ಹರ್ಡೇಕರ್ ಮಂಜಪ್ಪ ಶ್ರೇಷ್ಠ ಸುಧಾರಕರು
ವಿರಕ್ತ ಮಠದಲ್ಲಿ ಹರ್ಡೇಕರ್ ಮಂಜಪ್ಪನವರ ಜಯಂತಿ ಆಚರಿಸಲಾಯಿತು.
Team Udayavani, Feb 19, 2021, 3:14 PM IST
ದಾವಣಗೆರೆ: ಕರ್ನಾಟಕದ ಗಾಂಧಿ ಎಂದೇ ಕರೆಯಲ್ಪಡುವ ಹರ್ಡೇಕರ್ ಮಂಜಪ್ಪನವರು ಒಬ್ಬ ವಿಭೂತಿ ಪುರುಷರು. ಕನ್ನಡನಾಡಿನ ಶ್ರೇಷ್ಠ
ಸುಧಾರಕರು ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಬಣ್ಣಿಸಿದರು.
ಗುರುವಾರ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ಹರ್ಡೇಕರ್ ಮಂಜಪ್ಪನವರ 135ನೇ ಜಯಂತಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹರ್ಡೇಕರ್ ಮಂಜಪ್ಪನವರ ಜೀವನ ಮತ್ತು ಶ್ರೇಷ್ಠ ಬರಹಗಳು ನಾಡಿನ ಪ್ರಗತಿಗೆ ದಾರಿದೀಪವಾಗಿವೆ. ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರಂತೆ ಹರ್ಡೇಕರ್ ಮಂಜಪ್ಪನವರು ತಮ್ಮ ವೈಯಕ್ತಿಕ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡಿದ್ದರು. ಚರಕದಿಂದ ನೂಲು ತೆಗೆಯುವುದನ್ನ ತಮ್ಮ ನಿತ್ಯ ಕಾಯಕ ಮಾಡಿಕೊಂಡಿದ್ದ ಅವರು “ಖಾದಿಯ ವಿಜ್ಞಾನ’ ಎಂಬ ಗ್ರಂಥ ರಚಿಸಿದ್ದಾರೆ. ಆದ್ದರಿಂದಲೇ ಜನರು ಅವರನ್ನು “ಕರ್ನಾಟಕದ ಗಾಂಧಿ’ ಎಂದು ಕರೆದರು. ಮಂಜಪ್ಪನವರಿಗೆ ಬಸವ ತತ್ವವೇ ಉಸಿರಾಗಿತ್ತು ಎಂದರು.
1913 ರಲ್ಲಿ ದಾವಣಗೆರೆಯ ವಿರಕ್ತ ಮಠದಲ್ಲಿ ಮೃತ್ಯುಂಜಯ ಅಪ್ಪ ಅವರೊಡಗೂಡಿ ಪ್ರಪ್ರಥಮ ಬಾರಿಗೆ ಸಾರ್ವತ್ರಿಕ ಬಸವ ಜಯಂತಿ
ಆಚರಿಸಿದರು. ಈ ಮೂಲಕ ಇಡೀ ವಿಶ್ವಕ್ಕೆ ಬಸವಣ್ಣನವರನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಯುವಕರನ್ನು ಸ್ವಾತಂತ್ರ
ಚಳವಳಿಯಲ್ಲಿ ಭಾಗವಹಿಸಲು ಸದಾ ಪ್ರೇರಣೆ ನೀಡುತ್ತಿದ್ದರು. ಯುವಕರು ಸದಾ ಪವಿತ್ರರು, ಧೀರರು ಆಗಿರಬೇಕು ಎಂದು ಕರೆ ನೀಡಿದ್ದ
ಅವರು ಒಬ್ಬ ಮಹಾತ್ಮರು ಎಂದು ಸ್ಮರಿಸಿದರು. ಎಂ. ಜಯಕುಮಾರ್, ಕಣಕುಪ್ಪಿ ಮುರುಗೇಶಪ್ಪ, ಹಾಸಭಾವಿ ಕರಿಬಸಪ್ಪ, ಲುಂಬಿ
ಮುರುಗೇಶ್, ನಿಜಗುಣ, ಶಿವಯೋಗಿ, ಕುಂಟೋಜಿ ಚನ್ನಪ್ಪ, ರೋಷನ್ ಇತರರು ಇದ್ದರು.
ಓದಿ : ತುಳು ಚಿತ್ರರಂಗ ಉಳಿಯಬೇಕಾದರೆ ಥಿಯೇಟರ್ ಸಮಸ್ಯೆ ಬಗೆಹರಿಯಬೇಕು: ದೇವದಾಸ್ ಕಾಪಿಕಾಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.