ಬಸವರಾಜ ಐರಣಿಗೆ ರಂಗ ಗೌರವ
ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ ಐರಣಿಯವರಿಗೆ ರಂಗ ಗೌರವ ನೀಡಲಾಯಿತು.
Team Udayavani, Feb 18, 2021, 3:52 PM IST
ದಾವಣಗೆರೆ: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ರಂಗ ಕಲಾವಿದ, ಪತ್ರಕರ್ತ ಬಸವರಾಜ ಐರಣಿ ಅವರಿಗೆ ಶ್ರೀ ಪುಟ್ಟರಾಜ ಗವಾಯಿ ಕಲಾ ನಾಟಕ ಸಂಘದ ಕಲಾವಿದರಿಂದ ರಂಗ ಗೌರವ ಸಲ್ಲಿಸಲಾಯಿತು. ಕಲಾ ಸಂಘದ ಅಧ್ಯಕ್ಷ ಪಿ. ಮಲ್ಲಿಕಾರ್ಜುನ ಐರಣಿ
ಮಾತನಾಡಿ, ಐದು ದಶಕಗಳಿಂದ ರಂಗಭೂಮಿಯಲ್ಲಿ ಕ್ರಿಯಾಶೀಲ ನಟ, ಸಂಘಟಕ, ಹೋರಾಟಗಾರ, ಲೇಖಕರಾಗಿ ಕಾರ್ಯನಿರ್ವಹಿಸುತ್ತ ಕಲಾವಿದರ ಒಡನಾಡಿಯಾಗಿ, ಅವಿರತ ಸೇವೆ ಸಲ್ಲಿಸುತ್ತಾ ಬಂದಿರುವ ಬಸವರಾಜ ಐರಣಿ ಅವರಿಗೆ ಅಕಾಡಮಿ ಪ್ರಶಸ್ತಿ ಲಭಿಸಿರುವುದು ದಾವಣಗೆರೆ ನಗರಕ್ಕೆ ಕೀರ್ತಿ ತಂದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಭಿನಂದನೆ ಸ್ವೀಕರಿಸಿದ ಬಸವರಾಜ ಐರಣಿ ಮಾತನಾಡಿ, ಸಹೃದಯಿಗಳ ಹಾರೈಕೆ, ಸಹಕಾರ, ಸದಾಶಯಗಳಿಂದ ಕಲಾರಂಗದಲ್ಲಿ ಒಂದಿಷ್ಟು ಸೇವೆ ಮಾಡುವ ಅವಕಾಶ ದೊರೆಯಿತು. ಅಭಿಮಾನಕ್ಕೆ ಸದಾ ಕೃತಜ್ಞನಾಗಿರುವುದಾಗಿ ತಿಳಿಸಿದರು. ಸಂಘದ ಕಾರ್ಯದರ್ಶಿ ನಾಗರಾಜ ಮುತ್ತಿಗಿ, ಕಲಾವಿದರಾದ ಎಸ್.ಎಲ್. ಚಂದ್ರಶೇಖರಯ್ಯ, ಶಿವಳ್ಳಿ ಮೈಲಪ್ಪ, ಎಚ್.ಎಂ.ಮಲ್ಲಿಕಾರ್ಜುನಯ್ಯ, ಕೆ.ಚಂದ್ರಶೇಖರ್, ಎಚ್.ಕರಿಯಪ್ಪ, ಕೆ. ಸರೋಜಮ್ಮ, ಉಮಾದೇವಿ, ಶ್ರುತಿ ಮೈಲಪ್ಪ, ಸಿ.ನೇತ್ರಾ, ರೇಣುಕಾ ಇತರರು ಇದ್ದರು.
ಓದಿ : ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.