ಅದರ ಬಗ್ಗೆ ಪ್ರಶ್ನೆ
ಮಾಡದೇ ಒಪ್ಪಿಕೊಳ್ಳಬೇಡಿ. ಸುಮ್ಮನೆ ಹೇಳಿದ್ದನ್ನು ಒಪ್ಪಿಕೊಳ್ಳುವವರು ಅಜ್ಞಾನಿಗಳು. ಹೇಳಿದ್ದನ್ನು ಪ್ರಶ್ನೆ ಮಾಡುವವರು ಜ್ಞಾನಿಗಳು’ ಎಂದು
ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಿರಿಯ ಪರ್ತಕರ್ತ ಎನ್.ವಿ. ರಮೇಶ್ ಮಾತನಾಡಿ, ಜ್ಞಾನ ಸಂಪಾದನೆ ಮಾಡುವಾಗ ನೈಜವಾದ ಮನಸ್ಸು ಅಗತ್ಯವಾಗಿದ್ದು, ಯಾವುದೇ
ರೀತಿಯ ಆಡಂಬರದ ಅಗತ್ಯವಿಲ್ಲ. ಶಿಕ್ಷಣ ಬರೀ ಬದುಕನ್ನು ನಡೆಸುವಂತಿರದೇ ಅದು ಜನರ ಹೃದಯ ತೆರದಿಡುವಂತಿರಬೇಕಿದೆ. ಮಾನವ ಸರಿ,
ತಪ್ಪುಗಳನ್ನು ಅರಿತು ಜೀವನ ಸಾಗಿಸಬೇಕು. ಧರ್ಮ, ಪ್ರಾಮಾಣಿಕತೆ ಮತ್ತು ರಾಜಕೀಯದಲ್ಲಿ ತೆಗೆದುಕೊಳ್ಳುವ ತೀರ್ಮಾನ ತೂಕವಾಗಿದ್ದಾಗ ಮಾತ್ರ ಉತ್ತಮ ಫಲಿತಾಂಶ ಲಭ್ಯವಾಗಲು ಸಾಧ್ಯ ಎಂದರು.
ಪ್ರಾಂಶುಪಾಲ ಪ್ರೊ| ಯೋಗೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕ ಎಲ್. ಜೆ. ಮದುಕುಮಾರ್, ಕಾರ್ಯದರ್ಶಿ ಎಂ.ಸಿ.
ಮಲ್ಲಿಕಾರ್ಜುನ ಗೌಡ, ಪ್ರಾಧ್ಯಾಪಕರು ಮಲ್ಲಯ್ಯ, ಎಜಾಜ್ ಅಹ್ಮದ್, ಸಂಗಮೇಶ್, ಕುಸುಮ, ಡಾ| ಬಿ.ಎನ್. ರಂಗಪ್ಪ, ರವಿ ಕುಮಾರ್ ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದರು.
ಓದಿ : ಬೀದರ್ ವಾಯು ಸೇನಾ ಕೇಂದ್ರಕ್ಕೆ ಐಎಎಫ್ ಮುಖ್ಯಸ್ಥ ಆರ್.ಡಿ ಮಾಥುರ ಭೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.