ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡಿಲ್ಲ: ರೇಣು
Team Udayavani, Jun 28, 2021, 10:03 PM IST
ಹೊನ್ನಾಳಿ: ಲಸಿಕೆ ವಿಚಾರದಲ್ಲಿ ನಾನು ಎಂದೂ ರಾಜಕೀಯ ಮಾಡಿಲ್ಲಾ, ಮಾಡುವುದು ಇಲ್ಲ. ಅವಳಿ ತಾಲೂಕಿನ ಪ್ರತಿಯೊಬ್ಬರಿಗೂ ಲಸಿಕೆ ಕೊಡಿಸುವುದು ನನ್ನ ಕರ್ತವ್ಯ ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದು, ಪ್ರತಿಯೊಬ್ಬರೂ ಲಸಿಕೋತ್ಸವದಲ್ಲಿ ಪಾಲ್ಗೊಂಡು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾದಿಂದ ದೂರ ಉಳಿಯುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದರು.
ತಾಲೂಕಿನ ಕೋಟೆಮಲ್ಲೂರು, ಕೋಣನತಲೆ, ಅರಕೆರೆ, ಮಾಸಡಿ, ಕುಂದೂರು, ಕೂಲಂಬಿ, ಕುಂಬಳೂರು, ಮುಕ್ತೇನಹಳ್ಳಿ, ಎಚ್.ಕಡದಕಟ್ಟೆ, ಮಾರಿಕೊಪ್ಪ, ಕತ್ತಿಗೆ ಗ್ರಾಮಗಳಲ್ಲಿನ ಲಸಿಕಾ ಕೇಂದ್ರಗಳು ಸೇರಿದಂತೆ ಅಂಬೇಡ್ಕರ್ ಭವನದಲ್ಲಿನ ಲಸಿಕಾ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ ಲಸಿಕೆಗಳ ಬಗ್ಗೆ ಮಾಹಿತಿ ಪಡೆದು, ಜನರಲ್ಲಿ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಅವಳಿ ತಾಲೂಕಿನಾದ್ಯಂತ 72,511 ಜನರಿಗೆ ಈಗಾಗಲೇ ಲಸಿಕೆ ಹಾಕಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ 53,278 ಜನರಿಗೆ ಲಸಿಕೆ ಹಾಕಿದ್ದು ಶೇ.89 ರಷ್ಟು ಲಸಿಕೆ ಹಾಕಲಾಗಿದೆ ಎಂದು ಹೇಳಿದರು.
18 ವರ್ಷ ಮೇಲ್ಪಟ್ಟವರಿಗೆ 1,03,500 ಟಾರ್ಗೆಟ್ ಇದ್ದು, ಅದರಲ್ಲಿ ಶೇ.10 ರಷ್ಟು ಜನರಿಗೆ ಲಸಿಕೆ ಹಾಕಲಾಗಿದ್ದು, ಹಂತ ಹಂತವಾಗಿ ಎಲ್ಲರಿಗೂ ಲಸಿಕೆ ಸಿಗಲಿದೆ ಎಂದರು. ಇನ್ನು ಲಸಿಕೆ ಹಾಕುವಾಗ ಪ್ರತಿಯೊಬ್ಬರಿಗೂ ಕೊರೊನಾ ಪರೀಕ್ಷೆ ಮಾಡಿಸಿ ಲಸಿಕೆ ಹಾಕುವಂತೆ ಅ ಧಿಕಾರಿಗಳಿಗೆ ಸೂಚಿಸಲಾಗಿದೆ. ಲಸಿಕೆ ಹಾಕಿಸಿಕೊಳ್ಳುವ ಪ್ರತಿಯೊಬ್ಬರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಶಾಸಕರು ಸಾರ್ವಜನಿಕರಲ್ಲಿ ಮಾನವಿ ಮಾಡಿದರು.
ಅವಳಿ ತಾಲೂನಾದ್ಯಂತ 3,584 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಅದರಲ್ಲಿ 3,267 ಜನರು ಕೊರೊನಾದಿಂದ ಗುಣಮುಖರಾಗಿದ್ದು, 166 ಸಕ್ರಿಯ ಪ್ರಕರಣಗಳು ಅವಳಿ ತಾಲೂಕಿನಾದ್ಯಂತ ಇದ್ದು, ಅವರು ಕೋವಿಡ್ ಕೇರ್ ಸೆಂಟರ್ ಸೇರಿದಂತೆ ವಿವಿಧ ಕಡೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಕೊರೊನಾ ಎರಡನೇ ಕಡಿಮೆಯಾಗುತ್ತಿದ್ದು, ಕೊರೊನಾ ಮೂರನೇ ಅಲೆ ಬರುತ್ತದೆಂದು ಆರೋಗ್ಯ ತಜ್ಞರು ಹೇಳುತ್ತಿದ್ದು ಈಗಾಗಲೇ ತಾಲೂಕು ಆಡಳಿತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ಅವಳಿ ತಾಲೂಕಿನಲ್ಲಿ ಎರಡು ಸಾವಿರ ಹಾಸಿಗೆಗಳನ್ನು ಅದಕ್ಕಾಗಿ ಮೀಸಲಿಡಲಾಗಿದೆ ಅಷ್ಟೇ ಅಲ್ಲದೇ ಅಡ್ವಾನ್ ಆಂಬ್ಯುಲೆನ್ಸ್ ಸೇರಿ ಮೂರು ಹೊಸ ಆಂಬ್ಯುಲೆನ್ Õಗಳನ್ನು ತರಿಸಲಾಗುತ್ತಿದೆ ಎಂದ ಶಾಸಕರು, ರೂ. ಒಂದು ಕೋಟಿ ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಿದ್ದು, ಜೂ.28ರಂದು ಆಕ್ಸಿಜನ್ ಪ್ಲಾಂಟ್ ಲೋಕಾರ್ಪಣೆಗೊಳ್ಳಲಿದೆ ಎಂದರು.
ತಾಲೂಕಿನ ಅರಬಗಟ್ಟೆ ಸಮೀಪವಿರುವ ಕೋವಿಡ್ ಕೇರ್ ಸೆಂಟರ್ ದೇಶಕ್ಕೆ ಮಾದರಿ ಕೋವಿಡ್ ಕೇರ್ ಸೆಂಟರ್ ಆಗಿದ್ದು, ಕೋವಿಡ್ ಕೇರ್ ಸೆಂಟರ್‌ನಲ್ಲಿರುವವರನ್ನು ನನ್ನ ಕುಟುಂಬಸ್ಥರ ರೀತಿ ನೋಡಿಕೊಳ್ಳುತ್ತಿದ್ದು ಕಳೆದ ಒಂದು ತಿಂಗಳಿನಿಂದ ಅಲ್ಲೇ ವಾಸ್ತವ್ಯ ಮಾಡುವ ಮೂಲಕ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.