ಮೀಸಲಾತಿ ಹೋರಾಟ: 29ಕ್ಕೆ ದಾವಣಗೆರೆಗೆ ಪಾದಯಾತ್ರೆ
ಕೂಡಲಸಂಗಮ ಶ್ರೀ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ
Team Udayavani, Jan 27, 2021, 3:08 PM IST
ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎಮೀಸಲಾತಿಗೆ ಒತ್ತಾಯಿಸಿ ಕೂಡಲ ಸಂಗಮದಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು
ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿನಡೆಯುತ್ತಿರುವ ಪಾದಯಾತ್ರೆ ಜ.29ರಂದುದಾವಣಗೆರೆಗೆ ಆಗಮಿಸಲಿದೆ. ಅಂದಿನಬಹಿರಂಗಸಭೆಯಲ್ಲಿ ಹರಿಹರ ಪೀಠದ ಶ್ರೀ ವಚನಾನಂದಸ್ವಾಮೀಜಿ ಭಾಗವಹಿಸುವರು ಎಂದು ಸ್ವಾಗತಸಮಿತಿ ಗೌರವ ಅಧ್ಯಕ್ಷ ಎಚ್.ಎಸ್. ನಾಗರಾಜ್‌ತಿಳಿಸಿದ್ದಾರೆ.
ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದಬಹಿರಂಗ ಸಭೆ ನಡೆಯುವ ಶ್ರೀ ಬೀರಲಿಂಗೇಶ್ವದೇವಸ್ಥಾನ ಮೈದಾನದವರೆಗೆಮೆರವಣಿಗೆನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿತಿಳಿಸಿದರು.ಸಂಜೆ 4ಕ್ಕೆ ನಡೆಯುವ ಬಹಿರಂಗಸಭೆಯಲ್ಲಿ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ,ಶ್ರೀ ವಚನಾನಂದ ಸ್ವಾಮೀಜಿ, ಶಾಸಕ ಬಸವರಾಜ್‌ಪಾಟೀಲ್ ಯತ್ನಾಳ, ವಿಜಯಾನಂದಕಾಶಪ್ಪನವರ್ ಭಾಗವಹಿಸುವರು ಎಂದರು.
ಪಂಚಮಸಾಲಿ ಸಮಾಜದಲ್ಲಿ ಗೊಂದಲವೇಇಲ್ಲದಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳುಸ್ವಾರ್ಥಕ್ಕಾಗಿ ಗೊಂದಲ ಇದೆ ಎನ್ನುವಂತೆಮಾಡಿದವರಿಗೆ ಉತ್ತರವಾಗಿ ಹರಪನಹಳ್ಳಿಯಲ್ಲಿನಡೆದ ಪಾದಯಾತ್ರೆಯ ಬಹಿರಗ ಸಭೆಯಲ್ಲಿಇಬ್ಬರೂ ಶ್ರೀಗಳು ವೇದಿಕೆ ಹಂಚಿಕೊಳ್ಳುವಮೂಲಕ ಸಮಾಜ ಒಗ್ಗಟ್ಟಾಗಿ ಇದೆ. ಮುಂದೆಯೂಇರುತ್ತದೆ. 2 ಎ ಮೀಸಲಾತಿ ಪಡೆದೇ ಪಡೆಯುತ್ತದೆ
ಎಂಬ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.
ದಾವಣಗೆರೆ ಬಹಿರಂಗ ಸಭೆಯಲ್ಲಿಭಾಗವಹಿಸಬೇಕು ಎಂದು ಹರಿಹರ ಪೀಠದಶ್ರೀಗಳನ್ನು ನಾವು ಭೇಟಿ ಮಾಡಿದಾಗಸಮಾಜದಿಂದ ನಾವು, ಸಮಾಜಕ್ಕಾಗಿ ನಾವು…ಎಂದು ತುಂಬು ಮನಸ್ಸಿನಿಂದ ಬಹಿರಂಗಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡರು. ಅಂದಿನಸಭೆಯಲ್ಲಿ ಸಮಾಜದ ಮುಖಂಡರಾದ ಬಿ.ಸಿ.ಉಮಾಪತಿ, ಬಿ. ಲೋಕೇಶ್, ಎಂ. ದೊಡ್ಡಪ್ಪಇತರರು ಸಹ ಭಾಗವಹಿಸುವರು ಎಂದರು.
ಪಾದಯಾತ್ರೆ ಮಧ್ಯ ಕರ್ನಾಟಕ ಪ್ರವೇಶಿಸುವಮುನ್ನವೇ ಪಂಚಮಸಾಲಿ ಸಮಾಜಕ್ಕೆ 2 ಎಮೀಸಲಾತಿ ನೀಡುವ ಮೂಲಕ ಸಮಾಜದಋಣ ತೀರಿಸುವರು ಎಂಬ ವಿಶ್ವಾಸ ಇದೆ.ಇಲ್ಲದೇ ಹೋದಲ್ಲಿ ದಾವಣಗೆರೆಯಿಂದಲೇಬಾರುಕೋಲು ಚಳವಳಿ ನಡೆಸಬೇಕಾಗುತ್ತದೆಎಂದು ವಚನಾನಂದ ಸ್ವಾಮೀಜಿಹರಪನಹಳ್ಳಿಯಸಭೆಯಲ್ಲಿ ಹೇಳಿದ್ದಾರೆ. ಕೆಲವರು ತಮ್ಮ ವೈಯಕ್ತಿಕಅಭಿಪ್ರಾಯ ಹಂಚಿಕೊಂಡಿರಬಹುದು. ಆದರೆ,ಅದು ಸಮಾಜದ ಹೇಳಿಕೆ ಅಲ್ಲ. ಹರಿಹರದಲ್ಲಿನಬಹಿರಂಗ ಸಭೆಯಲ್ಲಿ ವಚನಾನಂದಶ್ರೀಗಳುಪಾಲ್ಗೊಳ್ಳದೇ ಇರುವುದಕ್ಕೆ ಸಂಬಂಧಿತರನ್ನೇಕೇಳಬೇಕು.ನಮ್ಮದು ಏನಿದ್ದರೂ ದಾವಣಗೆರೆಮಾರಂಭದ ಜವಾಬ್ದಾರಿ ಎಂದು ಪ್ರಶ್ನೆಯೊಂದಕ್ಕೆ
ಉತ್ತರಿಸಿದರು.
ಸ್ವಾಗತ ಸಮಿತಿ ಪ್ರಧಾನಕಾರ್ಯದರ್ಶಿ ಪ್ರಭು ಕಲುºರ್ಗಿ, ವೀಣಾಕಾಶಪ್ಪನವರ್, ಮಂಜುಳಾ ಮಹೇಶ್, ಬಾತಿನಾಗರಾಜ್, ಹದಡಿ ರವಿ, ತಣಿ°ಗೆರೆ ಶಿವಕುಮಾರ್‌ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.