ಪ್ರತಿ ಗ್ರಾಮದಲ್ಲೂ ಕನ್ನಡ ಧ್ವಜಸ್ಥಂಭ ನಿರ್ಮಾಣ
Team Udayavani, Dec 14, 2021, 5:04 PM IST
ಹೊನ್ನಾಳಿ: ಜಿಲ್ಲೆಯ ಪ್ರತಿಯೊಂದುಗ್ರಾಮದಲ್ಲೂ ಶಾಶ್ವತ ಕನ್ನಡ ಧ್ವಜಸ್ತಂಭನಿರ್ಮಾಣ ಮಾಡಲು ಯೋಜನೆರೂಪಿಸಿರುವುದಾಗಿ ಕನ್ನಡ ಸಾಹಿತ್ಯ ಪರಿಷತ್‌ಜಿಲ್ಲಾಧ್ಯಕ್ಷ ವಾಮದೇವಪ್ಪ ಹೇಳಿದರು.
ನ್ಯಾಮತಿ ಪಟ್ಟಣದ ಕರ್ನಾಟಕಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಜಿಲ್ಲಾಕಸಾಪ ಅಧ್ಯಕ್ಷರಾಗಲು ಮತ ನೀಡಿದಸದಸ್ಯರಿಗೆ ಅಭಿನಂದನೆ ಮತ್ತು ತಾಲೂಕುಕಸಾಪ ಅಧ್ಯಕ್ಷರ ನೇಮಕ ಮಾಡುವಸಮಾಲೋಚನಾ ಸಭೆಯಲ್ಲಿ ಅವರುಮಾತನಾಡಿದರು. ಕನ್ನಡ ಭಾಷೆಯಪ್ರಾತಿನಿ ಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯಪರಿಷತ್ ಚಟುವಟಿಕೆಗಳು ಪ್ರತಿಯೊಂದು ಗ್ರಾಮದಲ್ಲೂ ನಡೆಯಬೇಕು, ಆಯಾಗ್ರಾಮಪಂಚಾಯಿತಿಗಳ ಸಹಕಾರದೊಂದಿಗೆ ಕನ್ನಡಧ್ವಜಸ್ತಂಬ ನಿರ್ಮಾಣ ಮಾಡಲು ತಾಲೂಕು ಘಟಕಗಳು ಪ್ರಯತ್ನಿಸಬೇಕು ಎಂದರು.
ರಾಜ್ಯ ಕಸಾಪ ಅಧ್ಯಕ್ಷ ಮಹೇಶ ಜೋಶಿಅವರು ಸಾಹಿತ್ಯ ಪರಿಷತ್‌ನ ಬೆಳವಣಿಗೆಗಾಗಿಕನ್ನಡ ಭಾಷೆಗೆ ಘನತೆಯನ್ನು ತರುವವಿಚಾರದಲ್ಲಿ ಹೊಸ ಬದಲಾವಣೆಗಳನ್ನುತರುವ ಬಗ್ಗೆ ಆಲೋಚನೆ ನಡೆದಿದ್ದು, ಇದಕ್ಕಾಗಿಹೊಸದಾದ ಬೈಲಾ ಸಿದ್ಧಪಡಿಸಲಾಗುತ್ತಿದೆ.
ಫೆ.6 ರಂದು ಕಾಗಿನೆಲೆಯಲ್ಲಿ ರಾಜ್ಯ ಕಸಾಪಸರ್ವಸದಸ್ಯರ ಸಭೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿನಡೆಯಲಿದೆ. ಪ್ರತಿ ತಾಲೂಕುಗಳಲ್ಲೂ ಕನ್ನಡಭವನ ನಿರ್ಮಾಣಕ್ಕೆ ಬಜೆಟ್‌ನಲ್ಲಿ 120 ಕೋಟಿರೂ. ಮೀಸಲು, ಕನ್ನಡ ಭವನದಲ್ಲಿ ಕಸಾಪಸಂಸ್ಥಾಪಕ ನಾಲ್ವಡಿ ಕೃಷ್ಣರಾಜಒಡೆಯರ್‌ಭಾವಚಿತ್ರ ಮತ್ತು ಸಂಸ್ಥಾಪಕ ವರ್ಷ1915 ಇರುವಂತೆ ಮಾಡಬೇಕು ಎಂದುಒತ್ತಾಯಿಸಿದರು.ನಿಕಟಪೂರ್ವ ಅಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ ಕುರ್ಕಿ ಮಾತನಾಡಿ,ಜಿಲ್ಲೆಯ ಕನ್ನಡ ಭವನ ನಿರ್ಮಾಣಕ್ಕೆ2011ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 1 ಕೋಟಿ ರೂ.ಅನುದಾನ ನೀಡಿದ್ದಾರೆ ಎಂದರು.
ತಾಲೂಕುಕಸಾಪ ನಿಕಟಪೂರ್ವ ಅಧ್ಯಕ್ಷ ಜಿ. ನಿಜಲಿಂಗಪ್ಪಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷಎ.ಆರ್.ಉಜ್ಜನಪ್ಪ, ದಿಳ್ಯಪ್ಪ, ಎನ್.ರಾಜು,ಹರಿಹರ ತಾಲೂಕು ನಿಕಟಪೂರ್ವ ಅಧ್ಯಕ್ಷರೇವಣಸಿದ್ದಪ್ಪ ಅಂಗಡಿ ಇದ್ದರು. ಜಿಲ್ಲಾಧ್ಯಕ್ಷವಾಮದೇವಪ್ಪ ಅವರು ತಾಲೂಕು ಕಸಾಪಅಧ್ಯಕ್ಷರಾಗಲು ಆûಾಂಕ್ಷೆ ಉಳ್ಳವರು ತಮ್ಮಅಭಿಪ್ರಾಯ ತಿಳಿಸುವಂತೆ ಸೂಚಿಸಿದಾಗ ಎಲ್ಲ ಸದಸ್ಯರೂ ಡಿ.ಎಂ. ಹಾಲಾರಾಧ್ಯಅವರ ಹೆಸರನ್ನು ಸೂಚಿಸಿದರು.
ತಿಪ್ಪೇಸ್ವಾಮಿಆಚೆಮನೆ ನಾಡಗೀತೆ ಹಾಡಿದರು. ಸಿ.ಜಿ.ಚೈತ್ರಾ ಮಾತನಾಡಿದರು. ಕೋಡಿಕೊಪ್ಪಬಸವರಾಜ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.