ತಾಪಂ ಸದಸ್ಯರ ಸಾಮೂಹಿಕ ಗೈರು: ಸಭೆ ಮುಂದೂಡಿದ ಅಧ್ಯಕ್ಷೆ
ಜಗಳೂರು: ತಾಪಂ ಸಭೆಯಲ್ಲಿ ಅಧ್ಯಕ್ಷೆ ಮಂಜುಳಾ ಮಾತನಾಡಿದರು
Team Udayavani, Feb 6, 2021, 2:45 PM IST
ಜಗಳೂರು: ತಾಲೂಕು ಮಟ್ಟದ·ಅಧಿಕಾರಿಗಳು ಸಭೆಗೆ ಸಮರ್ಪಕ ಮಾಹಿತಿಒದಗಿಸುತ್ತಿಲ್ಲ. ಅನುಪಾಲನ ವರದಿಮಂಡಿಸುತ್ತಿಲ್ಲ ಎಂದು ಅಸಮಾಧಾನಗೊಂಡ ತಾಪಂ ಸದಸ್ಯರು ಸಾಮೂಹಿಕವಾಗಿಗೈರು ಹಾಜರಾಗುವುದರ ಮೂಲಕ ಸಭೆಬಹಿಷ್ಕರಿಸಿದ ಘಟನೆ ತಾಪಂ ಸಭಾಂಗಣದಲ್ಲಿಜರುಗಿತು.
ಪಟ್ಟಣದ ತಾಪಂ ಸಭಾಂಗಣದಲ್ಲಿತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾದಾಗಸಭೆಗೆ ಬೆರಳಣಿಕೆಯಷ್ಟು ತಾಲೂಕು ಮಟ್ಟದಅ ಧಿಕಾರಿಗಳು ಮಾತ್ರ ಹಾಜರಿದ್ದರು. ಇಒಮತ್ತು ಅಧ್ಯಕ್ಷರು, ಸದಸ್ಯರಿಗಾಗಿ ಸುಮಾರುಒಂದೂವರೆ ತಾಸು ಕಾಯ್ದರು ಸಹ ಒಬ್ಬಸದಸ್ಯರು ಸಭೆಯ ಹತ್ತಿರ ಸುಳಿಯಲಿಲ್ಲ.ಆದರೆ ಅಧ್ಯಕ್ಷೆ ಮಂಜುಳಾ ಅವರಸಂಧಾನದ ನಂತರ ಸಭಗೆ ಸದಸ್ಯರು ಸಭೆಗೆಆಗಮಿಸಿದರು.
ಸದಸ್ಯ ಮಾರೇನಹಳ್ಳಿ ಬಸವರಾಜ್‌ಮಾತನಾಡಿ, ಹಿಂದಿನ ಸಭೆಯಲ್ಲಿಚರ್ಚಿತ ಸಮಸ್ಯೆಗಳನ್ನು ಅ ಧಿಕಾರಿಗಳುಬಗೆಹರಿಸದೇ ಸಭೆಗೆ ಹಾಜರಾಗುತ್ತಾರೆ.ಕಳೆದ 5 ವರ್ಷಗಳಿಂದ ಇದೇ ಸಮಸ್ಯೆಇದೆ. ಗ್ರಾಮೀಣ ಪ್ರದೇಶಗಳಲ್ಲಿ ಹಲವಾರುಸಮಸ್ಯೆಗಳಿದ್ದು, ಮತ ನೀಡಿದಂತಹ ಜನರುಸಮಸ್ಯೆಗಳ ಬಗ್ಗೆ ನಮ್ಮನ್ನು ಕೇಳುತ್ತಾರೆ.ಆದರೆ ಅ ಧಿಕಾರಿಗಳು ಕೆಲಸ ಮಾಡುವುದಿಲ್ಲಎಂದು ದೂರಿದರು.
ಸದಸ್ಯ ಶಂಕರ್ ನಾಯ್ಕ ಮಾತನಾಡಿ,ಪಿಡಿಒಗಳೂ 15 ನೇ ಹಣಕಾಸು ಯೋಜನೆದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆಗ್ರಾಮೀಣ ಪ್ರದೇಶಗಳಲ್ಲಿ ಚರಂಡಿಗಳುಗಬ್ಬು ನಾರುತ್ತಿವೆ ಎಂದರು.ಅಧ್ಯಕ್ಷೆ ಮಂಜುಳಾ ಮಾತನಾಡಿ,ಕಳೆದ 5 ವರ್ಷಗಳಿಂದ ಅಧಿ ಕಾರಿಗಳೂಅನುಪಾಲನ ವರದಿ ನೀಡುತ್ತಿಲ್ಲ. ಸದಸ್ಯರಸಮಸ್ಯೆ ಆಲಿಸುತ್ತಿಲ್ಲ. ಹಾಗಾಗಿ ಸಭೆಯನ್ನುಮುಂದೂಡಲಾಗುವುದು ಎಂದು ಸಭೆಮುಂದೂಡಿದರು.
ಇಒ ಮಲ್ಲಾ ನಾಯ್ಕ ಮಾತನಾಡಿ,ಮುಂದಿನ ಸಭೆಗೆ ತಪ್ಪದೇ ಅಧಿ ಕಾರಿಗಳುಅನುಪಾಲನಾ ವರದಿ ತರಬೇಕು ಎಂದು
ಸೂಚಿಸಿದರು. ತಾಪಂ ಸ್ಥಾಯಿ ಸಮಿತಿಸಿದ್ದೇಶ್ ಸೇರಿದಂತೆ ತಾಲೂಕು ಮಟ್ಟದಅಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.