ಹೊನ್ನಾಳಿ-ನ್ಯಾಮತಿ: 533 ಮತದಾರರಿಂದ ಹಕ್ಕು ಚಲಾವಣೆ
Team Udayavani, Dec 11, 2021, 7:26 PM IST
ಹೊನ್ನಾಳಿ: ಶಿವಮೊಗ್ಗ ವಿಧಾನ ಪರಿಷತ್ತಿಗೆಶುಕ್ರವಾರ ನಡೆದ ಮತದಾನ ಪ್ರಕ್ರಿಯೆ ಬೆಳಗ್ಗೆ8ರಿಂದಲೇ ಪ್ರಾರಂಭವಾದರೂ ಹೊನ್ನಾಳಿ,ನ್ಯಾಮತಿ ತಾಲೂಕಿನಾದ್ಯಂತ ಗ್ರಾಪಂ ಹಾಗೂಪುರಸಭಾ ಸದಸ್ಯರು ಬೆಳಗ್ಗೆ 10ರ ನಂತರಮತ ಚಲಾಯಿಸಲು ಆಗಮಿಸಿದ ಪ್ರಯುಕ್ತಮತದಾನ ಮಂದಗತಿಯಲ್ಲಿ ಸಾಗಿತು.ಅವಳಿ ತಾಲೂಕಿನ 45 ಗ್ರಾಪಂ ಹಾಗೂಪುರಸಭೆ 1 ಮತಗಟ್ಟೆಯಲ್ಲಿ ಮಧ್ಯಾಹ್ನ 3.30ಕ್ಕೆಎಲ್ಲ ಸದಸ್ಯರು ಮತದಾನ ಮಾಡಿದರು.
ಹೊನ್ನಾಳಿ ತಾಲೂಕಿನ ಹರಳಹಳ್ಳಿ ಗ್ರಾಪಂನಮತಗಟ್ಟೆಯಲ್ಲಿ ಮಾತ್ರ ಬೆಳಗ್ಗೆ 9.55ಕ್ಕೆ ಎಲ್ಲಸದಸ್ಯರು ಬಂದು ಮತದಾನ ಮಾಡಿದರು.ಬಾಕಿ ಇರುವ ಎಲ್ಲ ಗ್ರಾಪಂನಲ್ಲಿ ಬೆಳಗ್ಗೆ 10.30ರಂತರ ಪ್ರಾರಂಭವಾಯಿತು ಎಂದು ನೋಡಲ್‌ಚುನಾವಣಾ ಧಿಕಾರಿ ತಿಳಿಸಿದರು.
ಶುಕ್ರವಾರ ಅವಳಿ ತಾಲೂಕಿನಲ್ಲಿ ಬಹಳಷ್ಟುಮದುವೆ ಹಾಗೂ ಶುಭ ಕಾರ್ಯಕ್ರಮಗಳುಇದ್ದುದರಿಂದ ಗ್ರಾಪಂ ಸದಸ್ಯರು ಮದುವೆಮುಗಿಸಿ ಬಂದು ಮತದಾನ ಮಾಡಿದರು. 46ಮತಗಟ್ಟೆಯಲ್ಲಿ ಶಾಸಕ, ಪುರಸಭಾ ಸದಸ್ಯರುಹಾಗೂ ಗ್ರಾಪಂ ಸದಸ್ಯರು ಸೇರಿ ಒಟ್ಟು 533ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.
ಬಿಗಿ ಬಂದೋಬಸ್ತ್: ಸಿಪಿಐ ದೇವರಾಜ್‌ನೇತೃತ್ವದಲ್ಲಿ ಅವಳಿ ತಾಲೂಕಿನ 46 ಮತಗಟ್ಟೆಗಳಲ್ಲಿಯಾವುದೇ ಅವಘಡ ಸಂಭವಿಸದಂತೆಪೊಲೀಸ್ ಸಿಬ್ಬಂದಿ ನೇಮಿಸಲಾಗಿತ್ತು.ಮತದಾನ ಮಾಡಲು ಬಂದವರು ಆಗೊಮ್ಮೆಈಗೊಮ್ಮೆ ಆಗಮಿಸಿದ್ದರಿಂದ ಮತದಾನಶಾಂತಿಯುತವಾಗಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.