ನಿರ್ಭೀತಿಯಿಂದ ಮತ ಹಕ್ಕು ಚಲಾಯಿಸಿ
ಹಣ-ಹೆಂಡದ ಆಮಿಷಕ್ಕೊಳಗಾಗಿ ಮತದಾನ ಮಾಡಿದಲ್ಲಿ ಅಪಾಯ ತಪ್ಪಿದ್ದಲ್ಲ: ತಾಪಂ ಇಒ ದಾರುಕೇಶ
Team Udayavani, Feb 3, 2021, 12:45 PM IST
ದಾವಣಗೆರೆ: ಪ್ರತಿಯೊಬ್ಬ ಮತದಾರರು·ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಿಸಿದರೆಮಾತ್ರ ಉತ್ತಮ ಸಮಾಜ, ಸದೃಢ ಭಾರತ ನಿರ್ಮಾಣಸಾಧ್ಯ ಎಂದು ದಾವಣಗೆರೆ ತಾಲೂಕು ಪಂಚಾಯಿತಿಕಾರ್ಯನಿರ್ವಹಣಾಧಿಕಾರಿ ಬಿ.ಎಂ. ದಾರುಕೇಶಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮತದಾರರಸಾಕ್ಷರತಾ ಸಂಘ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರುಮಾತನಾಡಿದರು. ಅಭಿವೃದ್ಧಿಗಾಗಿ ಸರ್ಕಾರ ನೀಡುವಅನುದಾನದ ಸದ್ಬಳಕೆಗೆ ಅರ್ಹ ವ್ಯಕ್ತಿಗಳನ್ನು ಆಯ್ಕೆಮಾಡುವ ಹಕ್ಕನ್ನು ಸಂವಿಧಾನ ಮತದಾರರಿಗೆನೀಡಿದೆ. ನಿರ್ದಾಕ್ಷಿಣ್ಯ, ನಿರ್ಭಿಡೆಯಿಂದ ಹಕ್ಕುಚಲಾಯಿಸಬೇಕು ಎಂದರು.
ಪ್ರತಿ ಮತದಾರರು ಪ್ರಾಯೋಗಿಕವಾಗಿ ಯೋಚನೆಮಾಡಬೇಕು. ಒಂದು ಮತ ಇಡೀ ದೇಶದಭವಿಷ್ಯವನ್ನು ನಿರ್ಧರಿಸುತ್ತದೆ. ವೈಯಕ್ತಿಕ ಸಮಸ್ಯೆಗೆಪರಿಹಾರ ಕಂಡುಕೊಳ್ಳುವ ಬದಲಾಗಿ ಸಮುದಾಯ,ಭವಿಷ್ಯದ ಬಗ್ಗೆ ಚಿಂತನೆ ಮಾಡಿ ಉತ್ತಮನಿರ್ಧಾರ ತೆಗೆದುಕೊಳ್ಳುವಂತಾಗಬೇಕು ಎಂದುಆಶಿಸಿದರು.
ಮತದ ಮಹತ್ವದ ಬಗ್ಗೆ ಜ್ಞಾನ ಇರಬೇಕು.ಸಾಕ್ಷರತೆಯ ಜಾಗೃತಿ ಮೂಡಿಸಿದಂತೆ ಮತದಾರರಲ್ಲೂಅರಿವು ಮೂಡಿಸಬೇಕು. ಜವಾಬ್ದಾರಿಯನ್ನುತಿಳಿದುಕೊಂಡು ಕರ್ತವ್ಯ ನಿರ್ವಹಿಸಬೇಕು. ಹಣ,ಹೆಂಡದ ಆಸೆಗೆ ಕಟ್ಟುಬಿದ್ದು ಅಥವಾ ಯಾರದೋಮುಲಾಜಿಗೆ ಬಿದ್ದು ಮತ ಹಾಕಿದರೆ ಅಪಾಯತಪ್ಪಿದ್ದಲ್ಲ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕುಎಂದು ತಿಳಿಸಿದರು.
ಚುನಾವಣೆಯಲ್ಲಿ ಮತದಾನದ ಅರಿವುಮೂಡಿಸುವುದು ಕೇವಲ ಸರ್ಕಾರಿ ನೌಕರರಜವಾಬ್ದಾರಿ ಅಲ್ಲ. ದೇಶದ ಪ್ರತಿಯೊಬ್ಬ ವ್ಯಕ್ತಿಯಕರ್ತವ್ಯವೂ ಆಗಿದೆ. ದುರ್ಲಾಭ ಅಥವಾಪ್ರಲೋಭನೆಗೆ ಒಳಗಾಗದೆ ಮತದಾನ ಮಾಡಬೇಕು.ಆದರೆ ಹಣದ ದುರಾಸೆ ಮತ ಮಾರಿಕೊಳ್ಳುತ್ತಿರುವುದು
ದುರ್ದೈವದ ಸಂಗತಿ. ಇದಕ್ಕೆ ಕೊನೆ ಹೇಳದ ಹೊರತುಸುಭದ್ರ ರಾಷ್ಟ್ರ ನಿರ್ಮಾಣ ಕಷ್ಟ ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪೊÅ| ಶರಣಪ್ಪ ವಿ.ಹಲಸೆ ಮಾತನಾಡಿ, ಸರ್ಕಾರದ ಅನುದಾನವನ್ನುಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡುಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿಯನ್ನು ಮೆರೆದರೆಮಾತ್ರ ಚುನಾವಣೆಯ ಉದ್ದೇಶ ಸಾರ್ಥಕವಾಗುತ್ತದೆ.ಇದನ್ನು ಪ್ರತಿಯೊಬ್ಬ ಮತದಾರನೂತಿಳಿದುಕೊಳ್ಳುವುದು ಅತ್ಯವಶ್ಯ ಎಂದರು.
ಕುಲಸಚಿವ ಪ್ರೊ| ಬಸವರಾಜ ಬಣಕಾರಮಾತನಾಡಿದರು. ಮತದಾರರ ಸಾಕ್ಷರತಾ ಸಂಘದಸಂಯೋಜನಾ ಧಿಕಾರಿ ಡಾ| ಅಶೋಕಕುಮಾರಪಾಳೇದ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ| ನಾಗರಾಜ ಪ್ರಮಾಣವಚನ ಬೋಧಿ ಸಿದರು.ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿ ಡಾ| ಬಸವರಾಜ ಬೆನಕನಹಳ್ಳಿ ಸ್ವಾಗತಿಸಿದರು.ಡಾ| ಶ್ರೀಧರ ಬಾರ್ಕಿ ನಿರೂಪಿಸಿದರು. ಡಾ| ಪ್ರವೀಣ್
ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.