ಜಲಶಕ್ತಿ ಅಭಿಯಾನಕ್ಕೂ ಕೊರೊನಾ ಅಡ್ಡಿ
Team Udayavani, Jun 1, 2021, 9:33 PM IST
ಎಚ್.ಕೆ. ನಟರಾಜ
ದಾವಣಗೆರೆ: ಮುಂಗಾರು ಪ್ರಾರಂಭವಾಗುವ ಮುನ್ನ ಮಳೆ ನೀರು ಸಂರಕ್ಷಣೆಗೆ ಅಗತ್ಯವಿರುವ ಜಲಮೂಲಗಳ ಪುನಶ್ಚೇತನಕ್ಕಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕೈಗೊಂಡಿರುವ ಮಹತ್ವಾಕಾಂಕ್ಷಿ ನೂರು ದಿನಗಳ ಜಲಶಕ್ತಿ ಅಭಿಯಾನಕ್ಕೆ ಕೊರೊನಾ ಅಡ್ಡಿಯಾಗಿದೆ. ಹಾಗಾಗಿ ಜಲರಕ್ಷಣೆಯ ಕಾಮಗಾರಿಗಳಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.
ಕೊರೊನಾ ಎರಡನೇ ಅಲೆ ಹಳ್ಳಿಗಳಿಗೂ ವ್ಯಾಪಿಸಿದ ಹಿನ್ನೆಲೆಯಲ್ಲಿ 40ಕ್ಕಿಂತ ಹೆಚ್ಚು ಕೂಲಿ ಕಾರ್ಮಿಕರು ಗುಂಪಾಗಿ ಮಾಡುವ ಸಮುದಾಯ ಆಧಾರಿತ ಜಲ ಸಂರಕ್ಷಣೆಯ ಕಾಮಗಾರಿಗಳು ಈಗ ಅರ್ಧಕ್ಕೆ ನಿಂತಿವೆ. ನರೇಗಾದಡಿ ಪ್ರಸ್ತುತ ಜಲಶಕ್ತಿ ಅಭಿಯಾನದ ಮೂಲಕ ಜಲಸಂರಕ್ಷಣೆಯ ಕಾಮಗಾರಿಗಳೇ ಹೆಚ್ಚಾಗಿ ನಡೆಯುತ್ತಿದ್ದವು. ಜೂನ್ ಆರಂಭದಲ್ಲಿಯೇ ಮಳೆ ಶುರುವಾದರೆ ಈ ವರ್ಷದ ಜಲಶಕ್ತಿ ಅಭಿಯಾನ ಇಷ್ಟಕ್ಕೇ ಮೊಟಕುಗೊಳ್ಳುವ ಸಾಧ್ಯತೆ ಇದೆ.
ಇದರಿಂದಾಗಿ ಸರ್ಕಾರದ ಮಹತ್ವಾಕಾಂಕ್ಷಿ ಜಲಶಕ್ತಿ ಅಭಿಯಾನ ಈ ಬಾರಿ 100 ದಿನ ಪೂರೈಸುವುದು ಕಷ್ಟಸಾಧ್ಯ. ಜಲಶಕ್ತಿ ಅಭಿಯಾನ ಆರಂಭವಾದ ಏ.1ರಿಂದ 30 ದಿನಗಳ ಕಾಲ ರಾಜ್ಯಾದ್ಯಂತ ಲಕ್ಷಾಂತರ ಕೂಲಿ ಕಾರ್ಮಿಕರು ನರೇಗಾದಲ್ಲಿ ಕೆಲಸ ಪಡೆದು ಜಲರಕ್ಷಣೆಯ ವಿವಿಧ ಕಾಮಗಾರಿಗಳಲ್ಲಿ ಚುರುಕಾಗಿ ತೊಡಗಿಸಿಕೊಂಡಿದ್ದರು. ಆದರೆ ಮೇ ಆರಂಭದಿಂದಲೇ ಹಳ್ಳಿಗಳಲ್ಲಿ ಕೊರೊನಾ ಎರಡನೇ ಅಲೆ ಹಾವಳಿ ಹೆಚ್ಚಾಗಿ ಕೂಲಿ ಕಾರ್ಮಿಕರು ಕೆಲಸಕ್ಕೆ ಬಾರದೆ ಹಾಗೂ ಸರ್ಕಾರವೂ ಗುಂಪು ಕೆಲಸಗಳಿಗೆ ತಡೆ ನೀಡಿದ್ದರಿಂದ ಬಹುತೇಕ ಎಲ್ಲ ಕಾಮಗಾರಿಗಳು ಅರ್ಧಕ್ಕೆ ನಿಲ್ಲುವಂತಾಗಿದೆ.
ಗುರಿ ಮುಟ್ಟದ ಅಭಿಯಾನ: ಪ್ರಸ್ತುತ ನರೇಗಾ ಯೋಜನೆಯಡಿ ಜಲಶಕ್ತಿ ಅಭಿಯಾನವೇ ಮುಖ್ಯ ಕಾರ್ಯಕ್ರಮವಾಗಿ ಅನುಷ್ಠಾನವಾಗುತ್ತಿತ್ತು. ನೂರು ದಿನಗಳ ಈ ಅಭಿಯಾನದಲ್ಲಿ ರಾಜ್ಯದಲ್ಲಿ 4528 ಸಮಗ್ರ ಕೆರೆ ಅಭಿವೃದ್ಧಿ, 11,344 ನಾಲಾ ಪುನಶ್ಚೇತನ, 1070 ಕಲ್ಯಾಣಿ ಪುನಶ್ಚೇತನ, 2514 ಗೋ ಕಟ್ಟೆಗಳ ನಿರ್ಮಾಣ, 4624 ಮಳೆ ನೀರು ಕೊಯ್ಲು ರಚನೆಗಳು, 2138 ಮಲ್ಟಿ ಆರ್ಚ್ ಡ್ಯಾಂ, 1,06,345 ಬಚ್ಚಲು ಗುಂಡಿಗಳು, 9892 ಕೊಳವೆಬಾವಿ ಮರುಪೂರಣ, 13,386 ಅರಣೀಕರಣ ಕಾಮಗಾರಿ, 39,386 ಕೃಷಿ ಹೊಂಡ, 94,135 ಬದುನಿರ್ಮಾಣ, 5665 ತೆರೆದ ಬಾವಿಗಳು ಸೇರಿದಂತೆ ಒಟ್ಟು 3,00,080 ಕಾಮಗಾರಿಗಳನ್ನು ಕೈಗೊಳ್ಳಲು ಗುರಿ ಹಾಕಿಕೊಳ್ಳಲಾಗಿತ್ತು.
ಆದರೆ ಕೊರೊನಾ ಕಾರಣದಿಂದಾಗಿ ಈ ಬಾರಿ ಶೇ.50ರಷ್ಟು ಗುರಿ ಸಾಧಿಸುವುದು ಸಹ ಕಠಿಣವಾಗಿದೆ. ಕಳೆದ ವರ್ಷ ಉತ್ತಮ ಸಾಧನೆ: ಕಳೆದ ವರ್ಷವೂ ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಇತ್ತಾದರೂ ಹಳ್ಳಿಗಳಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಬ್ಬಿರಲಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಗರ, ಮಹಾನಗರಗಳಿಂದ ವಲಸೆ ಬಂದವರು ಸೇರಿದಂತೆ ಬಹುದೊಡ್ಡ ಸಂಖ್ಯೆಯಲ್ಲಿ ಜನ ಉದ್ಯೋಗಖಾತ್ರಿ ಯೋಜನೆಯ ಕಾಮಗಾರಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇದರಿಂದ ಕಳೆದ ವರ್ಷ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಜಲಸಂರಕ್ಷಣೆ ಕಾಮಗಾರಿಗಳು ಉತ್ತಮ ರೀತಿಯಲ್ಲಿ ನಡೆದಿದ್ದವು. 2020-21ನೇ ಸಾಲಿನಲ್ಲಿ 36,093 ಕೆರೆ ಅಭಿವೃದ್ಧಿ, 257 ಕಲ್ಯಾಣಿ ಪುನಶ್ಚೇತನ, 1586 ಗೋ ಕಟ್ಟೆ ನಿರ್ಮಾಣ, 716 ಮಳೆ ನೀರು ಕೊಯ್ಲು ರಚನೆಗಳು, 14,757 ಚೆಕ್ ಡ್ಯಾಂ, 2,62,734 ಬಚ್ಚಲುಗುಂಡಿ, 2,026 ಕೊಳವೆಬಾವಿ ಮರುಪೂರಣ, 1,54,228 ಅರಣೀÂಕರಣ ಕಾಮಗಾರಿಗಳು, 76,087 ಕೃಷಿಹೊಂಡ, 1,54,999 ಬದು ನಿರ್ಮಾಣ, 9598 ತೆರೆದಬಾವಿಗಳ ಕಾಮಗಾರಿಗಳನ್ನು ಜಲಸಂರಕ್ಷಣೆಗಾಗಿ ಕೈಗೊಳ್ಳಲಾಗಿತ್ತು. ಆದರೆ ಈ ವರ್ಷ ಕೊರೊನಾ ಸೋಂಕಿನ ಹಾವಳಿಯಿಂದ ಜಲ ಸಂರಕ್ಷಣೆಯ ಕಾರ್ಯಕ್ಕೂ ಅಡ್ಡಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.