ಸ್ವಾತಂತ್ರ್ಯ ಹೋರಾಟಗಾಗರರ ಕೊಡುಗೆ ಅಪಾರ


Team Udayavani, Apr 3, 2021, 5:18 PM IST

3-12

ದಾವಣಗೆರೆ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ದಾವಣಗೆರೆ ನಗರದ ಕೊಡುಗೆ ತುಂಬಾ ಮಹತ್ತರವಾದುದು ಎಂದು ವ್ಯಂಗ್ಯ ಚಿತ್ರಕಾರ, ಪತ್ರಕರ್ತ ಎಚ್‌.ಬಿ. ಮಂಜುನಾಥ ತಿಳಿಸಿದರು.

ಶುಕ್ರವಾರ ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟಕ್ಕೆ ಸಾರ್ವಜನಿಕರನ್ನು ಸೇರಿಸಲು ಗಣೇಶೋತ್ಸವ ಆಯೋಜಿಸಿದ್ದ ಮಾದರಿಯಲ್ಲಿ ದಾವಣಗೆರೆಯ ಹೋರಾಟಗಾರರು ಬಸವ ಜಯಂತಿ ಆಚರಿಸುವ ಮೂಲಕ ಸ್ವಾತಂತ್ರ್ಯ ಪ್ರೇಮಿಗಳನ್ನು ಒಗ್ಗೂಡಿಸಲು ಶ್ರಮಿಸಿದ್ದು, ಇತಿಹಾಸದಲ್ಲಿ ದಾಖಲಾಗಿದೆ ಎಂದು ತಿಳಿಸಿದರು.

ಕರ್ನಾಟಕದ ಗಾಂಧಿ ಎಂದೇ ಕರೆಯಲ್ಪಡುವ ಹಡೇìಕರ್‌ ಮಂಜಪ್ಪ ಅವರ ನೇತೃತ್ವದದಲ್ಲಿ ದೊಡ್ಡಪೇಟೆಯಲ್ಲಿ ಉದ್ಘಾಟನೆಗೊಂಡ ಬಸವ ಜಯಂತಿ ನಗರದಲ್ಲಿ ಸ್ವಾತಂತ್ರ್ಯ ಚಳವಳಿಗೆ ಭದ್ರ ಬುನಾದಿ ಹಾಕಿತ್ತು. ಸಾರ್ವಜನಿಕರನ್ನು ಒಗ್ಗೂಡಿಸಲು ವಿರಕ್ತ ಮಠದಲ್ಲಿ ನಡೆದ ಕಾರ್ಯಕ್ರಮಗಳು ಸಹಕಾರಿಯಾದವು ಎಂದು ತಿಳಿಸಿದರು.

1932ರಲ್ಲಿ ಆರಂಭವಾದ ಕಾನೂನು ಭಂಗ ಚಳವಳಿಯ ಸ್ವದೇಶಿ ಚಳವಳಿ ಜವಳಿ ಅಂಗಡಿಗಳಲಿದ್ದ ವಿದೇಶಿ ಬಟ್ಟೆಗಳನ್ನು ಸುಡುವ ಮೂಲಕ ವಸ್ತ್ರದಹನ ಚಳವಳಿಗೆ ಪ್ರೇರಕವಾಯ್ತು. ಮಂದಗಾಮಿಗಳು ಮತ್ತು ಪುರೋಗಾಮಿಗಳು ಆರಂಭಿಸಿದ ಪ್ರಭಾತ್‌ ಪೇರಿ ನಗರದ ಬೆಳ್ಳೊಡಿ ಗಲ್ಲಿಯಿಂದ ಪ್ರಾರಂಭವಾಗಿ ಕಾಸಲ್‌ ಶ್ರೀನಿವಾಸ ಶೆಟ್ಟಿ ಭವನದ ಆವರಣದಲ್ಲಿ ಕೊನೆಗೊಳ್ಳುತ್ತಿತ್ತು ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿಯವರು ದಾವಣಗೆರೆಗೂ ಭೇಟಿ ನೀಡಬೇಕು ಎಂಬುದು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಕಾಸಲ್‌ ಶ್ರೀನಿವಾಸ್‌ ಶೆಟ್ಟಿ ಅವರ ಬಹು ದೊಡ್ಡ ಆಶಯವಾಗಿದ್ದು, ಗಾಂ  ಧೀಜಿಯವರಿಗೆ ದಾವಣಗೆರೆಗೆ ಬರಬೇಕು ಎಂದು ಪತ್ರ ಬರೆದರಂತೆ. ಆಗ ಗಾಂ ಧೀಜಿ ಮೂರು ಪ್ರಶ್ನೆಗಳನ್ನು ಕೇಳಿದರಂತೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಿರಾ, ಸ್ವತಃ ಖಾದಿ ಬಟ್ಟೆಯನ್ನು ತೊಡುತ್ತಿದ್ದಿರಾ, ಹರಿಜನರನ್ನು ನಿಮ್ಮ ಮನೆಗೆ ಪ್ರವೇಶಿಸಲು ಅವಕಾಶ ಕಲ್ಪಿಸಿದ್ದಿರಾ ಎಂದು ಕೇಳಿದ ಪ್ರಶ್ನೆಗೆ ಸಮಂಜಸವಾಗಿ ಉತ್ತರಿಸಿದ ಶ್ರೀನಿವಾಸ್‌ ಶೆಟ್ಟಿ ಅವರಿಗೆ ಗಾಂಧೀಜಿಯವರು ಮತ್ತೆ ಮೂರು ಷರತ್ತುಗಳನ್ನು ಬರೆದು ಇದಕ್ಕೆ ಒಪ್ಪುವುದಾದರೆ ದಾವಣಗೆರೆಗೆ ಬರುತ್ತೇನೆ ಎಂದು ಮರುಪತ್ರ ಬರೆದರಂತೆ. ಗಾಂಧೀಜಿಯವರು ಕಾಸಲ್‌ ಶ್ರೀನಿವಾಸ ಶೆಟ್ಟಿ ಅವರಿಗೆ ನಾನು ದಾವಣಗೆರೆಯ ಯಾವ ಭಾಗದಲ್ಲಿ ಬಂದು ನಿಲ್ಲುತ್ತೇನೋ ಅಥವಾ ಅದರ ಹತ್ತಿರದ ಜಾಗದಲ್ಲಿ ಹರಿಜನರಿಗೆ ಶಿಕ್ಷಣಕ್ಕೆ ಅನೂಕುಲವಾಗುವ ಒಂದು ಶಾಶ್ವತ ಕೆಲಸ ಆಗಬೇಕು. ಹರಿಜನರು ವಾಸ ಮಾಡುವ ಜಾಗಕ್ಕೆ ಕರೆದುಕೊಂಡು ಹೋಗಬೇಕು. ದಾವಣಗೆರೆಗೆ ಬಂದು ಹೋಗುವವರೆಗೂ ನನ್ನೊಂದಿಗೆ ಇರಲು ಮೂವರು ಹರಿಜನ ಸ್ವಯಂಸೇವಕರು ಆಗಬೇಕು ಎಂದು ಸೂಚಿಸಿದರು.

ಈ ಷರತ್ತುಗಳನ್ನು ಈಡೇರಿಸುತ್ತೇವೆ ಎಂದು ತಿಳಿಸಿದ್ದು, 1934 ಮಾ.2 ರಂದು ಗಾಂಧೀಜಿ ದಾವಣಗೆರೆಗೆ ಭೇಟಿ ನೀಡಿದರು. ಅವರ ಷರತ್ತಿನಂತೆ ಹರಿಜನ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆಯನ್ನು ಗಾಂಧೀಜಿ ಯವರಿಂದ ನೆರವೇರಿಸಿದ್ದು ಐತಿಹಾಸಿಕ ಎಂದು ತಿಳಿಸಿದರು.

ಭಾರತದ ಇತಿಹಾಸದಲ್ಲಿ ಗಾಂ ಧಿಯವರು ಶಂಕುಸ್ಥಾಪನೆ ನೆರವೇರಿಸಿರುವುದು 2 ಕಾರ್ಯಕ್ರಮಗಳಲ್ಲಿ ಮಾತ್ರ. ಅದರಲ್ಲಿ ದಾವಣಗೆರೆಯೂ ಒಂದೆಂಬುದು ಹೆಗ್ಗಳಿಕೆ. ನಂತರ ಚನ್ನಗಿರಿ ರಂಗಪ್ಪನವರು ಗಾಂ ಧೀಜಿಯವರನ್ನು ಹರಿಜನ ಕಾಲೋನಿ ಈಗಿನ ಗಾಂಧಿ ನಗರಕ್ಕೆ ಕರೆದುಕೊಂಡು ಹೋಗಿದ್ದರು ಎಂದು ತಿಳಿಸಿದರು.

1942ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ಆರಂಭವಾದಾಗ ಇಲ್ಲಿನ ಹೋರಾಟಗಾರರು ತಾಲೂಕು ಆಫಿಸಿನ ಖಜಾನೆ ಲೂಟಿಗೆ ಹುನ್ನಾರ ಮಾಡಿದಾಗ ಗೌಪ್ಯ ಸ್ಥಳಗಳಲ್ಲಿದ್ದ ಬ್ರಿಟಿಷ್‌ ಪೊಲೀಸರು ಅವರ ಮೇಲೆ ಗೋಲಿಬಾರ್‌ ನಡೆಸಿದರು. ಆ ಸಂದರ್ಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರು ಗೋಲಿಬಾರ್‌ನಲ್ಲಿ ಮಡಿದು ತೀವ್ರ ಗಾಯಗೊಂಡ ಮೂರು ಹೋರಾಟಗಾರರು ಮುಂದಿನ ದಿನಗಳಲ್ಲಿ ಅಸುನೀಗಿದರು. ಇಂತಹ ಹಲವಾರು ಹೋರಾಟಗಳಿಗೆ ದಾವಣಗೆರೆ ಸಾಕ್ಷಿ ಆಗಿದೆ ಎಂದರು.

ದಾವಣಗೆರೆ ಪುರಸಭಾ ಭವನದ ಹಿಂಭಾಗದಲ್ಲಿ ಆಗ ಸ್ಟೇಷನ್‌ ಕೋರ್ಟ್‌ನಲ್ಲಿ ಅರಣ್ಯ ಸತ್ಯಾಗ್ರಹಿಗಳ ವಿಚಾರಣೆ ನಡೆಸಿದಾಗ ಸತ್ಯಾಗ್ರಹಿಗಳ ಹೇಳಿಕೆಗಳು ದಂಡಾ ಧಿಕಾರಿಗಳಿಗೆ ಅಚ್ಚರಿ ತಂದವು. ವಯಸ್ಸು ಕೇಳಿ ಪ್ರಶ್ನಿಸಿದರೆ ಸ್ವಾತಂತ್ರ್ಯ ಪ್ರಜ್ಞೆ ಬಂದಿದ್ದರಿಂದ ಲೆಕ್ಕಾ ಹಾಕಿ ವಯಸ್ಸು ಹೇಳುತ್ತಿದ್ದರು. ಕೆಲಸ ಏನೆಂದು ಪ್ರಶ್ನಿಸಿದರೆ ದೇಶ ಸೇವೆ ಎಂಬ ಉತ್ತರ ನೀಡುತ್ತಿದ್ದರು. ಇದಕ್ಕೆ ಸಿಟ್ಟಿಗೆದ್ದ ದಂಡಾಧಿ ಕಾರಿ ಅವರಿಗೆ ಆಗಿನ ಕಾಲದಲ್ಲೆ 500 ದಂಡ ತೆರದಿದ್ದರೆ 48 ತಿಂಗಳು ಕಾಲ ಕಠಿಣ ಶಿಕ್ಷೆ ಅನುಭವಿಸಬೇಕು ಎಂದು ಸೂಚಿಸಿದ್ದರು. ಶಿಕ್ಷೆಗೆ ಒಳಗಾದ ರಾಜಕೀಯ ಬಂ ಧಿಗಳನ್ನು ಛಡಿ ಏಟಿನಿಂದ ಶಿಕ್ಷಿಸುತ್ತಿದ್ದರು ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಮಾತನಾಡಿ, ಇತ್ತೀಚಿನ ಮಕ್ಕಳಲ್ಲಿ ಸ್ವಾತಂತ್ರ್ಯ ದ ಬಗೆಗಿನ ಹುರುಪು, ಹುಮ್ಮಸ್ಸು ಕಡಿಮೆಯಾಗುತ್ತಿದೆ. ಸ್ವಾತಂತ್ರ್ಯ ಹೇಗೆ ಬಂತು ಎಂದು ತಿಳಿದುಕೊಳ್ಳುವ ವ್ಯವಧಾನವಿಲ್ಲ. ಕೇವಲ ಪರೀಕ್ಷೆಗಳಲ್ಲಿ ಅಂಕ ಪಡೆಯಲು ಮಾತ್ರ ಓದುತ್ತಿದ್ದಾರೆ ವಿನಃ ಆದರೆ ಅದರಲ್ಲಿರುವ ಸ್ವಾತಂತ್ರ್ಯ ದ ಕುರಿತಾದ ಜ್ವಾಲೆಯನ್ನು ಅರಿತುಕೊಳ್ಳುವಲ್ಲಿ ಅಸಡ್ಡೆತನ ತೋರುತ್ತಿದ್ದಾರೆ. ದೇಶ ಪ್ರೇಮದ ಕಿಚ್ಚು ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಇಒ ವಿಜಯ ಮಹಾಂತೇಶ ದಾನಮ್ಮನವರ, ಇಂದಿನ ಯುವಪೀಳಿಗೆ ಆಧುನಿಕತೆ ಹಾಗೂ ಪಾಶ್ಚಿಮಾತ್ಯಕ್ಕೆ ಮಾರು ಹೋಗಿದ್ದಾರೆ. ಅವರ ಭಾವನೆಯಲ್ಲಿ ನಾವು ದೇಶಾಭಿಮಾನ ಬಿತ್ತುವ ಕೆಲಸವಾಗಬೇಕು ಎಂದು ಆಶಿಸಿದರು.

ಮಹಾಪೌರ ಎಸ್‌.ಟಿ.ವೀರೇಶ್‌ ಅನಿಸಿಕೆ ಹಂಚಿಕೊಂಡರು. ಹಾಗೂ ಕಲಾವಿದರಾದ ಐರಣಿ ಚಂದ್ರು, ಹೆಗ್ಗೆರೆ ರಂಗಪ್ಪ, ಕೆ.ಪರಶುರಾಮ ಹೊನ್ನಾಳಿ, ಕೊಂಡಯ್ಯ ನ್ಯಾಮತಿ, ಚಂದ್ರಪ್ಪ, ವಂಶತ್‌ ಹರಿಹರ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿ ಕಾರಿ ಮಹಾಂತೇಶ್‌ ಬೀಳಗಿ ನೇತೃತ್ವದಲ್ಲಿ ಸೈಕಲ್‌ ಜಾಥಾ ನಡೆಯಿತು.

ಟಾಪ್ ನ್ಯೂಸ್

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

7-dvg

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

byndoor

Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.