ಬೆಳೆ ಪರಿವರ್ತನೆಗೆ ಅನ್ನದಾತರ ಚಿತ್ತ


Team Udayavani, Jul 15, 2021, 10:00 PM IST

15-13

„ಎಚ್‌.ಕೆ. ನಟರಾಜ 

ದಾವಣಗೆರೆ: ಮೆಕ್ಕೆಜೋಳಕ್ಕೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದೇ ಇರುವುದರಿಂದ ಹಾಗೂ ಸರ್ಕಾರವೂ ಬೆಂಬಲ ಬೆಲೆಯಡಿ ಮೆಕ್ಕೆಜೋಳವನ್ನು ಖರೀದಿಸದೇ ಇರುವುದರಿಂದ ಬೇಸತ್ತ ಜಿಲ್ಲೆಯ ನೂರಾರು ರೈತರು, ಈ ಬಾರಿ ಇತರ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳತ್ತ ಚಿತ್ತ ಹರಿಸಿದ್ದಾರೆ.

ಕಳೆದೊಂದು ದಶಕಕ್ಕೂ ಅಧಿಕ ಕಾಲದಿಂದ ನಿರಂತರ ಮೆಕ್ಕೆಜೋಳ ಬೆಳೆದುಕೊಂಡು ಬಂದ ಜಿಲ್ಲೆಯ ರೈತರು, ಅತ್ಯಧಿಕ ಇಳುವರಿ ಮೂಲಕ ಜಿಲ್ಲೆಯನ್ನು ಮೆಕ್ಕೆಜೋಳದ ಕಣಜವನ್ನಾಗಿಸಿದ್ದಾರೆ. ಜಿಲ್ಲೆಯಲ್ಲಿರುವ ಒಟ್ಟು 2.50 ಲಕ್ಷ ಹೆಕ್ಟೇರ್‌ ಕೃಷಿ ಪ್ರದೇಶದಲ್ಲಿ ಅರ್ಧದಷ್ಟು ಅಂದರೆ 1.25 ಲಕ್ಷ ಹೆಕ್ಟೇರ್‌ ಪ್ರದೇಶ ಮೆಕ್ಕೆಜೋಳವನ್ನೇ ಆವರಿಸಿದೆ.

ಆದರೆ ಪ್ರತಿ ವರ್ಷ ಹೆಚ್ಚು ಇಳುವರಿ ಕಾರಣದಿಂದ ಮೆಕ್ಕೆಜೋಳಕ್ಕೆ ನಾಲ್ಕೈದು ವರ್ಷಗಳಿಂದ ಯೋಗ್ಯ ಬೆಲೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಮೆಕ್ಕೆಜೋಳವನ್ನು ಪಡಿತರ ಆಹಾರಧಾನ್ಯದಿಂದ ಹೊರಗಿಡುವ ಮೂಲಕ ಬೆಂಬಲ ಬೆಲೆಯಡಿ ಖರೀದಿಸುವುದನ್ನೂ ನಿಲ್ಲಿಸಿದೆ. ಹೀಗಾಗಿ ಮೆಕ್ಕೆಜೋಳ ಬೆಳೆದ ರೈತರು ಸಿಕ್ಕಷ್ಟು ದರಕ್ಕೆ ಮೆಕ್ಕೆಜೋಳ ಮಾರಿ ಕೈ ಸುಟ್ಟುಕೊಳ್ಳುವ ಸ್ಥಿತಿ ಎದುರಿಸುತ್ತಲೇ ಇದ್ದಾರೆ.

ಒಂದೆಡೆ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗುತ್ತಿಲ್ಲ. ಮತ್ತೂಂದೆಡೆ ಜಮೀನಿನಲ್ಲಿ ಮೆಕ್ಕೆಜೋಳವನ್ನು ಏಕ ಬೆಳೆ ನಿರಂತರವಾಗಿ ಬೆಳೆಯುತ್ತಿರುವುದರಿಂದ ಮಣ್ಣಿನ ಫಲವತ್ತತೆಯೂ ಹಾಳಾಗುತ್ತಿದೆ. ಮೆಕ್ಕೆಜೋಳ ಅಧಿಕ ಇಳುವರಿ ಕೊಡುವ ಬೆಳೆಯಾಗಿರುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರಗೆಳೆಯುತ್ತದೆ. ಮಣ್ಣು ತನ್ನ ಫಲವತ್ತತೆ ಕಳೆದುಕೊಂಡರೆ ವರ್ಷದಿಂದ ವರ್ಷಕ್ಕೆ ಬೆಳೆಗಳಿಗೆ ಕೀಟ, ರೋಗ ಬಾಧೆ ಹೆಚ್ಚಾಗುತ್ತದೆ. ಇಳುವರಿಯಲ್ಲಿಯೂ ಕುಸಿತ ಕಾಣುತ್ತದೆ. ಇಳುವರಿ ಹೆಚ್ಚಿಸಿಕೊಳ್ಳಲು ಹೆಚ್ಚು ಪೋಷಕಾಂಶ ಕೊಡಬೇಕಾಗುತ್ತದೆ.

ರಸಗೊಬ್ಬರವೊಂದನ್ನೇ ನೀಡಿದರೆ ಮತ್ತೆ ಅದರ ದುಷ್ಪರಿಣಾಮವನ್ನೂ ಎದುರಿಸಬೇಕಾಗುತ್ತದೆ. ಇದರಿಂದಾಗಿ ರಸಗೊಬ್ಬರದ ಜತೆಗೆ ಸಾವಯವ ಗೊಬ್ಬರ ಬಳಕೆಯನ್ನೂ ಹೆಚ್ಚಿಸಬೇಕಾಗುತ್ತದೆ. ಆಗ ಕೃಷಿ ಖರ್ಚು ದುಪ್ಪಟ್ಟು ಆಗುತ್ತದೆ. ಈ ಎಲ್ಲದರ ಬಗ್ಗೆ ಅರಿವು ಮೂಡಿಸಿಕೊಂಡಿರುವ ಜಿಲ್ಲೆಯ ಕೆಲ ರೈತರು, ಈ ವರ್ಷದಿಂದಲೇ ಮೆಕ್ಕೆಜೋಳಕ್ಕೆ ನೀಡುತ್ತಿದ್ದ ಆದ್ಯತೆ ಕಡಿಮೆ ಮಾಡಿ, ಬೆಳೆ ಬದಲಾವಣೆಗೆ ಮುಂದಾಗಿದ್ದಾರೆ. ಮೆಕ್ಕೆಜೋಳದಲ್ಲಿ ಅಂತರ ಬೆಳೆ: ಮೆಕ್ಕೆಜೋಳವನ್ನು ಏಕ ಬೆಳೆಯಾಗಿ ನಿರಂತರವಾಗಿ ಬೆಳೆಯುತ್ತ ಬಂದಿರುವ ಒಂದಿಷ್ಟು ರೈತರು, ಒಮ್ಮೆಲೆ ಮೆಕ್ಕೆಜೋಳ ಬೆಳೆ ಕೈಬಿಡದೆ ಕುಸಿದಿರುವ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಲು ಅಂತರ ಬೆಳೆಯಾಗಿ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಿದ್ದಾರೆ.

ಮೆಕ್ಕೆಜೋಳದೊಂದಿಗೆ ಅಂತರ ಬೆಳೆಯಾಗಿ ಬೆಳೆಯಲು ಈ ಬಾರಿ ವಿಶೇಷ ಕಾರ್ಯಕ್ರಮದ ಮೂಲಕ ಪ್ರೋತ್ಸಾಹ ನೀಡಿದ ಕೃಷಿ ಇಲಾಖೆ, ರೈತರಿಗೆ ಚಿಕ್ಕ ಚಿಕ್ಕ ಪ್ಯಾಕೆಟ್‌ಗಳಲ್ಲಿ ತೊಗರಿಬೀಜ ವಿತರಿಸಿದೆ. ಆದ್ದರಿಂದ ರೈತರು ಮೆಕ್ಕೆಜೋಳಕ್ಕೆ ಹೊಂದಿಕೊಂಡು ಉತ್ತಮವಾಗಿ ಬೆಳೆಯುವ ತೊಗರಿಬೀಜವನ್ನೇ ಹೆಚ್ಚು ಕೃಷಿಕರು ಬಿತ್ತನೆ ಮಾಡಿದ್ದಾರೆ. ಇದರಿಂದಾಗಿ ಮೆಕ್ಕೆಜೋಳ ಬೆಳೆಯೊಂದಕ್ಕೆ ಜೋತುಬೀಳುವ ರೈತರ ಚಾಳಿಗೆ ತುಸು ಬ್ರೇಕ್‌ ಬಿದ್ದಂತಾಗಿದೆ. ಇದರ ಪರಿಣಾಮ ಈ ಬಾರಿ ಏಳು ಸಾವಿರ ಹೆಕ್ಕೇರ್‌ಗೂ ಅಧಿಕ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ.

ತೋಟಗಾರಿಕೆಯತ್ತ ಚಿತ್ತ: ಹೆಚ್ಚು ಮಳೆ ಹಾಗೂ ನೀರಾವರಿ ಸೌಲಭ್ಯ ಸಾಧ್ಯವಿರುವ ಜಿಲ್ಲೆಯ ದಾವಣಗೆರೆ, ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕುಗಳಲ್ಲಿ ಅನೇಕ ರೈತರು ಮೆಕ್ಕೆಜೋಳ ಕೃಷಿಯನ್ನೇ ಸಂಪೂರ್ಣವಾಗಿ ಕೈಬಿಟ್ಟು ತೋಟಗಾರಿಕೆ ಬೆಳೆಯತ್ತ ಚಿತ್ತ ಹರಿಸಿದ್ದಾರೆ.

ಹೊಸದಾಗಿ ತೋಟ ಮಾಡಲು ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸಿಗುವ ಕೂಲಿ ಅನುದಾನವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಒಬ್ಬ ರೈತ 2.5 ಲಕ್ಷ ರೂ.ವರೆಗೂ ಉದ್ಯೋಗಖಾತ್ರಿ ಯೋಜನೆಯಡಿ ಲಾಭ ಪಡೆದುಕೊಂಡಿದ್ದಾನೆ. ಇದರ ಪರಿಣಾಮವಾಗಿ ಈ ವರ್ಷ ಅಂದಾಜು ಎರಡು ಸಾವಿರ ಹೆಕ್ಟೇರ್‌ ನಷ್ಟು ಅಡಿಕೆ ಪ್ರದೇಶ ವಿಸ್ತರಣೆಯಾಗುತ್ತಿದೆ.

ಕಳೆದ ನಾಲ್ಕೈದು ವರ್ಷಗಳಲ್ಲಿ ಸರಾಸರಿ 25 ಸಾವಿರ ಹೆಕ್ಟೇರ್‌ ಅಡಿಕೆ ಪ್ರದೇಶ ವಿಸ್ತರಣೆಯಾಗಿದೆ. ಅಡಿಕೆ ತೋಟದಲ್ಲಿ ನಾಲ್ಕೈದು ವರ್ಷಗಳಲ್ಲಿ ಇಳುವರಿ ಶುರುವಾಗುತ್ತದೆ. ಅಲ್ಲಿಯವರೆಗೂ ಅಡಿಕೆ ಜತೆಗೆ ತರಕಾರಿ, ಪಪ್ಪಾಯ, ನುಗ್ಗೆ, ಹೂವು, ಬಾಳೆ ಬೆಳೆದು ಆದಾಯ ಗಳಿಸಬಹುದು. ಹೊಸ ತೋಟ ನಿರ್ಮಾಣಕ್ಕೆ ಉದ್ಯೋಗ ಖಾತ್ರಿಯಡಿ ಧನಸಹಾಯವನ್ನೂ ಪಡೆಯಬಹುದು ಎಂಬ ಕಾರಣಕ್ಕಾಗಿ ರೈತರಿಗೆ ಅಡಿಕೆ ತೋಟ ಹೆಚ್ಚು ಆಕರ್ಷಿಸಿದೆ.

ಕೆಲವು ರೈತರು ವಿವಿಧ ಹಣ್ಣು, ಹೂವು ಕೃಷಿಗೂ ಕೈಹಾಕಿದ್ದಾರೆ. ಒಟ್ಟಾರೆ ತೋಟಗಾರಿಕೆ ಬೆಳೆಗಳಿಗೆ ಪರಿವರ್ತನೆಯಾದ ಪ್ರದೇಶದಲ್ಲಿ ಶೇ. 75ಕ್ಕೂ ಹೆಚ್ಚು ಕೃಷಿ ಪ್ರದೇಶ ಈ ಮೊದಲು ಮೆಕ್ಕೆಜೋಳ ಬಿತ್ತನೆ ಪ್ರದೇಶವಾಗಿತ್ತು ಎಂಬುದು ಗಮನಾರ್ಹ.

ಟಾಪ್ ನ್ಯೂಸ್

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.