ಯತ್ನಾಳ್ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳಲ್ಲ
ಬಸವನಗೌಡ ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲ್ಲ
Team Udayavani, Jan 31, 2021, 2:40 PM IST
ಕಾರವಾರ: ಯುಗಾದಿ ನಂತರ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂಬ ಶಾಸಕ ಬಸವನಗೌಡ ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲ್ಲ. ಯಾರೋ ಒಬ್ಬರು ಹೇಳಿಕೆ ಕೊಟ್ಟರೆ ಅದಕ್ಕೆ ಯಾವುದೇ ಮಹತ್ವ ಇಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸರಿ ಸುಮಾರು 10 ಕೋಟಿಗೂ ಅಧಿಕ ಸದಸ್ಯರನ್ನು ಹೊಂದಿರುವ ಅತೀ ದೊಡ್ಡ ಪಕ್ಷ ಬಿಜೆಪಿಯಾಗಿದೆ. ಗ್ರಾಪಂ ಚುನಾವಣೆ ಮುಗಿ ಯುತ್ತಿದ್ದಂತೆ ಸಿಎಂ ಬದಲಾಗ್ತಾರೆ ಎಂದು ಸಿದ್ಧರಾಮಯ್ಯ ಹೇಳಿದ್ದರು. ಈವಾಗ ಇನ್ಯಾವುದೋ ಸಮಯ ಹೇಳ್ತಾರೆ. ಹೀಗೆ ಅವರು ಹೇಳಿದಂತೆ ಒಂದೊಂದು ಹಬ್ಬಕ್ಕೆ ಒಂದೊಂದು ಮುಖ್ಯಮಂತ್ರಿ ಬದಲಾಯಿಸಿದ್ದರೆ ಇಷ್ಟರ ವರೆಗೆ 25 ಬಾರಿ ಮುಖ್ಯಮಂತ್ರಿ ಬದಲಾವಣೆ ಆಗಬೇಕಿತ್ತು ಎಂದು ತಿಳಿಸಿದರು.
ಸಿದ್ದರಾಮಯ್ಯ ಹೇಳಿಕೆ ನೀಡಿ ದಂತೆ ಇದೀಗ ಯತ್ನಾಳ್ ಕೂಡಾ ಹೇಳಿಕೆ ಕೊಡ್ತಿ ದ್ದಾರೆ. ಅದ್ಯಾವುದನ್ನೂ ನಾವು ಗಂಭೀರ ವಾಗಿ ತೆಗೆದುಕೊಂಡಿಲ್ಲ. ಯತ್ನಾಳ್ ನನಗೆ ಆತ್ಮೀಯ ಸ್ನೇಹಿತ, ಪ್ರಖರ ಹಿಂದುತ್ವವಾದಿ ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ಪಕ್ಷದ ಶಿಸ್ತು ಮೀರಿ ಅವರೇ ಹೇಳಿಕೆ ನೀಡುವುದನ್ನು ಪಕ್ಷ ಯಾವತ್ತೂ ಕ್ಷಮಿ ಸಲ್ಲ. ಈಗಾಗಲೇ ರಾಜ್ಯ ಸಮಿತಿಯಿಂದ ಕೇಂದ್ರದ ಶಿಸ್ತು ಸಮಿ ತಿಗೆ ದೂರು ಕಳುಹಿಸಿದ್ದು ಅವರೇ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದರು.
ಓದಿ : ಮೂರು ವರ್ಷದಲ್ಲಿ ‘ಮನೆ ಮನೆಗೆ ಗಂಗೆ’ ಯೋಜನೆ ಪೂರ್ಣ ಅನುಷ್ಠಾನ: ಈಶ್ವರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಸಿದ್ದಗಂಗಾ ಶ್ರೀ ರಾಷ್ಟ್ರಸಂತನೆಂದು ಘೋಷಿಸಿ: ಕೂಡಲಸಂಗಮ ಶ್ರೀ
Davanagere: ಮೀಸಲಾತಿಗಾಗಿ ಇನ್ನು ಮುಂದೆ ಈ ಸರ್ಕಾರದ ಮುಂದೆ ಹೋಗುವುದಿಲ್ಲ: ಪಂಚಮಸಾಲಿ ಶ್ರೀ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
BJP Rift; ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ ಶಾಸಕ ಬಿ.ಪಿ. ಹರೀಶ್
Davanagere: ಮಹಾನಗರ ಪಾಲಿಕೆ ವ್ಯಾಪ್ತಿಯ ಅನಧಿಕೃತ ಹೋರ್ಡಿಂಗ್ ತೆರವು