ಕಸಬಾ ಪತ್ತಿನ ಸಹಕಾರ ಸಂಘ ವಿಂಗಡಣೆ ಖಚಿತ
ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ನಡೆದ ವಿಶೇಷ ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು.
Team Udayavani, Feb 25, 2021, 3:28 PM IST
ಹೊನ್ನಾಳಿ: ಹೊನ್ನಾಳಿ ಕಸಬಾ ಪತ್ತಿನ ಸಹಕಾರ ಸಂಘ ಮೂರು ವಿಭಾಗಗಳಾಗಿ ವಿಂಗಡಣೆಯಾಗುವುದು ಖಚಿತ. ಇದರಿಂದ ಸಂಘದ ಷೇರುದಾರರಿಗೆ ಅನುಕೂಲವಾಗಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂರು ವಿಭಾಗಗಳಾಗಿ ವಿಂಗಡಣೆ
ಮಾಡಲು ಸದಸ್ಯರೊಂದಿಗೆ ಚರ್ಚಿಸಿ ತಿರ್ಮಾನ ಕೈಗೊಳ್ಳುವ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೊನ್ನಾಳಿ ಕಸಬಾ 21 ಹಳ್ಳಿಗಳನ್ನೊಳಗೊಂಡ ತಾಲೂಕಿಗೆ ಅತಿದೊಡ್ಡ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವಾಗಿದ್ದು, ತನ್ನದೇಯಾದ ಇತಿಹಾಸ ಹೊಂದಿದೆ. ಇದರಿಂದ ಹೆಚ್ಚಿನ ರೈತರಿಗೆ ಸಾಲ ಸೌಲಭ್ಯಗಳನ್ನು ಒದಗಿಸಲು ಆಗದೇ ಇರುವ ಹಿನ್ನಲೆಯಲ್ಲಿ ಷೇರುದಾರರಿಗೆ ಅನುಗುಣವಾಗಿ ಹೊನ್ನಾಳಿ ಕಸಬಾ, ದೇವನಾಯಕನಹಳ್ಳಿ ಹಾಗೂ ಎಚ್.ಗೋಪಗೋಂಡನಹಳ್ಳಿ ಎಂದು ವಿಂಗಡಿಸಲು
ಹಿಂದಿನ ಆಡಳಿತ ಮಂಡಳಿಯವರು ತಮ್ಮ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸಂಘದ ಸದಸ್ಯ ಮನವಿ ಮೇರೆಗೆ ಸಂಬಂಧಪಟ್ಟ ಮೇಲಾ
ಧಿಕಾರಿಗಳಿಗೆ ಕೂಡಲೇ ಸಂಘವನ್ನು ವಿಂಗಡಣೆ ಮಾಡಬೇಕೆಂದು ಆದೇಶ ಮಾಡಲಾಗಿದೆ ಎಂದರು.
ತಾಂತ್ರಿಕ ತೊಂದರೆಯಿಂದ ತೊಡಕಾಗುತ್ತದೆ ಎಂದು ಸಬೂಬು ಹೇಳುತ್ತಿದ್ದರು. ಯಾವುದೇ ಸಬೂಬು ಹೇಳದೆ ಫೆ. 23 ರಂದು ವಿಶೇಷ
ವಾರ್ಷಿಕ ಸಭೆ ಕರೆದು ಸದಸ್ಯರ ಅನುಮತಿ ಮೇರೆಗೆ ಮಹಾಸಭೆಯಲ್ಲಿ ತಿರ್ಮಾನದಂತೆ ಯಾವುದೆ ನೆಪ ಹೇಳದೆ ಮೂರು ವಿಭಾಗವಾಗಿ ಮಾಡಬೇಕು. ಆ ಸಭೆಗೆ ನಾನು ಸಹ ಹಾಜರಿರುತ್ತೆನೆ ಎಂದು ಎಚ್ಚರಿಕೆ ನೀಡಿದ್ದರಿಂದ ಈ ಸಭೆಯ ನಿರ್ಣಯದಂತೆ ಮೂರು ವಿಭಾಗಗಳಾಗಿ ವಿಂಗಡಣೆಯಾಗುವುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಸಹಕಾರ ಸಂಘದ ಪ್ರಬಂಧಕ ದಕ್ಷಿಣಮುರ್ತಿ, ಸಹಕಾರ ಸಂಘದ ನಿಬಂಧಕ ಜಗದೀಶ್, ಹೊನ್ನಾಳಿ ಡಿಸಿಸಿ ಬ್ಯಾಂಕ್ ಕ್ಷೇತ್ರ ಅಧಿಕಾರಿ ಲೋಕೇಶಪ್ಪ, ಹೊನ್ನಾಳಿ ಕಸಬಾ ಮುಖ್ಯ ಕಾರ್ಯನಿರ್ವಣಾ ಧಿಕಾರಿ ಜಿ.ಎಂ .ಚೇತನ, ಸಿಬ್ಬಂದಿಗಳಾದ ರವಿ ನಾಯ್ಕ, ಸುರೇಶ್, ಎಂ. ಪ್ರವೀಣ್ ಇದ್ದರು.
ಓದಿ : ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣ, ಒಟಿಟಿ ಗಳಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.