ಕುರಿ ಕಾಳಗದಲ್ಲಿದೆ ಸ್ಪರ್ಧಾ ಮನೋಭಾವ
ಆಂಜನೇಯ ಯೂತ್ ಟ್ರಸ್ಟ್ ಕಮಿಟಿಯಿಂದ ಕುರಿಕಾಳಗ ಸ್ಪರ್ಧೆ ನಡೆಯಿತು
Team Udayavani, Feb 1, 2021, 4:56 PM IST
ಹೊನ್ನಾಳಿ: ಕುರಿ ಕಾಳಗ ಸ್ಪರ್ಧಾ ಮನೋಭಾವ ಎತ್ತಿ ತೋರುತ್ತದೆ. ಹೊನ್ನಾಳಿಯಲ್ಲಿ ಪ್ರತಿ ವರ್ಷ ಕುಸ್ತಿ ಪಂದ್ಯಗಳನ್ನು ಏರ್ಪಡಿಸುವಂತೆ ದುರ್ಗಾಂಭಿಕ ಜಾತ್ರೆಯಲ್ಲಿ ಕುರಿಕಾಳಗ ಏರ್ಪಡಿಸುವತ್ತ ಯುವಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇದೊಂದು ರೀತಿಯ ಕ್ರೀಡೆ ಮತ್ತು ಮನೋರಂಜನೆ ಆಗಿದೆ ಎಂದು ಸಿಎಂ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪಟ್ಟಣದ ಶ್ರೀ ಆಂಜನೇಯ ಯೂತ್ ಟ್ರಸ್ಟ್ ಕಮಿಟಿ ವತಿಯಿಂದ ದುರ್ಗಾಂಭಿಕ ಜಾತ್ರೆ ಪ್ರಯುಕ್ತ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕುರಿಕಾಳಗ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿಯೇ ಕುಸ್ತಿ ಪಂದ್ಯಗಳಿಗೆ
ಹೊನ್ನಾಳಿ ಹೆಸರಾಗಿರುವಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೆಸರು ಮಾಡುತ್ತಿದೆ. ತಾಲೂಕಿನಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಕೊಡುವ ದೃಷ್ಟಿಯಿಂದ ಯುವಕರನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವನ್ನಾಗಿ ಮಾಡುವ ದೃಷ್ಟಿಯಿಂದ ಕ್ರೀಡಾಂಗಣದಲ್ಲಿ ಜಿಮ್ ಗೆ ಬೇಕಾದ ಎಲ್ಲಾ ಉಪಕರಣಗಳನ್ನು ಮಂಜೂರು ಮಾಡಿಸಲಾಗಿದೆ. ಮಹಿಳೆಯರಿಗೂ ಪ್ರತ್ಯೇಕವಾಗಿ ಜಿಮ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಪುನೀತ್ ಬಣ್ಣಜ್ಜಿ ಮಾತನಾಡಿ, ಕುರಿಕಾಳಗವನ್ನು ಎರಡು ಹಲ್ಲಿನ ಕುರಿ, ನಾಲ್ಕು ಹಲ್ಲಿನ ಕುರಿ ಮತ್ತು 8 ಹಲ್ಲಿನ ಕುರಿ ಎಂದು ವಿಭಾಗಿಸಿ ಸ್ಪರ್ಧೆಗಳನ್ನು ಕಮೀಟಿ ವತಿಯಿಂದ ಏರ್ಪಡಿಸಲಾಗಿದೆ. ಪ್ರತಿಯೊಂದು ವಿಭಾಗಕ್ಕೂ ಸಾಕಷ್ಟು ಸ್ಪರ್ಧೆಗಳು ನಡೆದಿವೆ ಎಂದರು. ವಿಜೇತ ಕುರಿಗಳಿಗೆ ಜಡ್ಜ್, ಎಲ್‌ಇಡಿ ಟಿವಿ, ಬೆಳ್ಳಿ ದೀಪಗಳು, ಗಾಡ್ರೇಜ್, ಡ್ರಸ್ಸಿಂಗ್ ಟೇಬಲ್, ಹ್ಯಾಂಡ್ರೆಡ್ 4 ಜಿ ಮೊಬೈಲ್, ಫ್ಯಾನ್ ಗಳನ್ನು ಬಹುಮಾನವಾಗಿ ಕೊಡಲಾಯಿತು ಎಂದು ಪತ್ರಿಕೆಗೆ ಮಾಹಿತಿ ನೀಡಿದರು.
ತಾಲಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ರಂಜಿತ್, ತಾಲೂಕು ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಪುನೀತ್, ಚಿಗರಿ ಮಂಜು, ರಮೇಶ್ ಸೇರಿದಂತೆ ಕಮಿಟಿಯ ಪದಾಧಿಕಾರಿಗಳು ಹಾಜರಿದ್ದರು.
ಓದಿ : ಭಾರತೀಯ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಸಂಜೀವಿನಿ ಬಜೆಟ್: ಬಿ ಎಸ್ ಯಡಿಯೂರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
MUST WATCH
ಹೊಸ ಸೇರ್ಪಡೆ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.