15 ಸಾವಿರ ಕೋಟಿ ಅನುದಾನ ಮೀಸಲಿಡಿ: ಶ್ರೀರಾಮ್
ಕಾರ್ಮಿಕ ಹಕ್ಕುಗಳ ವೇದಿಕೆ ಸುದ್ದಿಗೋಷ್ಟಿ
Team Udayavani, Feb 6, 2021, 3:54 PM IST
ದಾವಣಗೆರೆ: ರಾಜ್ಯ ಸರ್ಕಾರ ಈ ಬಾರಿಯ·ಬಜೆಟ್‌ನಲ್ಲಿ ಕಾರ್ಮಿಕ ಇಲಾಖೆಗೆ 15 ಸಾವಿರಕೋಟಿಗೂ ಹೆಚ್ಚು ಅನುದಾನ ಮೀಸಲಿಡಬೇಕು
ಎಂದು ಕಾರ್ಮಿಕ ಹಕ್ಕುಗಳ ವೇದಿಕೆ ಸಂಸ್ಥಾಪಕರಾಷ್ಟ್ರೀಯ ಅಧ್ಯಕ್ಷ ಪಾವಗಡ ಶ್ರೀರಾಮ್‌ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಬಜೆಟ್‌ನಲ್ಲಿ 15 ಸಾವಿರ ಕೋಟಿಗೂಅಧಿಕ ಅನುದಾನ ಮೀಸಲಿಡುವ ಜತೆಗೆಕಾರ್ಮಿಕರಿಗೆ ವಿವಿಧ ಸವಲತ್ತು ಒದಗಿಸಬೇಕು.ಕಾರ್ಮಿಕ ವಲಯಕ್ಕೆ ಸ್ವಂತ ಸೂರಿಗಾಗಿ ಹೆಚ್ಚಿನಆನುದಾನ ಬಳಸಬೇಕು. ಕಾರ್ಮಿಕರ ಮಕ್ಕಳಿಗೆಪ್ರತಿಷ್ಠಿತ ಶಾಲೆಯಲ್ಲಿ ಓದುವ ಅವಕಾಶಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಕಳೆದ 49 ವರ್ಷಗಳಿಂದ ಅಂಗನವಾಡಿಕಾರ್ಯಕರ್ತೆಯರು, ಸಹಾಯಕಿಯರು
ಕೆಲಸ ಮಾಡುತ್ತಿದ್ದರೂ ಕಾಯಂ ಮಾಡಿಲ್ಲ.
ಸಂವಿಧಾನದ 309 ನೇ ವಿಧಿ ಪ್ರಕಾರ ಅವಶ್ಯಕಮತ್ತು ಆಗತ್ಯ ಸೇವೆ ಸಲ್ಲಿಸುತ್ತಿರುವರನ್ನು ಕಾಯಂಮಾಡಬೇಕು. ಅದರ ಆಧಾರದಲ್ಲಿ ಅಂಗನವಾಡಿಕಾರ್ಯಕರ್ತೆಯರು, ಸಹಾಯಕಿಯರನ್ನುಕಾಯಂ ಮಾಡಬೇಕು. ಆಶಾ ಕಾರ್ಯಕರ್ತೆಯರಿಗೆಹೆಚ್ಚಿನ ವೇತನ ನಿಗದಿಪಡಿಸಬೇಕು ಎಂದುಒತ್ತಾಯಿಸಿದರು.
ಕಟ್ಟಡ ಕಾರ್ಮಿಕರಿಗೆ ಕಲ್ಯಾಣಮಂಡಳಿಯಿಂದ ಶೇ. 70 ರಷ್ಟು ಕಾರ್ಮಿಕರಿಗೆಮಾತ್ರವೇ ಗುರುತಿನ ಕಾರ್ಡ್ ನೀಡಲಾಗಿದೆ.ಹಾಗಾಗಿ ಕೊರೊನಾ ಸಂದರ್ಭದಲ್ಲಿ ಅನೇಕರಿಗೆಸರ್ಕಾರದ ಸಹಾಯ ಪಡೆಯಲಿಕ್ಕೆ ಆಗಲಿಲ್ಲ.ಕಾರ್ಮಿಕ ಇಲಾಖೆ ಮೂಲಕವೇಆಂದೋಲನ ಕೈಗೊಂಡು ಉಚಿತವಾಗಿಗುರುತಿನ ಪತ್ರ ನೀಡುವ ವ್ಯವಸ್ಥೆ ಮಾಡುವಮೂಲಕ ಅನುಕೂಲ ಮಾಡಿಕೊಡಬೇಕುಎಂದು ಒತ್ತಾಯಿಸಿದರು.
ರಾಜ್ಯದಲ್ಲಿ 34 ಸಾವಿರದಷ್ಟು ಪೌರ ಕಾರ್ಮಿಕರುಕಾಯಂ ಆಗಿಲ್ಲ. ಕೂಡಲೇ ಎಲ್ಲರನ್ನೂ ಕಾಯಂಮಾಡಬೇಕು. ಆಂಧ್ರಪ್ರದೇಶ, ತೆಲಂಗಾಣಮಾದರಿಯಲ್ಲಿ ತಮಟೆ ಕಲಾವಿದರಿಗೆ ಮಾಸಿಕ3 ಸಾವಿರ ಮಾಸಾಶನ ನೀಡುವಂತಾಗಬೇಕು.ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆಒಳ ಮೀಸಲಾತಿ ಒದಗಿಸಬೇಕು ಎಂದುಒತ್ತಾಯಿಸಿದರು.
ಕಳೆದ 50 ವರ್ಷದಿಂದ ಕೆಲಸ ಮಾಡುತ್ತಿರುವಗ್ರಾಮ ಸಹಾಯಕರಿಗೆ 20 ಸಾವಿರ ವೇತನನಿಗದಿಪಡಿಸಬೇಕು. ಸರ್ಕಾರ ಮತ್ತು ರೈತರನಡುವೆ ಸಂಪರ್ಕ ಸೇತುವೆಯಾಗಿ ಕೆಲಸಮಾಡುತ್ತಿದ್ದ ರೈತ ಅನುವುಗಾರರನ್ನು ಮರುನೇಮಕ ಮಾಡಿಕೊಳ್ಳಬೇಕು ಎಂಬುದುವೇದಿಕೆಯ ಒತ್ತಾಯ ಎಂದು ತಿಳಿಸಿದರು. ವೇದಿಕೆರಾಜ್ಯ ಅಧ್ಯಕ್ಷ ಬಿ.ಸಿ. ಸಾಗರ್, ಪ್ರಧಾನ ಕಾರ್ಯದರ್ಶಿಗುರುಶಾಂತಪ್ಪ, ಮರಿಯಣ್ಣ, ಜಿಲ್ಲಾ ಅಧ್ಯಕ್ಷರಮೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
MUST WATCH
ಹೊಸ ಸೇರ್ಪಡೆ
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.