![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 5, 2021, 9:31 PM IST
ದಾವಣಗೆರೆ: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೊರೊನಾ ಕರ್ಫ್ಯೂ ನಿಮಿತ್ತ ಏಳನೇ ದಿನ ಮಂಗಳವಾರವೂ ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಅವಶ್ಯ ವಸ್ತುಗಳ ಖರೀದಿಗೆ ಇರುವ ನಿಗದಿತ ಅವಧಿ ಬಳಿಕ ಜನ, ವಾಹನ ಸಂಚಾರ ಬಂದ್ ಆಯಿತು. ಸಂತೆ ಬಂದ್ ಮಾಡಿದ್ದರಿಂದ ಜನರು ಹತ್ತಿರದ ಮಾರುಕಟ್ಟೆಗಳಿಗೆ ಹೋಗದೇ ಹತ್ತಿರದ ಅಂಗಡಿ, ಮನೆ ಬಾಗಿಲಿಗೆ ತಳ್ಳುಗಾಡಿಯಲ್ಲಿ ಬಂದ ತರಕಾರಿ ಖರೀದಿಸಿದರು.
ಸಂಚಾರಕ್ಕೆ ವಿನಾಯಿತಿ ಇರುವ ವ್ಯಕ್ತಿ, ವಾಹನಗಳು ಹಾಗೂ ತುರ್ತು ಕೆಲಸಗಳಿಗಾಗಿ ಹೊರ ಬಂದವರು ಹೊರತುಪಡಿಸಿ ಉಳಿದವರೆಲ್ಲ ಮನೆಯಲ್ಲಿಯೇ ಉಳಿದು ಕರ್ಫ್ಯೂಗೆ ಬೆಂಬಲ ಸೂಚಿಸಿದರು.
ಬೆಳಿಗ್ಗೆಯಿಂದ 11:30ವರೆಗೂ ಬಹುತೇಕ ಕಡೆಗಳಲ್ಲಿ ಜನ, ವಾಹನ ಸಂಚಾರ, ವ್ಯಾಪಾರ ವ್ಯವಹಾರ ಸಹಜಸ್ಥಿತಿಯಲ್ಲಿತ್ತು. ಬಳಿಕ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿ, ಅವಶ್ಯ ವಸ್ತು ಖರೀದಿಗೆ ನಿಗದಿಪಡಿಸಿದ ಅವಧಿ ಮುಗಿದ ಬಳಿಕವೂ ಓಡಾಡುವವರಿಗೆ ದಂಡದ ಬಿಸಿ ಮುಟ್ಟಿಸಿದರು. ಅನಗತ್ಯ ವಾಹನ ಸಂಚಾರ ತಡೆಯಲು ಪೊಲೀಸರು ನಗರದ ವಿವಿಧೆಡೆ ಬ್ಯಾರಿಕೇಡ್ ಹಾಕಿದ್ದರು.
ಈ ಬ್ಯಾರಿಕೇಡ್‌ಗಳ ಕಾರಣದಿಂದಾಗಿ ತುರ್ತು ಸೇವೆಗಾಗಿ ರಸ್ತೆ ಗಿಳಿದವರು ಸುತ್ತು ಹಾಕಿ ಬೇರೆ ರಸ್ತೆಗಳ ಮೂಲಕ ಸಂಚರಿಸುವಂತಾಯಿತು. ತುರ್ತು ಅಗತ್ಯ ಸೇವೆಗಳಾದ ಆಸ್ಪತ್ರೆ, ಔಷಧ ಅಂಗಡಿ ಹಾಗೂ ಪೆಟ್ರೊಲ್ ಬಂಕ್‌ಗಳು ಎಂದಿನಂತೆ ತೆರೆದಿದ್ದವು. ಮಹಾನಗರ ವ್ಯಾಪ್ತಿಯಲ್ಲಿ ಸದಾ ಜನದಟ್ಟಣೆಯಿಂದ ಕೂಡಿರುತ್ತಿದ್ದ ಪ್ರದೇಶಗಳೆಲ್ಲವೂ ಜನ, ವಾಹನ ಸಂಚಾರವಿಲ್ಲದೇ ಭಣಗುಟ್ಟಿದವು.
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ
Davanagere: ಪಕ್ಷದಿಂದ ಯತ್ನಾಳ್ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?
Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ
Davanagere: ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್
Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ
You seem to have an Ad Blocker on.
To continue reading, please turn it off or whitelist Udayavani.