ಕೋವಿಡ್-19 ಲಾಕ್ ಡೌನ್: ದಾವಣಗೆರೆಯಲ್ಲಿ ಬಹುತೇಕ ದಿಗ್ಭಂದನ
Team Udayavani, Mar 27, 2020, 5:26 PM IST
ದಾವಣಗೆರೆ: ಕೋವಿಡ್-19 ವೈರಸ್ ತಡೆಯುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಲಾಕ್ ಡೌನ್ ಬೆಂಬಲವಾಗಿ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯ ಹಳೆಯ ಭಾಗದ ಬಹುತೇಕ ಮುಖ್ಯ ರಸ್ತೆ, ಓಣಿಗಳ ಜನರು ಸ್ವಯಂ ದಿಗ್ಭಂದನಕ್ಕೆ ಒಳಗಾಗಿದ್ದಾರೆ. ಬಂಬೂ ಬಜಾರ್, ಬೇತೂರು ರಸ್ತೆ, ಆಜಾದ್ ನಗರ ಒಳಗೊಂಡಂತೆ ಬಹುತೇಕ ಕಡೆ ರಸ್ತೆ ಬಂದ್ ಮಾಡಲಾಗಿದೆ.
ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಲಾಕ್ ಡೌನ್ ಮಾಡಿದೆ. ಜನರು ಯಾವುದೇ ಕಾರಣಕ್ಕೂ ಹೊರಗೆ ಓಡಾಡುವಂತಿಲ್ಲ ಎಂದು ಹೇಳುತ್ತಿದೆ. ಆದರೂ, ಜನರು ಸುಖಾಸುಮ್ಮನೆ ಓಡಾಡುತ್ತಲೇ ಇದ್ದಾರೆ. ಯಾರಿಗೆ ಗೊತ್ತು ಯಾರಿಗೆ ಏನಿದಿಯೋ. ಹಾಗಾಗಿ ನಾವೇ ಓಣಿ ಜನರು ಸೇರಿಕೊಂಡು ರಸ್ತೆ ಬಂದ್ ಮಾಡಿದ್ದೇವೆ. ತೀರಾ ಅರ್ಜೆಂಟ್ ಇದ್ದರೆ ಮಾತ್ರ ಓಡಾಡುವುದಕ್ಕೆ ಜಾಗ ಬಿಟ್ಟುಕೊಂಡಿದ್ದೇವೆ. ಯಾರಿಗೆ ಏನೇ ಬೇಕಾದರೂ ಒಬ್ಬರು ಹೊರಗೆ ಹೋಗಿ ತಂದು ಕೊಡುತ್ತೇವೆ. ನಮ್ ಮೊಬೈಲ್ ನಂಬರ್ ಕೊಟ್ಟಿದ್ದೇವೆ. ಬೇಕಾದವರು ಕಾಲ್ ಮಾಡ್ತಾರೆ. ಅವರಿಗೆ ಬೇಕಾದನ್ನು ತಂದು ಕೊಡಲಾಗುವುದು ಎನ್ನುತ್ತಾರೆ ಮಟ್ಟಿಕಲ್ ಸಮೀಪದ ಓಣಿಯ ಯುವಕರು.
ಕೋವಿಡ್-19 ವೈರಸ್ ಯಾರಿಗೂ ಹರಡಬಾರದು. ನಮಗೆ ತೊಂದರೆ ಆಗಬಾರದು. ನಮ್ಮಿಂದ ಬೇರೆಯವರಿಗೆ ಸಹ ತೊಂದರೆ ಆಗಬಾರದು. ಆ ಕಾರಣಕ್ಕೆ ಈ ವ್ಯವಸ್ಥೆ ಮಾಡಿಕೊಂಡಿದ್ದೇವೆ. ನಮ್ಮ ಓಣಿ ಜನ ಬೇರೆ ಕಡೆ ಹೋಗೊಲ್ಲ. ನಮ್ ಓಣಿಗೆ ಬೇರೆ ಕಡೆಯವರು ಬರುವಂತಿಲ್ಲ. ಯಾರೂ ಬಂದರೂ ಈ ಗೇಟ್ ಆ ಕಡೆ ನಿಂತು ಮಾತಾಡಿಕೊಂಡು, ನೋಡಿಕೊಂಡು ಹೋಗಬೇಕು ಅಷ್ಟೇ ಎಂದು ಹೇಳುತ್ತಾರೆ.
ಇಲ್ಲಿ ಸಣ್ಣ ಮಕ್ಕಳು ಇವೆ. ವಯಸ್ಸಾದವರು ಇದಾರೆ. ಏನಾದರೂ ಆದರೆ ಏನು ಗತಿ ಎಂದು ನಾವೇ ರೋಡ್ ಬಂದ್ ಮಾಡುವುದಕ್ಕೆ ಹೇಳಿದ್ದೀವಿ. ನಾವು ಬೇರೆ ಕಡೆ ಹೋಗುವುದಿಲ್ಲ. ನಮ್ಮ ಕಡೆ ಬೇರೆಯವರಿಗೆ ಅವಕಾಶ ಇಲ್ಲ ಎಂದು ಇಲ್ಲಿನ ಜಯಲಕ್ಷ್ಮಿ ಹೇಳಿದರು.
ಬೇತೂರು ರಸ್ತೆಯ ಮುದ್ದಾಭೋವಿ ಕಾಲೋನಿಯ ಪ್ರಮುಖ ರಸ್ತೆಯನ್ನು ಬಂದ್ ಮಾಡಲಾಗಿದೆ. ಹಳೆಯ ದಾವಣಗೆರೆಯ ಬಹುತೇಕ ಕಡೆ ಈ ರೀತಿಯ ವಾತಾವರಣ ಸಾಮಾನ್ಯ ಎನ್ನುವಂತಾಗಿದೆ.
ರಸ್ತೆ ಬಂದ್ ಎನ್ನುವುದು ಸಾಮೂಹಿಕ ಸನ್ನಿಯಂತೆ ಕಂಡರೂ ಜನ ಸಾಮಾನ್ಯರು ಕೋವಿಡ್-19 ವೈರಸ್ ಎಂಬ ಮಹಾಮಾರಿಯ ಅಬ್ಬರಕ್ಕೆ ಅಕ್ಷರಶಃ ಬೆದರಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಲಾಕ್ ಡೌನ್ ಬಗ್ಗೆ ಕೆಲವರು ಆಕ್ಷೇಪ ಮಾಡಿದರೂ ಒಟ್ಟಾರೆಯಾಗಿ ಜಾಗೃತಿ ಮೂಡುತ್ತಿದೆ. ಸರ್ಕಾರದ ಪ್ರಯತ್ನಕ್ಕೆ ತಮ್ಮದೇ ಆದ ರೀತಿಯಲ್ಲಿ ಕೈ ಜೋಡಿಸುವ ಕೆಲಸ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jaiswal: ಚಾಂಪಿಯನ್ಸ್ ಟ್ರೋಫಿಗೆ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ಸರಣಿಯಲ್ಲೇ ಪದಾರ್ಪಣೆ?
Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!
Dharmasthala: ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್ ಧನ್‌ಕರ್
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.